Eyes Care: ಮಕ್ಕಳನ್ನು ಕನ್ನಡಕದಿಂದ ದೂರವಿರಿಸಲು, ದೃಷ್ಟಿ ಸುಧಾರಣೆಗೆ ಡಯಟ್ನಲ್ಲಿ ಇರಲೇಬೇಕು ಈ ಆಹಾರಗಳು

Eyes Care: ಬದಲಾದ ಜೀವನಶೈಲಿಯಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಕನ್ನಡಕ ಧರಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಗ್ಯಾಜೆಟ್ಗಳ ಅತಿಯಾದ ಬಳಕೆಯಿಂದಾಗಿ ಕಣ್ಣುಗಳು ದುರ್ಬಲಗೊಳ್ಳುತ್ತದೆ. ಹಾಗಾಗಿಯೇ, ಕನ್ನಡಕ ಅನಿವಾರ್ಯವಾಗಿರುತ್ತದೆ. ಆದರೆ, ನಿಮ್ಮ ಡಯಟ್ನಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಸೇರಿಸುವ ಮೂಲಕ ದೃಷ್ಟಿಯನ್ನು ಸುಧಾರಿಸಬಹುದು ಎಂದು ನಿಮಗೆ ತಿಳಿದಿದೆಯೇ? 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಪ್ರಸ್ತುತ, ಗ್ಯಾಜೆಟ್ ಗಳ ಅತಿಯಾದ ಬಳಕೆಯಿಂದಾಗಿ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಕನ್ನಡಕ ಧರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದುರ್ಬಲ ದೃಷ್ಟಿಯಿಂದಾಗಿ ಉದ್ಭವಿಸಿರುವ ಈ ಸಮಸ್ಯೆಗಳ ಬಗ್ಗೆ ಸರಿಯಾಗಿ ಕಾಳಜಿ ವಹಿಸದಿದ್ದರೆ, ಸಾರ್ವಕಾಲಿಕವಾಗಿ ಕನ್ನಡಕ ಧರಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಡಯಟ್ನಲ್ಲಿ ಕೆಲವು ಆಹಾರಗಳನ್ನು ಸೇರಿಸುವುದು ತುಂಬಾ ಅಗತ್ಯವಾಗಿದೆ. ಅಂತಹ ಆಹಾರಗಳೆಂದರೆ... 

2 /6

ಕ್ಯಾರೆಟ್:  ಮಕ್ಕಳ ದಿನ ನಿತ್ಯದ ಡಯಟ್ನಲ್ಲಿ ಕ್ಯಾರೆಟ್ ಅನ್ನು ಸೇವಿಸುವುದರಿಂದ ದೃಷ್ಟಿ ದೋಷವನ್ನು ನಿವಾರಿಸಬಹುದು. ಕ್ಯಾರೆಟ್‌ನಿಂದ ತಯಾರಿಸಿದ ವಸ್ತುಗಳನ್ನು ಮಕ್ಕಳ ಆಹಾರದಲ್ಲಿ ಸೇರಿಸಬೇಕು. ವಾಸ್ತವವಾಗಿ, ಕ್ಯಾರೆಟ್ ನಲ್ಲಿ ವಿಟಮಿನ್ ಎ ಕಂಡು ಬರುತ್ತದೆ. ಇದು ಕಣ್ಣಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. 

3 /6

ಕಿತ್ತಳೆ ಹಣ್ಣು: ಕಣ್ಣಿನ ತಜ್ಞರ ಪ್ರಕಾರ, ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿ ಕಂಡು ಬರುತ್ತದೆ. ಇದರಲ್ಲಿರುವ ಪೋಷಕಾಂಶಗಳು ದೃಷ್ಟಿಯನ್ನು ಸುಧಾರಿಸಲು ಸಹಕಾರಿ ಆಗಿರುವುದರಿಂದ ನಿತ್ಯ ನಿಮ್ಮ ಆಹಾರದಲ್ಲಿ ಅದರಲ್ಲೂ ವಿಶೇಷವಾಗಿ ಮಕ್ಕಳ ಆಹಾರದಲ್ಲಿ ಕಿತ್ತಳೆಹಣ್ಣನ್ನು ಸೇರಿಸುವುದರಿಂದ ದೃಷ್ಟಿಯನ್ನು ಬಳಪಡಿಸಬಹುದು.

4 /6

ಪರಂಗಿ ಹಣ್ಣು:  ಪರಂಗಿ ಹಣ್ಣಿನಲ್ಲಿ  ವಿಟಮಿನ್ ಎ ಮತ್ತು ವಿಟಮಿನ್ ಸಿ ಹೇರಳವಾಗಿ ಕಂಡು ಬರುತ್ತದೆ. ಹಾಗಾಗಿ, ಮಕ್ಕಳಲ್ಲಿ ದೃಷ್ಟಿ ದೋಷವನ್ನು ನಿವಾರಿಸಿ, ಅವರ ದೃಷ್ಟಿಯನ್ನು ಸುಧಾರಿಸಲು ಪರಂಗಿ ಹಣ್ಣು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. 

5 /6

ಬೀನ್ಸ್:  ಬೀನ್ಸ್ ನಲ್ಲಿ ಕಂಡು ಬರುವ ಕೆಲವು ಪೋಷಕಾಂಶಗಳು ದೃಷ್ಟಿ ದೋಷವನ್ನು ನಿವಾರಿಸಲು ತುಂಬಾ ಪ್ರಯೋಜನಕಾರಿ ಆಗಿದೆ. 

6 /6

ಬ್ರೊಕೊಲಿ:  ಬ್ರೊಕೊಲಿಯಲ್ಲಿ ವಿಟಮಿನ್ ಗಳು ಉತ್ತಮ ಪ್ರಮಾಣದಲ್ಲಿ ಕಂಡು ಬರುತ್ತದೆ. ಪ್ರತಿ ದಿನ ಬ್ರೊಕೊಲಿ ಸೇವಿಸುವುದರಿಂದ ಇದು ತೂಕ ಇಳಿಕೆಯನ್ನು ಉತ್ತೇಜಿಸುವ ಜೊತೆಗೆ ದೃಷ್ಟಿಯನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ.  ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.