ಮೇ 17 ರಿಂದ ಮೇ 28ರವರೆಗೆ ಕಾನ್ ಸಿನಿಮೋತ್ಸವ ನಡೆಯಲಿದ್ದು , ವಿಶ್ವದ ನಾನಾ ಸಿನಿಮಾರಂಗವನ್ನು ಒಟ್ಟುಗೂಡಿಸುತ್ತದೆ. 12 ದಿನಗಳ ಕಾಲ ನಡೆಯುವ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಸಿನಿ ಜಗತ್ತಿನ ಗಣ್ಯರು ಭಾಗಿಯಾಗುತ್ತಾರೆ.
ಕೇನ್ಸ್ (ಫ್ರಾನ್ಸ್): ವಿಶ್ವದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಚಲನಚಿತ್ರ ವೇದಿಕೆಗಳಲ್ಲಿ ಒಂದಾಗಿರುವ ಕೇನ್ಸ್ ಚಲನಚಿತ್ರೋತ್ಸವಕ್ಕೆ 75 ವರ್ಷ ತುಂಬಿದೆ. ಇನ್ನು ಈ ವರ್ಷದ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರ ಸದಸ್ಯರಲ್ಲಿ ಒಬ್ಬರಾಗಿ ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಭಾರತವನ್ನು ಪ್ರತಿನಿಧಿಸಿದ್ದಾರೆ.
ಫ್ರೆಂಚ್ ನಟ ವಿನ್ಸೆಂಟ್ ಲಿಂಡನ್ ಅವರು 75ನೇ ಕೇನ್ಸ್ ಚಲನಚಿತ್ರೋತ್ಸವದ ತೀರ್ಪುಗಾರರ(ಜ್ಯೂರಿ) ಅಧ್ಯಕ್ಷರಾಗಿರುತ್ತಾರೆ. ಕೇನ್ಸ್ ಚಲನಚಿತ್ರೋತ್ಸವವು ಮೇ 17 ರಂದು ಪ್ರಾರಂಭವಾಗಲಿದೆ. ವಿಜೇತರನ್ನು ಮೇ 28 ರಂದು ಕೇನ್ಸ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಘೋಷಿಸುತ್ತಾರೆ.
ಕೇನ್ಸ್ ಚಲನಚಿತ್ರೋತ್ಸವದಲ್ಲಿ ನಡೆಯುವ ರೆಡ್ ಕಾರ್ಪೆಟ್‌ಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಗೌರವವಿದೆ. 2017ರಲ್ಲಿ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ಗೆ ದೀಪಿಕಾ ಪಡುಕೋಣೆ ಪಾದಾರ್ಪಣೆ ಮಾಡಿದ್ದರು. ಇನ್ನು ಈ ಬಾರಿ ತೀರ್ಪುಗಾರರಾಗಿ ಆಸ್ಕರ್ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಅಸ್ಗರ್ ಫರ್ಹಾದಿ, ಜೆಫ್ ನಿಕೋಲ್ಸ್, ರೆಬೆಕಾ ಹಾಲ್, ನೂಮಿ, ಇಟಾಲಿಯನ್ ನಟಿ - ನಿರ್ದೇಶಕಿ ಜಾಸ್ಮಿನ್ ಟ್ರಿಂಕಾ, ಲಾಡ್ಜ್ ಲೈ, ಜೋಕಿಮ್ ಟ್ರೈಯರ್ ಇದ್ದಾರೆ.
ಕೇನ್ಸ್ ಚಲನಚಿತ್ರೋತ್ಸವ ಈ ಬಾರಿ 75ನೇ ವರ್ಷವನ್ನು ಆಚರಿಸಿಕೊಳ್ಳಲಿದೆ. ಇದು ವಿಶ್ವದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಚಲನಚಿತ್ರ ವೇದಿಕೆಗಳಲ್ಲಿ ಒಂದು. ಇದನ್ನು ಸಾಂಪ್ರದಾಯಿಕವಾಗಿ ಕ್ರೊಯಿಸೆಟ್‌ನಲ್ಲಿನ ಪಲೈಸ್ ಡೆಸ್ ಫೆಸ್ಟಿವಲ್‌ಗಳಲ್ಲಿ ನಡೆಸಲಾಗುತ್ತದೆ.
ಕಾನ್ ಸಿನಿಮೋತ್ಸವದಲ್ಲಿ ಅನುರಾಗ್ ಠಾಕೂರ್, ತಮ್ಮನ್ನಾ ಭಾಟಿಯಾ, ಮಾಧವನ್, ಐಶ್ವರ್ಯ ರೈ ಸೇರಿದಂತೆ ಭಾರತೀಯ ಸಿನಿರಂಗದ ಅನೇಕರು ಭಾಗಿಯಾಗಿದ್ದಾರೆ.