ಇಂದು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದಿಂದಾಗಿ ನಾಲ್ಕು ವರ್ಷಗಳ ಹಿಂದೆ ಆರಂಭವಾದ ಯೋಗ ದಿನವನ್ನು ಇಡೀ ವಿಶ್ವವೇ ಸ್ವೀಕರಿಸಿದೆ. ಈ ಹಿನ್ನಲೆಯಲ್ಲಿ ಇಂದು ಭಾರತೀಯ ನೌಕಾ ದಳದ ಸಿಬ್ಬಂದಿ ಸಮುದ್ರದಲ್ಲಿ ಹಡಗಿನಲ್ಲಿಯೇ ಯೋಗ ಪ್ರದರ್ಶನ ಮಾಡಿದರು.
ನಾಲ್ಕನೇ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ವಿಶಾಖಪಟ್ಟಣದ ಪೂರ್ವದ ನೌಕಾ ಕಮಾಂಡ್ ಸಿಬ್ಬಂದಿ ಬಂಗಾಳ ಕೊಲ್ಲಿಯಲ್ಲಿ ಐಎನ್ಎಸ್ ಜ್ಯೋತಿಯಲ್ಲಿ ಯೋಗಾಭಾಸ ಮಾಡಿದರು.
ಕೇರಳದ ಕೊಚ್ಚಿಯ ನೌಕಾಪಡೆಯ ಸೈನಿಕರೂ ಸಹ ಐಎನ್ಎಸ್ ಜಮುನಾದಲ್ಲಿ ಯೋಗ ಮಾಡುವ ಮೂಲಕ ಯೋಗ ದಿನ ಆಚರಿಸಿದರು.
ಈಸ್ಟರ್ನ್ ನೌಕಾ ಕಮ್ಯಾಂಡ್'ನ ಜಲಾಂತರ್ಗಾಮಿ ಸಿಬ್ಬಂದಿಗಳು, ಜಲಾಂತರ್ಗಾಮಿ ನೌಕೆಯಲ್ಲಿ ಯೋಗಾಸನ ಮಾಡಿದರು.
ಮಹಾರಾಷ್ಟ್ರದ ನೌಕಾಪಡೆ ಯೋಧರು ಐಎನ್ಎಸ್ ವಿರಾಟ್'ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಿದರು. (ಎಲ್ಲಾ ಫೋಟೋಗಳ ಕೃಪೆ: ANI)