Horoscope 2024:ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಹೊಸವರ್ಷದಲ್ಲಿ ಶನಿ ತನ್ನ ರಾಶಿಯನ್ನು ಪರಿವರ್ತಿಸುತ್ತಿಲ್ಲ. ಆದರೆ ಆತನ ನಡೆ ಮಾತ್ರ ಬದಲಾವಣೆಯಾಗಲಿದೆ. ಹೌದು ಜೂನ್ ತಿಂಗಳಿನಲ್ಲಿ ಶನಿ ತನ್ನ ವಕ್ರನಡೆಯನ್ನು ಅನುಸರಿಸಲಿದ್ದು, ಕೆಲ ರಾಶಿಗಳ ಜನರಿಗೆ ನೌಕರಿ ವ್ಯಾಪಾರದಲ್ಲಿ ಉನ್ನತಿಯ ಜೊತೆಗೆ ಲಗ್ಜರಿ ಲೈಫ್ ಕರುಣಿಸಲಿದ್ದಾನೆ. (Spiritual News In Kannada)
ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ್ ನವಗ್ರಹಗಳಲ್ಲಿ ಶನಿಯನ್ನು ತುಂಬಾ ಮಹತ್ವದ ಗ್ರಹ ಎಂದು ಭಾವಿಸಲಾಗುತ್ತದೆ. ಇದಲ್ಲದೆ ಶನಿ ಒಂದೇ ರಾಶಿಯಲ್ಲಿ ದೀರ್ಘಾವಧಿಯವರೆಗೆ ವಿರಾಜಮಾನನಾಗುತ್ತಾನೆ. ಹೀಗಿರುವಾಗ ಆತನ ಸ್ಥಿತಿ ಪರಿವರ್ತನೆಯ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಜನರ ಜೀವನದ ಮೇಲೆ ಒಂದಿಲ್ಲ ಒಂದು ರೀತಿಯಲ್ಲಿ ಕಂಡುಬರುತ್ತದೆ. ಪ್ರಸ್ತುತ ಶನಿ ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ವರ್ಷ 2024 ರಲ್ಲಿಯೂ ಕೂಡ ಆತ ಕುಂಭ ರಾಶಿಯಲ್ಲಿಯೇ ಮುಂದುವರೆಯಲಿದ್ದಾನೆ. ಆದರೆ ಆತನ ನಡೆಯಲ್ಲಿ ಬದಲಾವಣೆಯಾಗಲಿದೆ. ಮಾರ್ಚ್ ತಿಂಗಳಿನಲ್ಲಿ ಉದಯಿಸಲಿರುವ ಶನಿ, ಜೂನ್ ತಿಂಗಳಿನಲ್ಲಿ ತನ್ನ ವಕ್ರ ನಡೆಯನ್ನು ಅನುಸರಿಸಲಿದ್ದಾನೆ. ಕರ್ಮಫಲದಾತ ಶನಿಯ ಎ ವಕ್ರ ನಡೆ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವವನ್ನು ಬೀರಲಿದೆ. ಜೂನ್ 29, 2024ರಂದು ಶನಿ ವಕ್ರನಡೆಯನ್ನು ಅನುಸರಿಸಲಿದ್ದು, ನವೆಂಬರ್ 15, 2024ರವರೆಗೆ ಆತ ಅದೇ ಸ್ಥಿತಿಯಲ್ಲಿ ಇರಲಿದ್ದಾನೆ. ಹೊಸ ವರ್ಷದಲ್ಲಿ ಶನಿಯ ಈ ವಕ್ರ ನಡೆ ಕೆಲ ಜಾತಕದವರ ಪಾಲಿಗೆ ಅತ್ಯಂತ ಶುಭ ಫಲಗಳನ್ನು ಕರುಣಿಸಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, (Spiritual News In Kannada)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
Horoscope 2024:ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಹೊಸವರ್ಷದಲ್ಲಿ ಶನಿ ತನ್ನ ರಾಶಿಯನ್ನು ಪರಿವರ್ತಿಸುತ್ತಿಲ್ಲ. ಆದರೆ ಆತನ ನಡೆ ಮಾತ್ರ ಬದಲಾವಣೆಯಾಗಲಿದೆ. ಹೌದು ಜೂನ್ ತಿಂಗಳಿನಲ್ಲಿ ಶನಿ ತನ್ನ ವಕ್ರನಡೆಯನ್ನು ಅನುಸರಿಸಲಿದ್ದು, ಕೆಲ ರಾಶಿಗಳ ಜನರಿಗೆ ನೌಕರಿ ವ್ಯಾಪಾರದಲ್ಲಿ ಉನ್ನತಿಯ ಜೊತೆಗೆ ಲಗ್ಜರಿ ಲೈಫ್ ಕರುಣಿಸಲಿದ್ದಾನೆ. (Spiritual News In Kannada)
ಮಿಥುನ ರಾಶಿ: ಕರ್ಮ ಫಲದಾತ ಶನಿಯ ಈ ವಕ್ರ ನಡೆಯಿಂದ ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ನಿಮ್ಮ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ವೃತ್ತಿ-ವ್ಯಾಪಾರದಲ್ಲಿ ಉನ್ನತಿಯಾಗಲಿದೆ. ಆರ್ಥಿಕ ಸ್ಥಿತಿಯ ಕುರಿತು ಹೇಳುವುದಾದರೆ ಆಕಸ್ಮಿಕ ಧನಲಾಭದ ಸಂಕೇತಗಳು ಕಂಡುಬರುತ್ತಿವೆ. ವೃತ್ತಿ ಜೀವನದ ಕುರಿತು ಹೇಳುವುದಾದರೆ, ವಿದೇಶಕ್ಕೆ ಹೋಗುವ ಅವಕಾಶ ಸಿಗುವ ಸಾಧ್ಯತೆ ಇದೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಪರಿಶ್ರಮದ ಸಂಪೂರ್ಣ ಫಲ ನಿಮಗೆ ಸಿಗಲಿದೆ. ವೈವಾಹಿಕ ಜೀವನದಲ್ಲಿ ಸಂತಸದ ವಾತಾವರಣ ಇರಲಿದೆ. ಆರ್ಥಿಕ ಸ್ಥಿತಿ ಬಲಗೊಳ್ಳುವುದಲ್ಲದೆ ಆಕಸ್ಮಿಕ ಧನಪ್ರಾಪ್ತಿಯಾಗಬಹುದು.
