How to Identify Fake Gold: ಅಸಲಿ, ನಕಲಿ ಚಿನ್ನವನ್ನು ಸುಲಭವಾಗಿ ಗುರುತಿಸುವುದು ಹೇಗೆ ತಿಳಿಯಿರಿ

ಇದು ಚಿನ್ನ ಖರೀದಿಗೆ ಹೇಳಿ ಮಾಡಿಸಿದ ಸಮಯ.  ಇನ್ನು ಚಿನ್ನ ಖರೀದಿ ವೇಳೆ ಅಸಲಿ, ನಕಲಿ ಚಿನ್ನವನ್ನು ಗುರುತಿಸುವುದು ಹೇಗೆ ತಿಳಿಯಿರಿ..  

ಬೆಂಗಳೂರು : ಇಂದು ಅಕ್ಷಯ ತೃತೀಯ. ದೇಶಾದ್ಯಂತ ಅಕ್ಷಯ ತೃತೀಯವನ್ನು ಆಚರಿಸಲಾಗುತ್ತಿದೆ.  ಈ ದಿನ ಚಿನ್ನವನ್ನು ಖರೀದಿಗೆ ಮಂಗಳಕರ ಎಂದು ಹೇಳಲಾಗುತ್ತದೆ. ಈ ನಡುವೆ ಅಕ್ಷಯ ತೃತೀಯಕ್ಕೆ ಒಂದು ದಿನ ಮುಂಚಿತವಾಗಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್ ಮತ್ತು ಭಾರತೀಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸುಮಾರು 1200 ರೂ. ಯಷ್ಟು ಕಡಿಮೆಯಾಗಿದೆ. ಹೀಗಾಗಿ ಇದು ಚಿನ್ನ ಖರೀದಿಗೆ ಹೇಳಿ ಮಾಡಿಸಿದ ಸಮಯ.  ಇನ್ನು ಚಿನ್ನ ಖರೀದಿ ವೇಳೆ ಅಸಲಿ, ನಕಲಿ ಚಿನ್ನವನ್ನು ಗುರುತಿಸುವುದು ಹೇಗೆ ತಿಳಿಯಿರಿ..  
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಹಾಲ್‌ಮಾರ್ಕ್ ಮೂಲಕ ನಿಜವಾದ ಚಿನ್ನವನ್ನು ಗುರುತಿಸುವುದು ಸುಲಭ. ಭಾರತದಲ್ಲಿ, ಬಿಐಎಸ್ ಸಂಸ್ಥೆಯು ಗ್ರಾಹಕರಿಗೆ ಮಾರಾಟವಾಗುವ ಆಭರಣಗಳ ಗುಣಮಟ್ಟದ ಮಟ್ಟವನ್ನು ಪರಿಶೀಲಿಸುತ್ತದೆ. ಆದ್ದರಿಂದ ಬಿಐಎಸ್ ಹಾಲ್ಮಾರ್ಕ್ ನೋಡಿದ ನಂತರವೇ  ಚಿನ್ನವನ್ನು ಖರೀದಿಸಿ.  ಇನ್ನು  ಹಾಲ್‌ಮಾರ್ಕ್ ಅಸಲಿಯೋ ನಕಲಿಯೋ ಎನ್ನುವುದನ್ನುತಿಳಿದುಕೊಳ್ಳುವುದು ಕೂಡಾ ಅಗತ್ಯವೇ? ಮೂಲ ಹಾಲ್‌ಮಾರ್ಕ್ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್‌ನ ತ್ರಿಕೋನ ಚಿಹ್ನೆಯನ್ನು ಹೊಂದಿದೆ. 

