New Bike Launch News: ಹಬ್ಬಕ್ಕೆ ಬೈಕ್ ಖರೀದಿಸಬೇಕೆ? Pulsar-Hondaಗೆ ಟಕ್ಕರ್ ನೀಡಲು ರೋಡಿಗಿಳಿಯಲಿದೆ ಈ ಕಡಕ್ ಬೈಕ್

New Bike Launch News: ಟಿವಿಎಸ್ ನ ಈ 125 ಸಿಸಿ ಬೈಕ್ ನಲ್ಲಿ ಆಯಿಲ್ ಕೂಲ್ಡ್ ಎಂಜಿನ್ ಇರುವ ಸಾಧ್ಯತೆ ಇದೆ. ಈ ಬೈಕ್ ಹೋಂಡಾದ ಶೈನ್ ಎಸ್ಪಿ ಮತ್ತು ಬಜಾಜ್ ಪಲ್ಸರ್ 125 ಸಿಸಿಯೊಂದಿಗೆ ನೇರ ಪೈಪೋಟಿ ನೀಡಲಿದೆ.

Written by - Nitin Tabib | Last Updated : Sep 15, 2021, 09:14 PM IST
  • ಟಿವಿಎಸ್ ಕಂಪನಿಯ 125 ಸಿಸಿ ಬೈಕ್
  • ಸ್ಪೋರ್ಟ್ಸ್ ಬೈಕ್ ರೀತಿಯ ಲುಕ್
  • ಪಲ್ಸರ್ ಹೊಂಡಾ ಬೈಕ್ ಗಳಿಗೆ ನೇರ ಪೈಪೋಟಿ
New Bike Launch News: ಹಬ್ಬಕ್ಕೆ ಬೈಕ್ ಖರೀದಿಸಬೇಕೆ?  Pulsar-Hondaಗೆ ಟಕ್ಕರ್ ನೀಡಲು ರೋಡಿಗಿಳಿಯಲಿದೆ ಈ ಕಡಕ್ ಬೈಕ್  title=
New Bike Launch News (Representational Image)

ನವದೆಹಲಿ:  New Bike Launch News - ಹಗುರ ಮತ್ತು ಹೆಚ್ಚು ಮೈಲೇಜ್ ಹೊಂದಿರುವ ಬೈಕ್ ಖರೀದಿಸಲು ಬಯಸುವವರಿಗೆ ಒಳ್ಳೆಯ ಸುದ್ದಿಯೊಂದು ಪ್ರಕಟವಾಗಿದೆ. ಮೋಟರ್ ಸೈಕಲ್ ಕಂಪನಿ TVS, 125 ಸಿಸಿ ಸೆಗ್ಮೆಂಟ್ನಲ್ಲಿ (125CC Bike) ತನ್ನ ಹೊಚ್ಚ ಹೊಸ ಬೈಕ್ ಬಿಡುಗಡೆ ಮಾಡಲಿದೆ. ಮಾಹಿತಿಯ ಪ್ರಕಾರ, ಈ ಬೈಕ್ ಅನ್ನು ನಾಳೆ ಬಿಡುಗಡೆ ಮಾಡುವ ಸಾಧ್ಯತೆ ಇದೆ ಹಾಗೂ ಇದರ ಲುಕ್ ಸ್ಪೋರ್ಟ್ ಬೈಕ್ ರೀತಿಯಾಗಿರಲಿದೆ.

ಟೀಸರ್ ವಿಡಿಯೋದಲ್ಲಿ ಕಂಡುಬಂದ ಡಿಟೇಲ್ಸ್ 
ಈ ಬೈಕ್ ಅನ್ನು ಯಾವ ಹೆಸರಿನಿಂದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂಬುದರ ಕುರಿತು ಮಾಹಿತಿ ಇನ್ನೂ ಪ್ರಕಟವಾಗಿಲ್ಲ. ಅಷ್ಟೇ ಅಲ್ಲ ಬಿಡುಗಡೆಯ ಮೂಲಕವೇ ಇದರ ಮಾಹಿತಿ ಕೂಡ ನೀಡಲಾಗುವುದು ಎನ್ನಲಾಗಿದೆ. ಈ ಹೊಸ ಬೈಕ್ ನ ವೈಶಿಷ್ಟ್ಯಗಳ ಕುರಿತು ಇದುವರೆಗೆ ಯಾವುದೇ ಮಾಹಿತಿಗಳು ಪ್ರಕಟವಾಗಿಲ್ಲ. ಆದರೆ, ಈ ಬೈಕ್ ನ ಟೀಸರ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ-RC Renewal: 'ಹಳೆಯ ವಾಹನ ಮಾಲೀಕ'ರಿಗೆ ಬಿಗ್ ಶಾಕ್: 'RC ನವೀಕರಣ' ಫೀಸ್ ಭಾರಿ ಹೆಚ್ಚಳ!

