ಟಿ-20 ವಿಶ್ವಕಪ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದವರ ಪೈಕಿ ಒಬ್ಬ ಭಾರತೀಯ..!

T20 ವಿಶ್ವಕಪ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್ ಮನ್ ಗಳ ಮಾಹಿತಿ ಇಲ್ಲಿದೆ.

ಕ್ರಿಕೆಟ್ ಪ್ರೇಮಿಗಳು ಟಿ-20 ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸುತ್ತಾ ಭರ್ಜರಿ ಮನರಂಜನೆ ಪಡೆಯುತ್ತಿದ್ದಾರೆ. ಈ ಚುಟುಕು ಕ್ರಿಕೆಟ್ ಕ್ರೀಡಾಸಕ್ತರ ಪಾಲಿಗೆ ಹಬ್ಬದಂತೆ. ಅದರಲ್ಲೂ ಟಿ-20 ವಿಶ್ವಕಪ್ ಕ್ರಿಕೆಟ್‌ನ ಅದ್ಭುತವೆಂದರೆ ತಪ್ಪಾಗಲಾರದು. ಇಲ್ಲಿ ನಾವು ಬೌಂಡರಿ ಮತ್ತು ಸಿಕ್ಸರ್‌ಗಳ ಸುರಿಮಳೆಯನ್ನು ಕಾಣಬಹುದು. ಸ್ಫೋಟಕ ಆಟಕ್ಕೆ ಹೆಸರುವಾಸಿಯಾಗಿರುವ ಅನೇಕ ಸ್ಟಾರ್ ಬ್ಯಾಟ್ಸ್ ಮನ್ ಗಳು ಚುಟುಕು ಕ್ರಿಕೆಟ್ ನಲ್ಲಿ ಅನೇಕ ದಾಖಲೆಗಳನ್ನು ನಿರ್ಮಿಸಿದ್ದಾರೆ. T20 ವಿಶ್ವಕಪ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್ ಮನ್ ಗಳ ಮಾಹಿತಿ ಇಲ್ಲಿದೆ. ಇವರ ಪೈಕಿ ಒಬ್ಬ ಭಾರತೀಯನು ಇದ್ದಾನೆಂಬುದೇ ವಿಶೇಷ. ಅವರ್ಯಾರು ಎಂಬುದನ್ನು ತಿಳಿದುಕೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಶ್ರೀಲಂಕಾದ ಮಹೇಲಾ ಜಯವರ್ಧನೆ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ ಮನ್‌ಗಳಲ್ಲಿ ಒಬ್ಬರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಹೆಸರಿನಲ್ಲಿ 54 ಶತಕಗಳಿವೆ. ಮಹೇಲಾ ಟಿ-20 ವಿಶ್ವಕಪ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ್ದಾರೆ. ಅವರು 31 ಪಂದ್ಯಗಳಲ್ಲಿ 1,016 ರನ್ ಗಳಿಸಿದ್ದಾರೆ, ಇದರಲ್ಲಿ 1 ಭರ್ಜರಿ ಶತಕವೂ ಸೇರಿದೆ. ಟಿ-20 ವಿಶ್ವಕಪ್‌ನಲ್ಲಿ ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಬ್ಯಾಟ್ಸ್‌ ಮನ್. ಮಹೇಲಾ ನಿವೃತ್ತಿಯಾಗಿದ್ದಾರೆ.