2 /5

ಇದಕ್ಕಾಗಿ, ಹಾರ್ಡ್‌ವೇರ್ ಅಂಗಡಿಯಿಂದ ಮ್ಯಾಗ್ನೆಟ್ ತೆಗೆದುಕೊಂಡು ಅದನ್ನು ಚಿನ್ನದ ಆಭರಣಗಳ ಮೇಲೆ ಹಿಡಿಯಿರಿ.  ಅದು ಅಂಟಿಕೊಂಡರೆ ನಿಮ್ಮ ಚಿನ್ನವು ನಿಜವಲ್ಲ ಮತ್ತು ಅದು ಅಂಟಿಕೊಳ್ಳದಿದ್ದರೆ ಅದು ನಿಜ. ಏಕೆಂದರೆ ಚಿನ್ನವು ಕಾಂತೀಯ ಲೋಹವಲ್ಲ. ಅದೇ ರೀತಿ, ಕೆಲವು ರಾಸಾಯನಿಕಗಳು ಮತ್ತು ಆಮ್ಲಗಳನ್ನು ಬಳಸಿ ಚಿನ್ನದ ಗುಣಮಟ್ಟವನ್ನು ಪರೀಕ್ಷಿಸಬಹುದು. .

3 /5

ಇನ್ನೊಂದು ಸುಲಭವಾದ ಮಾರ್ಗವೆಂದರೆ ನೀರನ್ನು ಪರೀಕ್ಷಿಸುವುದು. ಇದಕ್ಕಾಗಿ, ಆಳವಾದ ಪಾತ್ರೆಯಲ್ಲಿ 2 ಲೋಟ ನೀರು ಹಾಕಿ ಮತ್ತು ಈ ನೀರಿನಲ್ಲಿ ಚಿನ್ನದ ಆಭರಣಗಳನ್ನು ಹಾಕಿ. ನಿಮ್ಮ ಚಿನ್ನ ತೇಲಿದರೆ ಅದು ಅಸಲಿಯಲ್ಲ.  ನಿಮ್ಮ ಆಭರಣಗಳು ಮುಳುಗಿ ಕುಳಿತರೆ ಅದು ನಿಜ.

4 /5

ನಿಜವಾದ ಚಿನ್ನದ ಬಗ್ಗೆ ನೀವೇ ತಿಳಿದುಕೊಳ್ಳಲು ಬಯಸಿದರೆ, ಈ ಆಸಿಡ್ ಪರೀಕ್ಷೆಯಿಂದ ನೀವು ಸುಲಭವಾಗಿ ಕಂಡುಹಿಡಿಯಬಹುದು. ಇದಕ್ಕಾಗಿ, ನೀವು ಪಿನ್‌ ಮೂಲಕ ಸ್ವಲ್ಪ ಸ್ಕ್ರಾಚ್ ಮಾಡಿ ಮತ್ತು ನಂತರ ಆ ಸ್ಕ್ರಾಚ್‌ನ ಮೇಲೆ ನೈಟ್ರಿಕ್ ಆಸಿಡ್ ಹನಿಯನ್ನು ಹಾಕಿ. ನಕಲಿ ಚಿನ್ನವು ತಕ್ಷಣವೇ ಹಸಿರು ಬಣ್ಣಕ್ಕೆ ತಿರುಗುತ್ತದೆ. ಆದರೆ ನಿಜವಾದ ಚಿನ್ನದ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ.

5 /5

ವಿನೆಗರ್ ಸಹಾಯದಿಂದ ಕೂಡಾ ಚಿನ್ನ ಅಸಲಿಯೋ ನಕಲಿಯೋ ಎನ್ನುವುದನ್ನು ಗುರುತಿಸಿಕೊಳ್ಳಬಹುದು. ಚಿನ್ನದ ಆಭರಣಗಳ ಮೇಲೆ ಕೆಲವು ಹನಿ ವಿನೆಗರ್ ಹಾಕಿ. ಅದರ ಬಣ್ಣದಲ್ಲಿ ಯಾವುದೇ ಬದಲಾವಣೆಯಾಗದಿದ್ದರೆ, ಅದು ಅಸಲಿ. ಬಣ್ಣ ಬದಲಾದರೆ  ನಕಲಿ ಚಿನ್ನ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.