ಪ್ರಯಾಣದ ಸಮಯದಲ್ಲಿ 'ವಾಂತಿ' ಸಮಸ್ಯೆಯೇ? ಹಾಗಾದರೆ ಈ ಟಿಪ್ಸ್ ಅನುಸರಿಸಿ

ಪ್ರಯಾಣದ ಸಮಯದಲ್ಲಿ ತಲೆನೋವು, ವಾಂತಿ ಮುಂತಾದ ಸಮಸ್ಯೆಗಳನ್ನು ಕೆಲವರು ಎದುರಿಸುತ್ತಿರುತ್ತಾರೆ. ಈ ಕಾರಣದಿಂದ ಕೆಲವೊಮ್ಮೆ ಪ್ರಯಾಣವು ಸುಂದರ ನೆನಪುಗಳ ಬದಲಾಗಿ ಜನರಿಗೆ ಅದೊಂದು ಕೆಟ್ಟ ಕನಸಾಗಿ ಭಾಸವಾಗುತ್ತದೆ.

Sep 10, 2018, 11:18 AM IST

ವಾರಾಂತ್ಯಗಳು ಮತ್ತು ರಜಾದಿನಗಳಲ್ಲಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸುತ್ತಲು ಮತ್ತು ಉತ್ತಮ ನೆನಪುಗಳನ್ನು ಕಲೆಹಾಕಲು ಕೆಲವರು ಇಷ್ಟ ಪಡುತ್ತಾರೆ. ಆದರೆ ಕೆಲವರು ಪ್ರಯಾಣವನ್ನೇ ಇಷ್ಟಪಡುವುದಿಲ್ಲ. ಪ್ರಯಾಣದ ಸಮಯದಲ್ಲಿ ತಲೆನೋವು, ವಾಂತಿ ರೀತಿಯ ಮುಂತಾದ ಸಮಸ್ಯೆಗಳು ಅದಕ್ಕೆ ಕಾರಣ. ಅಂತಹ ಸನ್ನಿವೇಶದಲ್ಲಿ ಕೆಲವು ಮನೆ ಪರಿಹಾರಗಳ ಮೂಲಕ ನೀವು ಅದನ್ನು ತೊಡೆದುಹಾಕಬಹುದು ಮತ್ತು ನಿಮ್ಮ ಪ್ರಯಾಣವನ್ನು ಸ್ಮರಣೀಯಗೊಳಿಸಬಹುದು.

1/7

ಹಣ್ಣುಗಳು ಮತ್ತು ಹಣ್ಣಿನ ರಸ

ನೀವು ಬಸ್ ಅಥವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ, ಹಣ್ಣುಗಳು ಮತ್ತು ರಸವನ್ನು ನಿಮ್ಮೊಂದಿಗೆ ತೆಗೆದುಕೊಳ್ಳಿ ಮತ್ತು ಕಾಲಕಾಲಕ್ಕೆ ಸ್ವಲ್ಪ ಸ್ವಲ್ಪ ಅದನ್ನು ಸೇವಿಸಿ. ಇದು ದೇಹದಲ್ಲಿನ ಶಾಖವನ್ನು ತೆಗೆದುಹಾಕುವುದು ಮತ್ತು ವಾಂತಿ ಮಾಡುವಂತಹ ಸಮಸ್ಯೆಯಿಂದ ಮುಕ್ತಿ ನೀಡುವುದು. ಇದಲ್ಲದೆ, ತಲೆತಿರುಗುವಿಕೆ ಸಮಸ್ಯೆಯಿಂದ ದೂರವಿರಿಸುತ್ತದೆ.

2/7

ಲವಂಗಗಳು

ನೀವು ಪ್ರಯಾಣದ ಸಮಯದಲ್ಲಿ ತಲೆಸುತ್ತು, ತಲೆನೋವು, ವಾಂತಿ ಅಂತಹ ಸಮಸ್ಯೆಗೊಳಗಾಗಿದ್ದರೆ, ಲವಂಗ ರಾಮಬಾಣವಾಗಿದೆ. ಇದಕ್ಕಾಗಿ, ಲವಂಗವನ್ನು ಹುರಿಯಿರಿ ಮತ್ತು ಸಣ್ಣ ಡಬ್ಬಿಯಲ್ಲಿ ಇಟ್ಟುಕೊಳ್ಳಿ. ದೂರ ಪ್ರಯಾಣದ ಸಮಯದಲ್ಲಿ ನಿಮ್ಮ ಬಾಯಿಯಲ್ಲಿ ಪಿಂಚ್(ಚಿಟುಕಿ) ಲವಂಗ ಪುಡಿ ಅಥವಾ ಹುರಿದ ಲವಂಗವನ್ನು ಇರಿಸಿ. ವಾಂತಿ ಮತ್ತು ತಲೆಸುತ್ತಿನಂತಹ ಸಮಸ್ಯೆಯಿಂದ ದೂರವಿರಬಹುದು.

