Hindu New Year 2021: ನಾಳೆಯಿಂದ ಪ್ಲವ್ ಸಂವತ್ಸರ ಆರಂಭಗೊಳ್ಳುತ್ತಿದೆ. ಮಂಗಳವಾರದಿಂದ ಈ ನೂತನ ಸಂವತ್ಸರ ಆರಂಭಗೊಳ್ಳುತ್ತಿರುವ ಕಾರಣ ಈ ವರ್ಷದ ರಾಜ ಹಾಗೂ ಮಂತ್ರಿ ಕೂಡ ಮಂಗಳನಾಗಿರಲಿದ್ದಾನೆ. ಈ ನೂತನ ಸಂವತ್ಸರ ಭಾರತ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದರ ಕುರಿತು ಜೋತಿಷ್ಯ ತಜ್ಞರು ಏನು ಹೇಳುತ್ತಾರೆ ತಿಳಿಯೋಣ ಬನ್ನಿ.
ನವದೆಹಲಿ: Hindu New Year 2021 - ಪ್ರತಿ ವರ್ಷದ ಚೈತ್ರಮಾಸದ ಶುಕ್ಲಪಕ್ಷದ ಪ್ರತಿಪದಾ ತಿಥಿಯಿಂದ ಹಿಂದೂ ಹೊಸ ವರ್ಷ ಅಥವಾ ನೂತನ ಸಂವತ್ಸರ ಆರಂಭಗೊಳ್ಳುತ್ತದೆ. ಈ ಬಾರಿ ಏಪ್ರಿಲ್ 13 ಅಂದರೆ ಮಂಗಳವಾರದಿಂದ ನೂತನ ಸಂವತ್ಸರ ಆರಂಭಗೊಳ್ಳುತ್ತಿದೆ. ಉತ್ಥಾನ ಜೋತಿಷ್ಯ ಸಂಸ್ಥೆಯ ನಿರ್ದೇಶಕ ಹಾಗೂ ಜೋತಿರ್ವಿದ್ (Jyotishya Expert) ಪಂಡಿತ್ ದಿವಾಕರ್ ತ್ರಿಪಾಠಿ ಅವರ ಹೇಳಿಕೆಯ ಪ್ರಕಾರ, ಪ್ರಮಾದಿನಾಮ ಸಂವತ್ಸರ 2077, ಚೈತ್ರ ಮಾಸದ ಕೃಷ್ಣಪಕ್ಷದ ಅಮಾವಾಸ್ಯೆಯ ತಿಥಿ ಅಂದರೆ 12 ಏಪ್ರಿಲ್ 2021ರ ಸೋಮವಾರ ಮುಕ್ತಾಯಗೊಳ್ಳುತ್ತಿದೆ. ಇದಾದ ಬಳಿಕ ಪ್ಲವ್ ನಾಮ (Plavnama Samvatsara 2078) ಹೆಸರಿನ ನೂತನ ಸಂವತ್ಸರ 2078 ಮಂಗಳವಾರ 13 ಏಪ್ರಿಲ್ 2021 ರಿಂದ ಆರಂಭಗೊಳ್ಳುತ್ತಿದೆ.
- ಉತ್ಥಾನ ಜ್ಯೋತಿಷ್ಯ ಸಂಸ್ಥಾನದ ನಿರ್ದೇಶಕ ಹಾಗೂ ಜೋತೀರ್ವಿದ್ ಪಂಡಿತ ದಿವಾಕರ ತ್ರಿಪಾಠಿ.