2 /5

ಕ್ರಿಸ್ ಗೇಲ್ ಹೆಸರನ್ನು ಕೇಳದ ಯಾವುದೇ ವ್ಯಕ್ತಿ ಕ್ರಿಕೆಟ್ ನೋಡುವುದಿಲ್ಲ. ಕ್ರಿಸ್ ಗೇಲ್ ಅವರನ್ನು ಫ್ಯಾನ್ಸ್ ‘ಯೂನಿವರ್ಸ್ ಬಾಸ್’ ಎಂದು ಕರೆಯುತ್ತಾರೆ. ಮೇಲಿಂದ ಮೇಲೆ ಸಿಕ್ಸರ್‌ಗಳನ್ನು ಬಾರಿಸುವ ಇವರ ಕಲೆ ಎಲ್ಲರಿಗೂ ತಿಳಿದಿದೆ. ಟಿ-20 ವಿಶ್ವಕಪ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದವರಲ್ಲಿ ಗೇಲ್ 2ನೇ ಸ್ಥಾನದಲ್ಲಿದ್ದಾರೆ. ಅವರು 31 ಪಂದ್ಯಗಳಲ್ಲಿ 949 ರನ್ ಗಳಿಸಿದ್ದಾರೆ, ಟಿ-20 ವಿಶ್ವಕಪ್‌ನಲ್ಲಿ 2 ಶತಕಗಳನ್ನು ಭಾರಿಸಿರುವ ಏಕೈಕ ಬ್ಯಾಟ್ಸ್‌ ಮನ್.

3 /5

ತಿಲಕರತ್ನೆ ದಿಲ್ಶಾನ್ ಶ್ರೀಲಂಕಾದ ಅತ್ಯುತ್ತಮ ಬ್ಯಾಟ್ಸ್‌ ಮನ್ ಆಗಿದ್ದಾರೆ. ಇವರು ಟಿ-20 ವಿಶ್ವಕಪ್‌ನ 35 ಪಂದ್ಯಗಳಲ್ಲಿ 897 ರನ್ ಗಳಿಸಿದ್ದಾರೆ. ದಿಲ್ ಸ್ಕೂಪ್ ಎಂಬ ಸ್ಟ್ರೋಕ್ ಅನ್ನು ದಿಲ್ಶಾನ್ ಕಂಡುಹಿಡಿದಿದ್ದರು. ದಿಲ್ಶಾನ್ ಅವರ ಶ್ರೇಷ್ಠ ಬ್ಯಾಟಿಂಗ್ ಪ್ರೇಕ್ಷಕರ ಮನಸೂರೆಗೊಂಡಿದೆ. ಸದ್ಯ ಈ ಕ್ರಿಕೆಟಿಗ ನಿವೃತ್ತಿಯಾಗಿದ್ದಾರೆ.

4 /5

ಟೀಂ ಇಂಡಿಯಾ ನಾಯಕ, ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಪ್ರಸ್ತಕ್ತ ಯುಗದ ಅತ್ಯುತ್ತಮ ಬ್ಯಾಟ್ಸ್‌ ಮನ್. ಕೊಹ್ಲಿ ಎಲ್ಲಾ 3 ಮಾದರಿಯ ಕ್ರಿಕೆಟ್ ನಲ್ಲಿ ರನ್ ಗಳ ಹೊಳೆಯನ್ನೇ ಹರಿಸಿದ್ದಾರೆ. ಟಿ-20 ವಿಶ್ವಕಪ್‌ನಲ್ಲಿ ಕೇವಲ 17 ಪಂದ್ಯಗಳಲ್ಲಿ 85ರ ಸರಾಸರಿಯಲ್ಲಿ 834 ರನ್ ಗಳಿಸಿದ್ದಾರೆ. 2014 ಮತ್ತು 2016ರ ವಿಶ್ವಕಪ್‌ನಲ್ಲಿ ಕೊಹ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದರು.

5 /5

ಎಬಿ ಡಿವಿಲಿಯರ್ಸ್ ಅವರನ್ನು ವಿಶ್ವದ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ ಮನ್ ಎಂದು ಪರಿಗಣಿಸಲಾಗಿದೆ. ಟಿ-20 ವಿಶ್ವಕಪ್‌ನಲ್ಲಿ 30 ಪಂದ್ಯಗಳಲ್ಲಿ 717 ರನ್ ಗಳಿಸಿದ್ದಾರೆ. ಡಿವಿಲಿಯರ್ಸ್ ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್ ಅಟ್ಟುವ ಮೂಲಕ ಪ್ರೇಕ್ಷಕರನ್ನು ಮನರಂಜಿಸಿದ್ದರು. ಎಬಿ ಡಿವಿಲಿಯರ್ಸ್ ಆಟವೆಂದರೆ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದೂಟವಿದ್ದಂತೆ.