Highest Sold Bike: ಎಲ್ಲಕ್ಕಿಂತ ಹೆಚ್ಚು ಮಾರಾಟವಾಗುತ್ತಿದೆ Hero ಕಂಪನಿಯ ಈ ಬೈಕ್, ಒಂದೇ ತಿಂಗಳಿನಲ್ಲಿ ಲಕ್ಷಾಂತರ ಜನರಿಂದ ಖರೀದಿ

Highest Sold Bike: ಆಗಸ್ಟ್ ತಿಂಗಳಲ್ಲಿ ಮೋಟಾರ್ ಸೈಕಲ್ ಮಾರಾಟದಲ್ಲಿ ಭಾರಿ ಇಳಿಕೆಯನ್ನು ಗಮನಿಸಲಾಗಿದೆ.  ಟಾಪ್ 10 ಮೋಟಾರ್ ಸೈಕಲ್ ಮಾರಾಟದ ಅಂಕಿಅಂಶಗಳನ್ನು ನೋಡಿದರೆ, ಕೇವಲ 7,13,939 ಬೈಕ್‌ಗಳನ್ನು ಶೇ.16.31 ಇಳಿಕೆಯೊಂದಿಗೆ ಮಾರಾಟ ಮಾಡಲಾಗಿದೆ.

Highest Sold Bike: ಆಗಸ್ಟ್ ತಿಂಗಳಲ್ಲಿ ಮೋಟಾರ್ ಸೈಕಲ್ ಮಾರಾಟದಲ್ಲಿ ಭಾರಿ ಇಳಿಕೆಯನ್ನು ಗಮನಿಸಲಾಗಿದೆ.  ಟಾಪ್ 10 ಮೋಟಾರ್ ಸೈಕಲ್ ಮಾರಾಟದ ಅಂಕಿಅಂಶಗಳನ್ನು ನೋಡಿದರೆ, ಕೇವಲ 7,13,939 ಬೈಕ್‌ಗಳನ್ನು ಶೇ.16.31 ಇಳಿಕೆಯೊಂದಿಗೆ ಮಾರಾಟ ಮಾಡಲಾಗಿದೆ. ಅಗ್ರ 10 ರಲ್ಲಿ ಕೇವಲ 3 ಬೈಕ್‌ಗಳು ಮಾತ್ರ ಇವೆ, ಕಳೆದ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಇದು ಬೆಳವಣಿಗೆಯನ್ನು ದಾಖಲಿಸಿದೆ. ಇವುಗಳಲ್ಲಿ Hero Splendor, Honda CB shine ಮತ್ತು  Bajaj Platina ಶಾಮೀಲಾಗಿವೆ. ಹಾಗಾದರೆ ಆಗಸ್ಟ್ ನಲ್ಲಿ ಮಾರಾಟವಾದ ಟಾಪ್ 5 ಮೋಟಾರ್ (Top Selling Bikes) ಸೈಕಲ್ ಗಳ ಬಗ್ಗೆ ತಿಳಿಯೋಣ ಬನ್ನಿ.

 

ಇದನ್ನೂ ಓದಿ- New Bike Launch News: ಹಬ್ಬಕ್ಕೆ ಬೈಕ್ ಖರೀದಿಸಬೇಕೆ? Pulsar-Hondaಗೆ ಟಕ್ಕರ್ ನೀಡಲು ರೋಡಿಗಿಳಿಯಲಿದೆ ಈ ಕಡಕ್ ಬೈಕ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಎಲ್ಲಕ್ಕಿಂತ ಹೆಚ್ಚು ಮಾರಾಟವಾಗಿದೆ ಹೀರೋ ಕಂಪನಿಯ ಈ ಬೈಕ್ - Hero Splendor ಆಗಸ್ಟ್‌ನಲ್ಲಿ ಹೆಚ್ಚು ಮಾರಾಟವಾದ ಬೈಕ್ ಆಗಿದೆ. ಆಗಸ್ಟ್ 2021 ರಲ್ಲಿ, ಈ ಬೈಕಿನ 2,41,703 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ, ಇದು ಆಗಸ್ಟ್ 2020 ರಲ್ಲಿ 2,32,301 ಯುನಿಟ್‌ಗಳಷ್ಟಾಗಿತ್ತು. ಅಂದರೆ, ಹೀರೋ ಸ್ಪ್ಲೆಂಡರ್ ವಾರ್ಷಿಕ ಶೇ.4.05 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಈ ಬೈಕ್ ಮೂರು ಮಾದರಿಗಳಲ್ಲಿ ಬರುತ್ತದೆ.  - ಹೀರೋ ಸ್ಪ್ಲೆಂಡರ್ ಪ್ಲಸ್ (100 ಸಿಸಿ), ಹೀರೋ ಸ್ಪ್ಲೆಂಡರ್ ಐ ಸ್ಮಾರ್ಟ್ (110 ಸಿಸಿ) ಮತ್ತು ಹೀರೋ ಸೂಪರ್ ಸ್ಪ್ಲೆಂಡರ್ (125 ಸಿಸಿ). 100 ಸಿಸಿ ಆವೃತ್ತಿಯ ಬೆಲೆಗಳು ರೂ 63,750 ರಿಂದ ಆರಂಭವಾಗುತ್ತವೆ (ಎಕ್ಸ್ ಶೋರೂಂ, ದೆಹಲಿ).