(ಈ ಲೇಖನದಲ್ಲಿ ನೀಡಲಾಗಿರುವ ನೂಚನೆಗಳು ಸಾಮಾನ್ಯ ಮಾಹಿತಿ ಹಾಗೂ ನಂಬಿಕೆಯನ್ನು ಆಧರಿಸಿವೆ. Zee Hindustan Kannada ಇದನ್ನು ಪುಷ್ಟೀಕರಿಸುವುದಿಲ್ಲ)
ಇದನ್ನೂ ಓದಿ - Gudi Padwa 2021: ಇಲ್ಲಿದೆ ಶುಭ ಮುಹೂರ್ತ ಹಾಗೂ ಪೂಜಾ ವಿಧಿ-ವಿಧಾನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ನೂತನ ವರ್ಷದಲ್ಲಿ (New Year 2021) ಮಂಗಳನೇ ರಾಜ ಹಾಗೂ ಮಂತ್ರಿ - ಧಾರ್ಮಿಕ ನಂಬಿಕೆಗಳ ಪ್ರಕಾರ ಬ್ರಹ್ಮದೇವ (Lord Brahma) ಚೈತ್ರಮಾಸದ ಶುಕ್ಲ ಪಕ್ಷದ ಪ್ರತಿಪದೆಯಂದು ಈ ಸೃಷ್ಟಿಯನ್ನು ರಚಿಸಿದ ಎನ್ನಲಾಗುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡು ಇದೇ ದಿನದಿಂದ ಹೊಸ ವರ್ಷ ಅಥವಾ ನೂತನ ಸಂವತ್ಸರ ಆರಂಭಗೊಳ್ಳುತ್ತದೆ ಎಂದು ನಂಬಲಾಗುತ್ತದೆ. ಚೈತ್ರ ಶುಕ್ಲಪಕ್ಷದ ಪ್ರತಿಪದೆಯಂದು ಯಾವ ದಿನ ಅಥವಾ ವಾರ ಇರುತ್ತದೆಯೋ ಅದೇ ಆ ನೂತನ ಸಂವತ್ಸರದ ರಾಜ ಎಂದು ಹೇಳಲಾಗುತ್ತದೆ ಹಾಗೂ ಸೂರ್ಯನ ಮೇಷ ರಾಶಿ ಪ್ರವೇಶದ ದಿನವನ್ನು ಆ ನೂತನ ಸಂವತ್ಸರದ ಮಂತ್ರಿ ಎಂದು ಹೇಳಲಾಗುತ್ತದೆ. ಪ್ಲವ್ ನಾಮ ಸಂವತ್ಸರ 2078 ಹೆಸರಿನ ಈ ನೂತನ ಸಂವತ್ಸರದ ರಾಜ ಹಾಗೂ ಮಂತ್ರಿಯ ಹುದ್ದೆ ಮಂಗಳನ (Mangal) ಬಳಿಯೇ ಇವೆ. ಏಕೆಂದರೆ ನೂತನ ವರ್ಷದ ಮೊದಲ ದಿನ ಮಂಗಳವಾರದಿಂದ ಆರಂಭಗೊಳ್ಳುತ್ತಿದೆ.
2. ನೂತನ ಸಂವತ್ಸರದ ಪ್ರಭಾವ ಹೇಗಿರಲಿದೆ? (Effect On India) - ಈ ಕುರಿತು ಹೇಳಿಕೆ ನೀಡುವ ಜೋತಿಷ್ಯ ವಿದ್ವಾಂಸರು, ನೂತನ ಸಂವತ್ಸರ (New Samvatsara Predictions) ಉತ್ತಮವಾಗಿರದೇ, ಸಾಮಾನ್ಯ ಫಲಗಳನ್ನು ನೀಡಲಿದೆ ಎನ್ನುತ್ತಾರೆ. ನಾಗರಿಕರು ಹಾಗೂ ಸಮಾಜದ ನಡುವೆ ಆಕ್ರೋಶ ಮುಂದುವರೆಯಲಿದೆ. ರಾಜಕೀಯ ಪಕ್ಷಗಳು ಸೇರಿದಂತೆ ಇತರೆ ಸಂಸ್ಥೆಗಳ ಕೆಲಸ ಜನಪರವಾಗಿದ್ದರೂ ಕೂಡ ನಾಗರಿಕರಲ್ಲಿ ಅಸಮಾಧಾನ ಇರಲಿದೆ. ಶಾಸಕಾಂಗ ತನ್ನ ಕಾರ್ಯನಿರ್ವಹಣೆಯಲ್ಲಿ ಯಶಸ್ಸು ಸಾಧಿಸಲಿದೆ ಹಾಗೂ ಧಾರ್ಮಿಕ ಕ್ರಿಯಾಕಲಾಪಗಳಲ್ಲಿ ಸಾಮಾನ್ಯ ವೃದ್ಧಿ ಕಾಣಿಸಲಿದೆ. ಇಡೀ ವಿಶ್ವ ಸೇರಿದಂತೆ ಭಾರತ ಕೂಡ ವರ್ತಮಾನದಲ್ಲಿ ಕೊರೊನಾ ಪ್ರಕೊಪದಿಂದ ಮುಕ್ತಿ ಹೊಂದುವಂತೆ ಕಾಣುತ್ತಿಲ್ಲ. ಸಮಸ್ಯೆಗಳು ಮತ್ತಷ್ಟು ಬಿಕಟಗೊಳ್ಳಲಿವೆ ಎಂಬಂತೆ ಗೋಚರಿಸುತ್ತಿದೆ.