3/7

ನಿಂಬೆಹಣ್ಣು

ನಿಂಬೆನಲ್ಲಿರುವ ಸಿಟ್ರಿಕ್ ಆಮ್ಲವು ತಲೆಸುತ್ತು ಮತ್ತು ವಾಂತಿಗಳಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಯಾವಾಗಲೂ ನಿಮ್ಮೊಂದಿಗೆ ಬಿಸಿನೀರನ್ನು ಇಟ್ಟುಕೊಳ್ಳಿ, ನಿಮಗೆ ವಾಂತಿ ಮಾಡುವಂತೆ ಭಾಸವಾದರೆ, ನಿಂಬೆ ರಸ ಮತ್ತು ಉಪ್ಪನ್ನು ಒಂದು ಕಪ್ ಬಿಸಿ ನೀರಿನಲ್ಲಿ ಮಿಶ್ರ ಮಾಡಿ ಮತ್ತು ಕುಡಿಯಿರಿ. ವಾಂತಿಯ ಸಮಸ್ಯೆ ಪರಿಹರಿಸಲ್ಪಡುತ್ತದೆ.

4/7

ಪುಸ್ತಕ ಓದುವುದು ಮತ್ತು ಮೊಬೈಲ್ ಉಪಯೋಗವನ್ನು ತಪ್ಪಿಸಿ

ಪುಸ್ತಕಗಳು ಮತ್ತು ಮೊಬೈಲ್ನಿಂದ ದೂರವಿರಿ- ಪ್ರಯಾಣದ ಸಮಯದಲ್ಲಿ ನೀವು ಮೊಬೈಲ್ ಅನ್ನು ಬಳಸಿದರೆ ಅಥವಾ ಪುಸ್ತಕಗಳನ್ನು ಓದುವ ಅಭ್ಯಾಸ ಹೊಂದಿದ್ದರೆ, ಅಂತಹ ಅಭ್ಯಾಸದಿಂದ ದೂರವಿರಿ. ಏಕೆಂದರೆ ಹಾಗೆ ಮಾಡುವುದರಿಂದ ತಲೆತಿರುಗುವಿಕೆಗೆ ನಿಲ್ಲುತ್ತದೆ. ನೀವು ಸಾಧ್ಯವಾದಷ್ಟು ನೇರವಾಗಿ ನೋಡಿ ಮತ್ತು ಮುಂಭಾಗದ ಸೀಟಿನಲ್ಲಿ ಕುಳಿತುಕೊಳ್ಳಿ. ಇದು ಪ್ರಯಾಣದ ಸಮಯದಲ್ಲಿ ವಾಂತಿ ಅಥವಾ ತಲೆತಿರುಗುವಿಕೆಯ ಸಮಸ್ಯೆಯನ್ನು ಪರಿಹರಿಸುತ್ತದೆ. (PIC: twitter/@ScotlandYardCSI)