2 /5

2. HondaCB Shine ಶೇ. 22.42ರಷ್ಟು ಬೆಳವಣಿಗೆ ದಾಖಲಿಸಿದೆ - ಆಗಸ್ಟ್ 2021 ರಲ್ಲಿ ಹೋಂಡಾಕಂಪನಿಯ  ಸಿಬಿ ಶೈನ್ ಎರಡನೇ ಅತಿ ಹೆಚ್ಚು ಮಾರಾಟವಾದ ಬೈಕ್ ಆಗಿ ಹೊರಹೊಮ್ಮಿದೆ. ಕಳೆದ ತಿಂಗಳು, ಈ ಬೈಕಿನ 1,29,926 ಯುನಿಟ್‌ಗಳನ್ನು ಮಾರಾಟ ಮಾರಾಟ ಮಾಡಲಾಗಿತ್ತು. ಇದು ಆಗಸ್ಟ್ 2020 ರಲ್ಲಿ 1,06,133 ಯುನಿಟ್‌ಗಳಷ್ಟಿತ್ತು. ಅಂದರೆ, ಸಿಬಿ ಶೈನ್ ವಾರ್ಷಿಕ ಬೆಳವಣಿಗೆ ಶೇ. 22.42 ಬೆಳವಣಿಗೆ ದಾಖಲಿಸಿದೆ.  

3 /5

3. Hero HF Deluxe -  ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಬೈಕಿನ ಮಾರಾಟವು ವಾರ್ಷಿಕ ಆಧಾರದ ಮೇಲೆ ಶೇಕಡಾ 35 ರಷ್ಟು ಕುಸಿತವನ್ನು ದಾಖಲಿಸಿದೆ. ಆಗಸ್ಟ್ 2021 ರಲ್ಲಿ 1,14,575 ಯುನಿಟ್‌ಗಳನಡೆದಿದ್ದರೆ, ಆಗಸ್ಟ್ 2020 ರ ಹೋಲಿಕೆಯಲ್ಲಿ, ಇದು 1,77,168 ಯುನಿಟ್ ಗಳಷ್ಟಾಗಿತ್ತು.

4 /5

4. Bajaj Pulsar - ಈ ಪಟ್ಟಿಯ ನಾಲ್ಕನೇ ಸ್ಥಾನದಲ್ಲಿ ಬಜಾಜ್ ಕಂಪನಿಯ ಪಲ್ಸರ್ ಬೈಕ್ ಇದೆ. ಕಳೆದ ತಿಂಗಳು ಬಜಾಜ್ ಪಲ್ಸರ್ ನ 66,107 ಯೂನಿಟ್ ಗಳ ಮಾರಾಟ ನಡೆಸಲಾಗಿದೆ. ಆಗಸ್ಟ್ 2020ರ ಹೋಲಿಕೆಯಲ್ಲಿ (87,202 ಯೂನಿಟ್ಸ) ಇದು ಶೇ. 24.19ರಷ್ಟು ಕಮ್ಮಿಯಾಗಿದೆ. 

5 /5

5. ಕಮಾಲ್ ಮಾಡಿದ Bajaj Platina -  ಬಜಾಜ್ ಪ್ಲಾಟಿನಾ ಆಗಸ್ಟ್‌ನಲ್ಲಿ ವರ್ಷದಿಂದ ವರ್ಷಕ್ಕೆ ಅತ್ಯಧಿಕ ಬೆಳವಣಿಗೆಯನ್ನು ಸಾಧಿಸಿದ ಬೈಕ್ ಆಗಿದೆ. ಕಳೆದ ತಿಂಗಳು 56,615 ಬಜಾಜ್ ಪಲ್ಸರ್ ಅನ್ನು ಖರೀದಿಸಲಾಗಿದೆ, ಇದು ಆಗಸ್ಟ್ 2020 (40,294 ಯುನಿಟ್) ರ ತುಲನೆಯಲ್ಲಿ ಶೇ. 40.50 ಹೆಚ್ಚಾಗಿದೆ.