3. ನೈಸರ್ಗಿಕ ವಿಪತ್ತುಗಳ ಪ್ರಭಾವ ಕಾಣಿಸಲಿದೆ - ಭಾರತದಲ್ಲಿ ಆಕಸ್ಮಿಕವಾಗಿ ನೈಸರ್ಗಿಕ ವಿಪತ್ತುಗಳ ದುಷ್ಪ್ರಭಾವ ಕಾಣಿಸಲಿದೆ. ಬಿರುಬಿಸಿಲು ತನ್ನ ಈ ಮೊದಲ ದಾಖಲೆಯ ಮಟ್ಟವನ್ನು ಮೀರಲಿದೆ. ಮಂಜುಗಡ್ಡೆಗಳ ಕರಗುವಿಕೆಯ ವೇಗ ಹೆಚ್ಚಾಗುವ ಕಾರಣ ಸಮುದ್ರ ತೀರದಲ್ಲಿರುವ ನಗರಗಳಿಗೆ ಅಪಾಯದ ಸಂಕೇತ ಗೋಚರಿಸುತ್ತಿದೆ. ಈ ನೂತನ ಸಂವತ್ಸರದಲ್ಲಿ ಆಯುಧಗಳ ವ್ಯಾಪಾರ ಹಾಗೂ ಖರೀದಿ ಹೆಚ್ಚಾಗಲಿದೆ. ಗ್ರಾಮ, ನಗರಗಳು ಹಾಗೂ ಕಾಡುಗಳಲ್ಲಿ ಬೆಂಕಿಯ ತೀವ್ರ ದುಷ್ಪ್ರಭಾವ ನೋಡಲು ಸಿಗಬಹುದು. ಯುದ್ಧಗಳಂತಹ ಸ್ಥಿತಿಗಳು ಆಕಸ್ಮಿಕವಾಗಿ ನಿರ್ಮಾಣಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಮಳೆಯ ಅಭಾವದ ಕಾರಣ ಕೃಷಿ ಕ್ಷೇತ್ರ ಹಾಗೂ ಬೆಳೆಗಳು ಪ್ರಭಾವಕ್ಕೆ ಒಳಗಾಗಲಿವೆ.
4. ಷೇರು ಮಾರುಕಟ್ಟೆ ಲಾಭದ ವ್ಯಾಪಾರವಾಗಿ ಉಳಿಯುವುದಿಲ್ಲ - ಸರ್ಕಾರದ ಕಾರ್ಯಶೈಲಿಯಿಂದ ಸಾಮಾನ್ಯ ನಾಗರಿಕರು ಬೇಸ್ತುಹೊಗಲಿದ್ದಾರೆ. ಸಾಂಕ್ರಾಮಿಕ ರೋಗಗಳು, ಜ್ವರ, ಪಿತ್ತ, ಗ್ಯಾಸ್ಟ್ರಿಕ್, ವಿಷ ಪದಾರ್ಥ ಇತ್ಯಾದಿಗಳ ದುಷ್ಪ್ರಭಾವ ಹೆಚ್ಚಾಗಲಿದೆ. ಉಗ್ರದಾಳಿ, ಅಗ್ನಿಕಾಂಡಗಳಂತಹ ಘಟನೆಗಳು, ನೆರೆಯವರೊಂದಿಗೆ ವೈಮನಸ್ಸು, ಗಡಿಭಾಗದಲ್ಲಿ ಯುದ್ಧದಂತಹ ಪರಿಸ್ಥಿತಿಗಳು ಜನರಿಗೆ ವಿಚಲಿತಗೊಳಿಸಲಿವೆ. ತೆರಿಗೆ ಹೆಚ್ಚಾಗಲಿದೆ. ಷೇರು ಮಾರುಕಟ್ಟೆ ಲಾಭದ ವ್ಯಾಪಾರವಾಗಿ ಉಳಿಯುವದಿಲ್ಲ. ಅಸ್ಥಿರ ವಾತಾವರಣ ನಿರ್ಮಾಣಗೊಳ್ಳುವ ಸಾಧ್ಯತೆ ಇದೆ. ಬ್ಯಾಂಕುಗಳ ಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ. ದೇಶದ ಖರ್ಚು ಹೆಚ್ಚಾಗಲಿದೆ. ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಸುಧಾರಣೆ ಕಂಡುಬರಲಿದೆ. ದೇಶಹಿತದ ದೃಷ್ಟಿಯಿಂದ ಕೇಂದ್ರ ಸರ್ಕಾರ ಮಹತ್ವದ ಕಾನೂನುಗಳನ್ನು ಜಾರಿಗೆ ತರಲಿದೆ. ನೂತನ ಸಂವತ್ಸರದಲ್ಲಿ ಆಡಳಿತಾರೂಢ ಹಾಗೂ ಪ್ರತಿಪಕ್ಷಗಳ ರಾಜಕೀಯ ವ್ಯಕ್ತಿತ್ವಗಳು ಹಾಗೂ ಇತರೆ ಕ್ಷೇತ್ರದ ಗಣ್ಯ ವ್ಯಕ್ತಿಗಳಿಗೆ ಹಾನಿ ಸಂಭವಿಸುವ ಸಾಧ್ಯತೆ ಇದೆ.