TVS ಕಂಪನಿಯ 125 ಬೈಕ್ ನಲ್ಲಿ ಆಯಿಲ್ ಕೋಲ್ಡ್ ಇಂಜಿನ್ ಇರುವ ಸಾಧ್ಯತೆ ಇದೆ. ಈ ಬೈಕ್ ಮಾರುಕಟ್ಟೆಯಲ್ಲಿ ಹೊಂಡಾ ಸಿಬಿ ಶೈನ್ ಎಸ್.ಪಿ (Honda Shine SP 125) ಹಾಗೂ ಬಜಾಜ್ ಕಂಪನಿಯ ಪಲ್ಸರ್ 125 ಸಿಸಿ (Bajaj Pulsar NS125)ಜೊತೆಗೆ ನೇರ ಸ್ಪರ್ಧೆಗೆ ಇಳಿಯಲಿದೆ ಎನ್ನಲಾಗುತ್ತಿದೆ. ಬಿಡುಗಡೆ ಮಾಡಲಾಗಿರುವ ಟೀಸರ್ ಪ್ರಕಾರ, ಬೈಕ್ ಮುಂಭಾಗದಲ್ಲಿ LED DRL, ಸ್ಪಿಲ್ದ್ ಸೀಟ್, ಅಲಾಯ್ ವ್ಹೀಲ್, ತೆಲಿಸ್ಕೊಪಿಕ್ ಫ್ರಂಟ್ ಫೋರ್ಕ್, ಮೊನೊ ಶಾಕ್ ಹಾಗೂ LED ಟಿಲ್ ಲ್ಯಾಂಪ್ ಗಳಂತ ವೈಶಿಷ್ಟ್ಯಗಳು ಗ್ರಾಹಕರಿಗೆ ಸಿಗುವ ಸಾಧ್ಯತೆ ಇದೆ.

ಬೆಲೆ ಎಷ್ತಿರುವ ಸಾಧ್ಯತೆ ಇದೆ
ಬೈಕಿನ ಇಂಧನ ಟ್ಯಾಂಕ್ ಡ್ಯುಯಲ್ ಟೋನ್ ನಲ್ಲಿರಬಹುದು ಹಾಗೂ ಈ ಹೊಸ ಬೈಕ್ ನಾಲ್ಕು ವಿವಿಧ ಬಣ್ಣದ  ಆಯ್ಕೆಗಳಲ್ಲಿ ಅಂದರೆ ಕೆಂಪು, ನೀಲಿ, ಹಳದಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿರುವ ಸಾಧ್ಯತೆ ಇದೆ. ಬೈಕಿನಲ್ಲಿ ಪರಿಸರ ಮತ್ತು ವಿದ್ಯುತ್ ಸೂಚಕಗಳು ಕೂಡ ಇರುವ ಸಾಧ್ಯತೆ ಇದೆ. ಈ ಬೈಕ್ ಅನ್ನು ಫಿಯೆರೊ 125 ಹೆಸರಿನಲ್ಲಿ ಬಿಡುಗಡೆ ಮಾಡಲಾಗುವ ಸಾಧ್ಯತೆ ಇದೆ. ಟೀಸರ್ ಆರ್ ಅಕ್ಷರದ ಮೇಲೆ ಹೆಚ್ಚು ಗಮನಹರಿಸಿದ್ದರೂ, ಬೈಕಿನ ಹೆಸರು ರೈಡರ್ ಅಥವಾ ರೆಟ್ರಾನ್ ಆಗಿರಬಹುದು ಎಂದು ಕೂಡ ಕೆಲವರು ಊಹಿಸುತ್ತಿದ್ದಾರೆ.

ಇದನ್ನೂ ಓದಿ-ಮೊಬೈಲ್‌ನಿಂದ ಬೈಕ್‌ಗಳನ್ನು ಖರೀದಿಸಲು ಈ ಕಂಪನಿಯ ಹೊಸ ವೈಶಿಷ್ಟ್ಯವನ್ನು ತಿಳಿಯಿರಿ

ಇದಲ್ಲದೆ ಡಿಜಿಟಲ್ ಡಿಸ್ಪ್ಲೇ ಹಾಗೂ ಸ್ಪೋರ್ಟ್ಸ್ ಲುಕ್ ನೀಡಲು ಬೈಕ್ ನ ಫ್ಯೂಲ್ ಟ್ಯಾಂಕ್ ಮೇಲೆ ಕಪ್ಪು ಬಣ್ಣದ ಸ್ಟ್ರಿಪ್ ಗಳಿರುವ ಸಾಧ್ಯತೆ ಇದೆ . ಈ ಬೈಕ್ ನ ಎಕ್ಸ್-ಷೋರೂಮ್ ಬೆಲೆ ಸುಮಾರು 80-90 ಸಾವಿರ ಇರಬಹುದು ಎಂದು ಅಂದಾಜಿಸಲಾಗುತ್ತಿದೆ. ಕಂಪನಿಯ ಬಳಿ ಪ್ರಸ್ತುತ 100CC ಹಾಗೂ 110CC ಸೆಗ್ಮೆಂಟ್ ನಲ್ಲಿ ಬೈಕ್ ಗಳಿದ್ದು, ಇದೀಗ ಕಂಪನಿಯ ಸಂಪೂರ್ಣ ಫೋಕಸ್ 125 ಸಿಸಿ ಬೈಕ್ ಮೇಲಿದೆ.

ಇದನ್ನೂ ಓದಿ -Harley Davidson ಆಗಿ ಮಾರ್ಪಟ್ಟ Royal Enfield...! ಖರ್ಚಾಗಿದ್ದು ಎಷ್ಟು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News