Winter bathing tips : ಆರೋಗ್ಯ ಸಮಸ್ಯೆ ಉದ್ಭವಿಸಲು ಒತ್ತಡ, ನಿದ್ರೆಯ ಕೊರತೆ ಅಥವಾ ಸರಿಯಾಗಿ ಊಟ ಮಾಡದಿರುವಂತಹ ಹಲವು ಕಾರಣಗಳಿರಬಹುದು. ಆದರೆ ಸರಿಯಾಗಿ ಸ್ನಾನ ಮಾಡದಿರುವುದು ಕೂಡ ಒಂದು ದೊಡ್ಡ ಕಾರಣ.. ಈ ವಿಚಾರ ಹಲವರಿಗೆ ತಿಳಿದಿಲ್ಲ.. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ..
ಹೃದಯಾಘಾತ ಅಥವಾ ಮೆದುಳಿನ ಗೆಡ್ಡೆಯಂತಹ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ ದೇಶಾದ್ಯಂತ ವೇಗವಾಗಿ ಹೆಚ್ಚುತ್ತಿದೆ. ಇದರ ಹಿಂದೆ ಒತ್ತಡ, ನಿದ್ರೆಯ ಕೊರತೆ ಅಥವಾ ಸರಿಯಾಗಿ ಊಟ ಮಾಡದೇ ಇರುವಂತಹ ಹಲವು ಕಾರಣಗಳಿರಬಹುದು. ಆದರೆ ಸರಿಯಾದ ವಿಧಾನದಲ್ಲಿ ಸ್ನಾನ ಮಾಡದಿರುವುದು ಕೂಡ ಒಂದು ದೊಡ್ಡ ಕಾರಣ..
ಚಳಿಗಾಲದಲ್ಲಿ ಸರಿಯಾದ ವಿಧಾನದಿಂದ ಸ್ನಾನ ಮಾಡದಿರುವುದು ಹೃದಯಾಘಾತ ಅಥವಾ ಮೆದುಳಿನ ಗೆಡ್ಡೆಗಳಿಗೆ ಕಾರಣವಾಗಬಹುದು ಎಂದು ಅನೇಕ ವರದಿಗಳು ಬಹಿರಂಗಪಡಿಸಿವೆ. ಹಾಗಾದರೆ ಸ್ನಾನ ಮಾಡಲು ಸರಿಯಾದ ಮಾರ್ಗ ಯಾವುದು..? ಬನ್ನಿ ತಿಳಿಯೋಣ.
ಚಳಿಗಾಲದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಹಾಗೆಯೇ ಸ್ನಾನದ ವಿಧಾನವೂ ಸರಿಯಾಗಿರಬೇಕು. ಏಕೆಂದರೆ ಸ್ನಾನ ಮಾಡುವಾಗ ಅನೇಕರಿಗೆ ಹೃದಯಾಘಾತವಾಗುತ್ತದೆ. ಆದ್ದರಿಂದ, ಸ್ನಾನ ಮಾಡುವ ಮೊದಲು ನಿಮ್ಮನ್ನು ಮಾನಸಿಕವಾಗಿ ಸಿದ್ಧಪಡಿಸಿಕೊಳ್ಳುವುದು ಮುಖ್ಯ ಹಾಗೂ ದೇಹಕ್ಕೆ ಮಸಾಜ್ ಬಹುಮುಖ್ಯ. ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.
ಚಳಿಗಾಲದಲ್ಲಿ ಸ್ನಾನ ಮಾಡುವ ಅರ್ಧ ಗಂಟೆ ಮೊದಲು ಸಾಸಿವೆ ಎಣ್ಣೆಯಿಂದ ಇಡೀ ದೇಹವನ್ನು ಮಸಾಜ್ ಮಾಡಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಮಸಾಜ್ ಅನ್ನು ಕೆಳಗಿನಿಂದ ಮೇಲಕ್ಕೆ ಮಾಡಬೇಕು ಎಂದು ನೆನಪಿಡಿ. ಇದರರ್ಥ ಪಾದಗಳಿಂದ ಪ್ರಾರಂಭಿಸಿ ಹೃದಯದ ಕಡೆಗೆ. ಸ್ನಾನ ಮಾಡುವಾಗ ಮೊದಲು ಕಾಲುಗಳಿಂದ ಸ್ನಾನವನ್ನು ಪ್ರಾರಂಭಿಸಿ. ನಿಮ್ಮ ತಲೆಯ ಮೇಲೆ ಎಂದಿಗೂ ನೀರನ್ನು ಸುರಿಯಬೇಡಿ.
ಚಳಿಗಾಲದಲ್ಲಿ ಸ್ನಾನಕ್ಕೆ ಸರಿಯಾದ ವಿಧಾನ : ಪಾದಗಳನ್ನು ತೊಳೆದ ನಂತರ, ಸೊಂಟದ ಕೆಳಗೆ ನೀರನ್ನು ಸುರಿಯಿರಿ. ಅದರ ನಂತರ ಬಲ ಭುಜದ ಮೇಲೆ ನೀರನ್ನು ಸುರಿದು ನಂತರ ಎಡ ಭುಜದ ಮೇಲೆ ನೀರು ಹಾಕಿಕೊಂಡು ಸ್ನಾವನ್ನು ಮಾಡಲು ಪ್ರಾರಂಭಿಸಿ. ಕೊನೆಗೆ ತಲೆಗೆ ನೀರು ಹಾಕಿ.
ನೀವು ಈ ವಿಧಾನವನ್ನು ಅನುಸರಿಸಿದರೆ, ಚಳಿಗಾಲದ ಅಪಾಯಗಳು ಮತ್ತು ರೋಗಗಳಿಂದ ದೂರವಿರಬಹುದು. ಏಕೆಂದರೆ ದೇಹವು ನಿಷ್ಕ್ರಿಯವಾಗಿದ್ದಾಗ ಮತ್ತು ನೀರು ಇದ್ದಕ್ಕಿದ್ದಂತೆ ತಲೆಯ ಮೇಲೆ ಬಿದ್ದಾಗ, ದೇಹದ ಮಾನಸಿಕ ಸಮತೋಲನವು ತೊಂದರೆಗೊಳಗಾಗುತ್ತದೆ. ಇದು ರಕ್ತನಾಳಗಳು (ಅಪಧಮನಿಗಳು) ಕಿರಿದಾಗುವಂತೆ ಮಾಡುತ್ತದೆ ಮತ್ತು ರಕ್ತದ ಹರಿವನ್ನು ನಿಲ್ಲಿಸುತ್ತದೆ. ಹೃದಯಾಘಾತ ಮತ್ತು ಸಾವಿನ ಸಾಧ್ಯತೆಯೂ ಹೆಚ್ಚಾಗುತ್ತದೆ.