ಸಿಂಹ ರಾಶಿ: ಶನಿಯ ಈ ವಕ್ರನಡೆ ನಿಮಗೆ ಅಪಾರ ಯಶಸ್ಸನ್ನು ತಂದುಕೊಡಲಿದೆ. ಆಕಸ್ಮಿಕ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಹೊಸ ಬಿಸ್ನೆಸ್ ಆರಂಭಿಸಲು ಯೋಚಿಸುತ್ತಿದ್ದರೆ, ಈ ಅವಧಿ ನಿಮಗೆ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ವೃತ್ತಿ ಜೀವನದ ಕುರಿತು ಹೇಳುವುದಾದರೆ, ನಿಮ್ಮ ಕೆಲಸಕ್ಕೆ ಮನ್ನಣೆ ಸಿಗಲಿದೆ. ನಿಮ್ಮ ಕೆಲಸದ ಮೇಲೆ ಹಿರಿಯ ಅಧಿಕಾರಿಗಳು ಫಿದಾ ಆಗಲಿದ್ದು ಪ್ರಮೋಷನ್ ಸಿಗುವ ಎಲ್ಲಾ ಸಂಕೇತಗಳು ಗೋಚರಿಸುತ್ತಿವೆ. ಇದರೊಂದಿಗೆ ಹೊಸ ಜವಾಬ್ದಾರಿ ಕೂಡ ನಿಮಗೆ ಸಿಗುವ ಸಾಧ್ಯತೆ ಇದೆ. ಬಿಸ್ನೆಸ್ ಕುರಿತು ಹೇಳುವುದಾದರೆ ನಿಮಗೆ ಸಾಕಷ್ಟು ಲಾಭ ಸಿಗಲಿದೆ. ಕುಟುಂಬದ ಜೊತೆಗೆ ಉತ್ತಮ ಕಾಲ ಕಳೆಯುವಿರಿ.
ತುಲಾ ರಾಶಿ: ಶನಿಯ ಈ ವಕ್ರ ನಡೆ ನಿಮ್ಮ ಪಾಲಿಗೆ ವಿಶೇಷ ಲಾಭಗಳನ್ನು ತರಲಿದೆ. ವೃತ್ತಿ ಜೀವನದ ಕುರಿತು ಹೇಳುವುದಾದರೆ ಸಾಕಷ್ಟು ಲಾಭ ಸಿಗುವ ಸಂಕೇತಗಳಿವೆ. ಜೂನ್ ಬಳಿಕ ಪ್ರಮೋಷನ್ ಜೊತೆಗೆ ಇಂಕ್ರಿಮೆಂಟ್ ಸಿಗಲಿದೆ. ನಿಮ್ಮ ಕೆಲಸದಿಂದ ಹಿರಿಯ ಅಧಿಕಾರಿಗಳು ಪ್ರಸನ್ನಗೊಂಡು, ನಿಮಗೆ ಹೆಚ್ಚಿನ ಜವಾಬ್ದಾರಿಯನ್ನು ವಹಿಸುವ ಸಾಧ್ಯತೆ ಇದೆ. ವೃತ್ತಿ ಜೀವನದಲ್ಲಿ ಎದುರಾಗಿದ್ದ ಎಲ್ಲಾ ಅಡೆತಡೆಗಳು ನಿವಾರಣೆಯಗಲಿವೆ. ಆರ್ಥಿಕ ಸ್ಥಿತಿಯ ಕುರಿತು ಹೇಳುವುದಾದರೆ. ಧನಲಾಭ ಉಂಟಾಗುವ ಎಲ್ಲಾ ಸಂಕೇತಗಳು ಗೋಚರಿಸುತ್ತಿವೆ. ಮಕ್ಕಳ ಕಡೆಯಿಂದ ದೊಡ್ಡ ಸಂತಸದ ಸುದ್ದಿ ನಿಮಗೆ ಸಿಗುವ ಸಾಧ್ಯತೆ ಇದೆ. ಜೀವನದಲ್ಲಿ ನೀವು ಯಾವ ಕೆಲಸದಲ್ಲಿ ಪರಿಶ್ರಮ ಪಡುವಿರೊ ಅದರಲ್ಲಿ ನಿಮಗೆ ಯಶಸ್ಸು ಸಿಗುವ ಸಾಧ್ಯತೆಗಳಿವೆ. ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ಒದಗಿ ಬರಲಿವೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)