Income Tax Update: ನೀವು ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡರೆ, 10 ಲಕ್ಷದವರೆಗಿನ ವಾರ್ಷಿಕ ಆದಾಯದ ಮೇಲೆ ನೀವು 1 ರೂಪಾಯಿ ತೆರಿಗೆಯನ್ನು ಕೂಡ ಪಾವತಿಸಬೇಕಾಗಿಲ್ಲ ಎಂದು ತೆರಿಗೆ ತಜ್ಞರು ಹೇಳುತ್ತಾರೆ. ಆದರೆ, ಇದಕ್ಕಾಗಿ ನೀವು ಹಲವು ರೀತಿಯ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು.
Income Tax Latest Update: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023 ರ ಬಜೆಟ್‌ನಲ್ಲಿ ಆದಾಯ ತೆರಿಗೆ ಕುರಿತು ದೊಡ್ಡ ಘೋಷಣೆ ಮಾಡಿದ್ದಾರೆ. ಈ ಘೋಷಣೆಯ ಪ್ರಕಾರ ಹೊಸ ತೆರಿಗೆ ಪದ್ಧತಿಯನ್ನು ಅಳವಡಿಸಿಕೊಳ್ಳುವ ಆದಾಯ ತೆರಿಗೆದಾರರು 7 ಲಕ್ಷದವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. 7 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯದ ಮೇಲೆ ಆದಾಯ ತೆರಿಗೆ ಪಾವತಿಸಬೇಕಾಗುತ್ತದೆ. ಆದರೆ, ನೀವು ಸ್ವಲ್ಪ ಜಾಣತನವನ್ನು ಉಪಯೋಗಿಸಿದರೆ ವಾರ್ಷಿಕ 10 ಲಕ್ಷ ರೂ.ಗಳ ಸಂಬಳದ ವ್ಯಕ್ತಿ ಕೂಡ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. 10 ಲಕ್ಷ ಆದಾಯವನ್ನು ತೆರಿಗೆ ಮುಕ್ತಗೊಳಿಸಲು, ಆದಾಯ ತೆರಿಗೆ ಪಾವತಿದಾರರು ಹಳೆಯ ತೆರಿಗೆ ಪದ್ಧತಿಯನ್ನು ಆರಿಸಿಕೊಳ್ಳಬೇಕಾಗುತ್ತದೆ ಎಂದು ತೆರಿಗೆ ತಜ್ಞರು ಹೇಳುತ್ತಾರೆ. ಅಂದಹಾಗೆ, ಸರ್ಕಾರವು ಈ ವರ್ಷ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಮೂಲ ತೆರಿಗೆ ವಿನಾಯಿತಿಯ ವ್ಯಾಪ್ತಿಯನ್ನು 3 ಲಕ್ಷಕ್ಕೆ ಹೆಚ್ಚಿಸಿದೆ, ಆದರೆ ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಅಂತಹ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಅಂದರೆ ತೆರಿಗೆ ವಿನಾಯಿತಿ ಮಿತಿಯನ್ನು ಇನ್ನೂ ರೂ 2.5 ಲಕ್ಷ ರೂ. ನಲ್ಲಿ ಇರಿಸಲಾಗಿದೆ. ಹೊಸ ತೆರಿಗೆ ಪದ್ಧತಿಯ ವಿಶೇಷತೆ ಎಂದರೆ ಇದು ಯಾವುದೇ ರೀತಿಯ ಉಳಿತಾಯ ಅಥವಾ ತೆರಿಗೆ ವಿನಾಯಿತಿಯನ್ನು ನೀಡುವುದಿಲ್ಲ, ಆದರೆ ಹಳೆಯ ತೆರಿಗೆ ವ್ಯವಸ್ಥೆಯಲ್ಲಿ, ಗೃಹ ಸಾಲದಿಂದ ವಿಮಾ ಪಾಲಿಸಿಯವರೆಗೆ ತೆರಿಗೆ ಉಳಿತಾಯ ಸೌಲಭ್ಯ ಲಭ್ಯವಿದೆ.
