2023 ಆರಂಭವಾಗುತ್ತಿದ್ದಂತೆಯೇ ಐದು ರಾಶಿಯವರಿಗೆ ಅಪಾರ ಹಣ ಸಂಪತ್ತು ಕರುಣಿಸುತ್ತಾನೆ ಗುರು ಬೃಹಸ್ಪತಿ

ಹೊಸ ವರ್ಷ ಅಂದರೆ 2023 ರ ವರ್ಷದ ಆರಂಭ ಗುರುಗ್ರಹದ ಸಂಕ್ರಮಣದಿಂದಲೇ ಆಗಲಿದೆ. ಮೇಷ ರಾಶಿಗೆ ಗುರು ಪ್ರವೇಶವಾಗುತ್ತಿದ್ದಂತೆಯೇ 5 ರಾಶಿಯವರ ಅದೃಷ್ಟ ಬದಲಾಗಲಿದೆ. 
 

ಬೆಂಗಳೂರು :  ದೇವಗುರು ಬೃಹಸ್ಪತಿ ವ್ಯಕ್ತಿಯ ಅದೃಷ್ಟವನ್ನು ಹೆಚ್ಚಿಸುವ  ಗ್ರಹ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ ಗುರುವಿನ ಸಂಚಾರವನ್ನು ಜ್ಯೋತಿಷ್ಯದಲ್ಲಿ ಬಹಳ ಮುಖ್ಯ ಎಂದು ಹೇಳಲಾಗುತ್ತದೆ. ಜೀವನದಲ್ಲಿ ಅದೃಷ್ಟ, ಸಂತೋಷ ಮತ್ತು ಸಮೃದ್ಧಿಯನ್ನು ಗುರು ಕರುಣಿಸುತ್ತಾನೆ.   ಜಾತಕದಲ್ಲಿ ಗುರು ಶುಭ ಸ್ಥಾನದಲ್ಲಿದ್ದರೆ, ವೈವಾಹಿಕ ಜೀವನದಲ್ಲಿ ಸಂತೋಷ ತರಲಿದೆ. ಇನ್ನೇನು ಹೊಸ ವರ್ಷ ಆರಂಭವಾಗಲಿದೆ. ಹೊಸ ವರ್ಷ ಅಂದರೆ 2023 ರ ವರ್ಷದ ಆರಂಭ ಗುರುಗ್ರಹದ ಸಂಕ್ರಮಣದಿಂದಲೇ ಆಗಲಿದೆ. ಮೇಷ ರಾಶಿಗೆ ಗುರು ಪ್ರವೇಶವಾಗುತ್ತಿದ್ದಂತೆಯೇ 5 ರಾಶಿಯವರ ಅದೃಷ್ಟ ಬದಲಾಗಲಿದೆ

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

1 /5

ಮಿಥುನ ರಾಶಿ : ಆದಾಯ ಹೆಚ್ಚಾಗಲಿದೆ. ಎಲ್ಲಾ ಕಡೆಯಿಂದಲೂ ಲಾಭವಾಗಲಿದೆ. ಏನೇ ಕೆಲಸ ಮಾಡಿದರೂ ಅದೃಷ್ಟ ಕೈ ಹಿಡಿಯಲಿದೆ. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಯಶಸ್ಸು ಸಿಗಲಿದೆ. ಪ್ರಸ್ತುತ ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಹಣ ಪಡೆಯಲು ಹೊಸ ಮಾರ್ಗಗಳು ಕಂಡುಬರುತ್ತವೆ

2 /5

ಕರ್ಕಾಟಕ ರಾಶಿ : ಕರ್ಕಾಟಕ ರಾಶಿಯವರಿಗೆ ಗುರುವಿನ ಸಂಚಾರವು ಬಹಳಷ್ಟು ಲಾಭವನ್ನು ನೀಡುತ್ತದೆ. ವೃತ್ತಿ ಜೀವನದಲ್ಲಿ ಅನೇಕ ಹೊಸ ಅವಕಾಶಗಳು ಬರಲಿವೆ. ಬಡ್ತಿ ಸಿಗುವುದರೊಂದಿಗೆ ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ. 

3 /5

ಕನ್ಯಾ ರಾಶಿ : ಏನೇ ಕೆಲಸ ಮಾಡಿದರೂ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ. ಕುಟುಂಬದಲ್ಲಿ ಸಂತೋಷ ನೆಲೆಯಾಗುತ್ತದೆ. ವೈವಾಹಿಕ ಜೀವನವು ಪ್ರೀತಿಯಿಂದ ತುಂಬಿರುತ್ತದೆ.  ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ.  

4 /5

ತುಲಾ ರಾಶಿ : 2023ರಲ್ಲಿ ತುಲಾ ರಾಶಿಯವರ ಮೇಲೆ ಗುರುವಿನ ಆಶೀರ್ವಾದ ಬಹಳವಾಗಿ ಇರಲಿದೆ. ಉದ್ಯೋಗಸ್ಥರಿಗೆ ವಿಶೇಷ ಗೌರವ ಸಿಗಲಿದೆ. ಕಂಡ ಕನಸು ನನಸಾಗಲಿದೆ. ಹೊಸ ಉದ್ಯೋಗ ಸಿಗಬಹುದು. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. 

5 /5

ಮೀನ ರಾಶಿ : ಗುರುವಿನ ರಾಶಿಯ ಬದಲಾವಣೆಯು ಮೀನ ರಾಶಿಯವರಿಗೆ  ಆರ್ಥಿಕ ಲಾಭ ನೀಡಲಿದೆ. ನಾನಾ ಮೂಲಗಳಿಂದ ಆದಾಯ ಹರಿದು ಬರಲಿದೆ. .  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)