5/7

ಶುಂಠಿ

ಶುಂಠಿ, ನಿಂಬೆ ಮತ್ತು ಲವಂಗಗಳಂತಹ ತಾಜಾತನವನ್ನು ತರುತ್ತದೆ. ಅದರಲ್ಲಿ ಕಂಡುಬರುವ ಆಂಟಿಮಾಂಥೆಟಿಕ್ ಗುಣಲಕ್ಷಣಗಳು ವಾಂತಿ ಮತ್ತು ತಲೆತಿರುಗುವಿಕೆಯ ಸಮಸ್ಯೆಯನ್ನು ತೊಡೆದುಹಾಕುತ್ತವೆ. ಆದ್ದರಿಂದ ನಿಮಗೆ ಪ್ರಯಾಣದ ಸಮಯದಲ್ಲಿ ವಾಂತಿ ಮಾಡುವಂತಾದರೆ,  ಶುಂಠಿಯ ಸಣ್ಣ ತುಂಡನ್ನು ಬಾಯಿಯಲ್ಲಿ ಇರಿಸಿ ಮತ್ತು ಅದರ ರಸವನ್ನು ಹೀರಿಕೊಳ್ಳಿ. ಸ್ವಲ್ಪ ಸಮಯದ ನಂತರ ನೀವು ನಿಮ್ಮ ಸ್ವಂತ ಅನುಭವವನ್ನು ಅನುಭವಿಸುತ್ತೀರಿ. ಈರುಳ್ಳಿಯೊಂದಿಗೆ ಯಾವುದೇ ಸಮಸ್ಯೆ ಇಲ್ಲದಿದ್ದರೆ, ಈರುಳ್ಳಿ ರಸದೊಂದಿಗೆ ಶುಂಠಿ ರಸವನ್ನು ಬೆರೆಸಿ ನೀವು ಪ್ರಯಾಣ ಪ್ರಾರಂಭಿಸುವ  ಕೆಲವು ನಿಮಿಷಗಳ ಮೊದಲು ಅದನ್ನು ಕುಡಿಯಿರಿ. ಪ್ರಯಾಣದ ಸಮಯದಲ್ಲಿ ಮನಸ್ಸು ಉತ್ತಮವಾಗಿರುತ್ತದೆ.  

6/7

ಪುದೀನಾವನ್ನು ಜೊತೆಯಲ್ಲಿ ಇರಿಸಿಕೊಳ್ಳಿ

ಬಸ್ ಅಥವಾ ಕಾರಿನಲ್ಲಿ ಪ್ರಯಾಣಿಸುವಾಗ ಮಿಂಟ್(ಪುದೀನಾ) ಅನ್ನು ನಿಮ್ಮೊಂದಿಗೆ ಇಡಲು ಮರೆಯಬೇಡಿ. ಪುದೀನಾವು ಹೊಟ್ಟೆಯನ್ನು ತಂಪಾಗಿರಿಸುತ್ತದೆ ಮತ್ತು ಸ್ನಾಯುಗಳನ್ನು ಕೂಡ ವಿಶ್ರಾಂತಿಯಿಂದಿರುವಂತೆ ಮಾಡುತ್ತದೆ. ಪುದೀನಾದಿಂದ ಪ್ರಯಾಣದ ಸಮಯದಲ್ಲಿ ಬರುವ ಎಲ್ಲ ಸಮಸ್ಯೆಗಳನ್ನು ಪರಿಹಾರವಾಗುತ್ತದೆ. ನಿಮಗೆ ಸಾಧ್ಯವಾದರೆ ಪುದೀನಾವನ್ನು ಉಂಡೆಗಳನ್ನಾಗಿ ಮಾಡಿ ಸೇವಿಸಬಹುದು ಅಥವಾ ಪುದೀನಾ ರಸ(ಜ್ಯೂಸ್) ಮಾಡಿ ಕುಡಿಯಬಹುದು.  

7/7

ಜಂಕ್ ಫುಡ್ ನಿಂದ ದೂರ

ಪ್ರಯಾಣದ ಸಮಯದಲ್ಲಿ ಫುಡ್ ನಿಂದ ದೂರವಿರಿ. ಜಂಕ್ ಫುಡ್ ನಿಂದ ತಿನ್ನುವುದರಿಂದ ಹೊಟ್ಟೆಯಲ್ಲಿ ಅನಿಲ ಮತ್ತು ಮಲಬದ್ಧತೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದುದರಿಂದ, ವಾಂತಿ ಮತ್ತು ತಲೆತಿರುಗುವಿಕೆಯ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಆದ್ದರಿಂದ ಅವುಗಳನ್ನು ಸಾಧ್ಯವಾದಷ್ಟು ದೂರವಿರಿಸಿ ಮತ್ತು ನಿಮ್ಮೊಂದಿಗೆ ಸರಳ ಮತ್ತು ಕಡಿಮೆ ಎಣ್ಣೆಯುಳ್ಳ ಆಹಾರವನ್ನು ಇರಿಸಿಕೊಳ್ಳಿ. ಚಾಲನೆ ಮಾಡುವಾಗ ಆಹಾರ ಸೇವನೆ ತಪ್ಪಿಸಿ.