ಇದನ್ನೂ ಓದಿ-ಶನಿದೋಷದಿಂದ ಮುಕ್ತಿ ನೀಡಿ, ಹಣದ ಸುರಿಮಳೆಗೆ ಕಾರಣವಾಗುವ ಈ ವಿಷ್ಣುಪ್ರಿಯ ಸಸ್ಯ ನಿಮ್ಮ ಮನೆಯಲ್ಲೂ ಇರಲಿ!
10 ಲಕ್ಷ ಆದಾಯದ ಮೇಲೆ ಶೂನ್ಯ ತೆರಿಗೆ - ಲೈವ್ ಮಿಂಟ್ ನಲ್ಲಿ ಪ್ರಕಟಗೊಂಡ ಒಂದ ವರದಿಯ ಪ್ರಕಾರ, ಸಂಬಳ ಪಡೆಯುವ ವ್ಯಕ್ತಿ ತನ್ನ ಕೆಲಸದಿಂದ ಒಟ್ಟು ಆದಾಯ 10 ಲಕ್ಷ ರೂಪಾಯಿಗಳಿದ್ದರೂ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ಆರ್‌ಎಸ್‌ಎಂ ಸಂಸ್ಥಾಪಕ ಡಾ. ಸುರೇಶ್ ಸುರಾನಾ ಹೇಳಿದ್ದಾರೆ. ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆದಾರನು ಸರಿಯಾಗಿ ಯೋಜನೆ ಮಾಡಿದರೆ, ಅವನು 10 ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಬಹುದು, ಏಕೆಂದರೆ ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಅನೇಕ ವಿನಾಯಿತಿಗಳು ಲಭ್ಯವಿದೆ.
ಇದನ್ನೂ ಓದಿ-ಶೀಘ್ರದಲ್ಲಿಯೇ ಮಂಗಳನ ಅಂಗಳದಲ್ಲಿ ತ್ರಿಗ್ರಹಿ ಯೋಗ 5 ರಾಶಿಗಳ ಜನರ ಜೀವನದಲ್ಲಿ ಅಪಾರ ಧನವೃಷ್ಟಿ!
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಪ್ರಮಾಣಿತ ಕಡಿತ- ಹಳೆ ತೆರಿಗೆ ಪದ್ಧತಿಯಲ್ಲಿ 50,000 ವರೆಗೆ ಪ್ರಮಾಣಿತ ಕಡಿತ ಸೌಲಭ್ಯ ಲಭ್ಯವಿದೆ ಎನ್ನುತ್ತಾರೆ ಡಾ.ಸುರಾನಾ. ಮೊದಲು ಅದನ್ನು ನಿಮ್ಮ ಆದಾಯದಿಂದ ವಜಾಗೊಳಿಸಿ. ಈ 50,000 ರೂ.ಗಳನ್ನು 10 ಲಕ್ಷದಿಂದ ಕಡಿತಗೊಳಿಸಿದ ನಂತರ ನಿವ್ವಳ ಆದಾಯ 9,50,000 ರೂ.ಗಲಾಗುತ್ತದೆ
ವಿಭಾಗ 80 ಸಿ- ಹಳೆಯ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ, ನೀವು EPF, PPF, ELSS, NSC ನಲ್ಲಿ ಹೂಡಿಕೆ ಮಾಡುವ ಮೂಲಕ 1.5 ಲಕ್ಷ ರೂಪಾಯಿಗಳನ್ನು ಉಳಿಸಬಹುದು. ಈ ರೂ 1.5 ಲಕ್ಷವನ್ನು ಕಡಿತಗೊಳಿಸಿದ ನಂತರ, ನಿಮ್ಮ ತೆರಿಗೆ ಹೊಣೆಗಾರಿಕೆಯು ರೂ 8.5 ಲಕ್ಷಕ್ಕೆ ಇಳಿಯುತ್ತದೆ.
ವಿಭಾಗ 80CCD- ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ (NPS) ವಾರ್ಷಿಕವಾಗಿ ರೂ 50,000 ವರೆಗೆ ಹೂಡಿಕೆ ಮಾಡುವ ಮೂಲಕ, ನೀವು ಸೆಕ್ಷನ್ 80CCD (1B) ಅಡಿಯಲ್ಲಿ ಆದಾಯ ತೆರಿಗೆಯಲ್ಲಿ ರೂ 50,000 ಉಳಿಸಬಹುದು. ಒಟ್ಟು ಆದಾಯದಲ್ಲಿ ಈ 50 ಸಾವಿರ ರೂ. ಈಗ ನಿಮ್ಮ ಹೊಣೆಗಾರಿಕೆಯ 7.5 ಲಕ್ಷ ಆದಾಯ ತೆರಿಗೆ ವ್ಯಾಪ್ತಿಗೆ ಬರುತ್ತದೆ.
