ಕೇವಲ 18 ನಿಮಿಷಗಳಲ್ಲಿ ಚಾರ್ಜ್ ಆಗುವ ಈ ಎಲೆಕ್ಟ್ರಿಕ್ ಕಾರುಗಳು 500ಕಿ.ಮೀ.ವರೆಗೆ ಚಲಿಸಬಲ್ಲವು

                   

  • Dec 04, 2020, 07:38 AM IST

ಗಾಳಿಯ ವೇಗದಲ್ಲಿ ಚಲಿಸುತ್ತಿರುವ ನಮ್ಮ ವಾಹನ ಜಗತ್ತು ಈಗ ಎಲೆಕ್ಟ್ರಿಕ್ ವಾಹನಗಳ ಹೊಸ ಜಗತ್ತನ್ನು ಪ್ರವೇಶಿಸುತ್ತಿದೆ. ಇಂದು ಹಸಿರು ಸಂಖ್ಯೆಯ ಫಲಕಗಳನ್ನು ಹೊಂದಿರುವ ಅನೇಕ ಕಾರುಗಳು ಅಥವಾ ಬೈಕುಗಳು ಶಬ್ದವಿಲ್ಲದೆ ರಸ್ತೆಯಲ್ಲಿ ಓಡಾಡುತ್ತಿರುವುದು ಕಂಡುಬರುತ್ತದೆ.

1 /5

ನವದೆಹಲಿ: ಈ ಸಮಯದಲ್ಲಿ ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅಥವಾ ಕಾರು ಖರೀದಿಗೆ ಕೇಂದ್ರ ಸರ್ಕಾರ ಹೆಚ್ಚು ಉತ್ತೇಜನ ನೀಡುತ್ತಿದೆ. ಆದಾಗ್ಯೂ ಈ ವಾಹನಗಳನ್ನು ಚಾರ್ಜ್ ಮಾಡಲು  ಬಹಳ ಸಮಯ ತೆಗೆದುಕೊಳ್ಳುತ್ತದೆ ಎಂಬ ಭಾವನೆ ಜನರ ಮನಸ್ಸಿನಲ್ಲಿ ಇದೆ. ಹಾಗಾಗಿಯೇ ಜನರು ಇನ್ನೂ ಪೆಟ್ರೋಲ್-ಡೀಸೆಲ್ ಅಥವಾ ಸಿಎನ್‌ಜಿ ವಾಹನಗಳನ್ನು ಖರೀದಿಸಲು ಒಲವು ತೋರುತ್ತಿದ್ದಾರೆ.

2 /5

ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಸಹ ರಸ್ತೆಯಲ್ಲಿ ಕಾಣಿಸಿಕೊಳ್ಳಲಿವೆ. ದೇಶಾದ್ಯಂತ 59 ಸಾವಿರ ಪೆಟ್ರೋಲ್ ಪಂಪ್‌ಗಳಲ್ಲಿ ಇ-ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. 

3 /5

ಈಗ ನಿಮ್ಮ ಎಲೆಕ್ಟ್ರಿಕ್ ಕಾರ್ ಅನ್ನು ನಿಮಿಷಗಳಲ್ಲಿ ಚಾರ್ಜ್ ಮಾಡಲಾಗುತ್ತದೆ. ಅದೂ ಕೇವಲ 18 ನಿಮಿಷಗಳಲ್ಲಿ ನಿಮ್ಮ ಕಾರ್ ಪೂರ್ಣವಾಗಿ ಚಾರ್ಜ್ ಆಗಲಿದೆ ಮತ್ತು ಒಂದು ಬಾರಿ ಚಾರ್ಜಿಂಗ್‌ನಲ್ಲಿ ನೀವು 500 ಕಿಲೋಮೀಟರ್‌ವರೆಗೆ ಪ್ರಯಾಣಿಸಬಹುದು.

4 /5

ಎಲೆಕ್ಟ್ರಿಕ್ ವಿಭಾಗವನ್ನು ಉತ್ತೇಜಿಸಲು ಹ್ಯುಂಡೈ ಮೋಟಾರ್ ಗ್ರೂಪ್ ಶೀಘ್ರದಲ್ಲೇ ಎಲೆಕ್ಟ್ರಿಕ್ ವೆಹಿಕಲ್ ಪ್ಲಾಟ್‌ಫಾರ್ಮ್ (EV Platform) ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇ-ಜಿಎಂಪಿ ಇವಿ ಪ್ಲಾಟ್‌ಫಾರ್ಮ್ ಎಂಬ ಎಲೆಕ್ಟ್ರಿಕ್ ವೆಹಿಕಲ್ ಪ್ಲಾಟ್‌ಫಾರ್ಮ್ ನಿಮ್ಮ ವಾಹನವನ್ನು ಕೇವಲ 18 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡುತ್ತದೆ. ಇ-ಜಿಎಂಪಿ ಪ್ಲಾಟ್‌ಫಾರ್ಮ್ ಅನ್ನು ಹ್ಯುಂಡೈ ಮತ್ತು ಕೆಐಎ ಮೋಟಾರ್‌ಗಳು (KIA motors) ವಿನ್ಯಾಸಗೊಳಿಸಿವೆ.

5 /5

ಮುಂದಿನ ವರ್ಷ 2021 ರಲ್ಲಿ ಹ್ಯುಂಡೈ ಮೋಟಾರ್ ಗ್ರೂಪ್ ತನ್ನ ಮೊದಲ ಕಾರನ್ನು ಈ ಹೊಸ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಲಿದೆ. ಇ-ಜಿಎಂಪಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿರುವ ಮೊದಲ ಕಾರಿಗೆ ಹ್ಯುಂಡೈ ಅಯೋನಿಕ್ 5 (Hyundai Ioniq 5) ಎಂದು ಹೆಸರಿಸಲಾಗುತ್ತಿದೆ. ಅಯೋನಿಕ್ ಹ್ಯುಂಡೈನ ಉಪ-ಬ್ರಾಂಡ್ ಆಗಿದೆ.