ವಿಭಾಗ 24b- ನೀವು ಮನೆ ಖರೀದಿಸಿದ್ದರೆ ವಾರ್ಷಿಕ 2 ಲಕ್ಷ ತೆರಿಗೆ ಉಳಿಸಬಹುದು. ಆದಾಯ ತೆರಿಗೆಯ ಸೆಕ್ಷನ್ 24B ಅಡಿಯಲ್ಲಿ ಗೃಹ ಸಾಲಕ್ಕೆ ವಿನಾಯಿತಿ ಇದೆ. ಇದನ್ನು ನಿಮ್ಮ ವಾರ್ಷಿಕ ಆದಾಯದಿಂದ ಕಡಿತಗೊಳಿಸಿ. ಈಗ ನಿಮ್ಮ 5.50 ಲಕ್ಷ ರೂ.ವರೆಗಿನ ಆದಾಯ ತೆರಿಗೆ ವ್ಯಾಪ್ತಿಗೆ ಬರುತ್ತದೆ.
ವಿಭಾಗ 80D- ಐಟಿ ಕಾಯ್ದೆಯ ಸೆಕ್ಷನ್ 80ಡಿ ಅಡಿಯಲ್ಲಿ ವೈದ್ಯಕೀಯ ಪಾಲಿಸಿಯನ್ನು ತೆಗೆದುಕೊಳ್ಳುವ ಮೂಲಕ ನೀವು 25,000 ರೂ.ವರೆಗೆ ತೆರಿಗೆ ಉಳಿಸಬಹುದು. ಇದಲ್ಲದೆ, ನಿಮ್ಮ ಪೋಷಕರು ಹಿರಿಯ ನಾಗರಿಕರಾಗಿದ್ದರೆ, ಅವರ ಹೆಸರಿನಲ್ಲಿ ಆರೋಗ್ಯ ವಿಮೆಯನ್ನು ಖರೀದಿಸುವ ಮೂಲಕ ನೀವು ರೂ 50,000 ವರೆಗೆ ಹೆಚ್ಚುವರಿ ಕಡಿತವನ್ನು ಪಡೆಯಬಹುದು. ಹೀಗೆ 75,000 ರೂಪಾಯಿಗಳನ್ನು ಉಳಿಸುವುದರಿಂದ ನಿಮ್ಮ ತೆರಿಗೆ ಹೊಣೆಗಾರಿಕೆಯು 5,50,000 ರೂಪಾಯಿಗಳಿಂದ 4,75,000 ರೂಪಾಯಿಗಳಿಗೆ ಕಡಿಮೆಯಾಗುತ್ತದೆ.
ವಿಭಾಗ 87a- ಆದಾಯ ತೆರಿಗೆ ನಿಯಮಗಳು ರೂ 5 ಲಕ್ಷ ಆದಾಯದ ಮೇಲಿನ ತೆರಿಗೆ ರೂ 12,500 (ರೂ 2.5 ಲಕ್ಷದಲ್ಲಿ 5%) ಎಂದು ಸ್ಪಷ್ಟವಾಗಿ ಹೇಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಆದಾಯ ತೆರಿಗೆ ಸೆಕ್ಷನ್ 87 ಎ ಅಡಿಯಲ್ಲಿ 12500 ರೂ ರಿಯಾಯಿತಿ ಲಭ್ಯವಿದೆ, ಏಕೆಂದರೆ ಎಲ್ಲಾ ಕಡಿತಗಳ ಲಾಭವನ್ನು ಪಡೆಯುವ ಮೂಲಕ, ನೀವು 5 ಲಕ್ಷಗಳ ಸ್ಲ್ಯಾಬ್‌ನಲ್ಲಿಯೂ ಬಂದಿದ್ದೀರಿ ಮತ್ತು ನೀವು ಶೂನ್ಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.