Investment In Gold - ಚಿನ್ನದಲ್ಲಿ ಹೂಡಿಕೆ ಮಾಡಲು ಇದೆ ಸರಿಯಾದ ಸಮಯ, ಯಾವ ಆಪ್ಶನ್ ನಲ್ಲಿನ ಹೂಡಿಕೆ ಹೆಚ್ಚು ಲಾಭದಾಯಕ

Investment In Gold - ಪ್ರಸ್ತುತ ಹಣದುಬ್ಬರ (Inflation) ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ ಮತ್ತು ಹಣದುಬ್ಬರವು ಮುಂದಿನ ದಿನಗಳಲ್ಲಿ ಹೆಚ್ಚಿನ ಮಟ್ಟಕ್ಕೆ ಹೋಗುತ್ತದೆ, ಆದ್ದರಿಂದ ಚಿನ್ನದಲ್ಲಿ ಹೂಡಿಕೆ ಮಾಡಲು ಇದು ಸರಿಯಾದ ಸಮಯ. ಈ ಸಮಯದಲ್ಲಿ ನೀವು ಚಿನ್ನದಲ್ಲಿ ಹೂಡಿಕೆ (Investment In Gold) ಮಾಡಲು ಹಲವು ಆಯ್ಕೆಗಳನ್ನು ಹೊಂದಿರುವಿರಿ. ಆದರೆ ಈ ಆಯ್ಕೆಗಳಿಂದ ಉತ್ತಮ ಆದಾಯ ನೀಡುವ ಉತ್ಪನ್ನ ಆಯ್ಕೆ ಮಾಡುವುದು ಬಹಳ ಮುಖ್ಯ.

ನವದೆಹಲಿ:  Investment In Gold - ಜಾಗತಿಕ ಮಾರುಕಟ್ಟೆ ಸೇರಿದಂತೆ ದೇಶೀಯ ಮಾರುಕಟ್ಟೆಯಲ್ಲಿಯೂ ಕೂಡ ಕಳೆದ ಕೆಲ ದಿನಗಳಿಂದ  ಚಿನ್ನದ ಬೆಲೆ (Gold Rate) ನಿರಂತರವಾಗಿ ಕುಸಿಯುತ್ತಿದೆ. ಆದರೆ ಈ ಸುಸ್ತಿಯ ಸಮಯ ಹೆಚ್ಚು ಕಾಲ ಉಳಿಯುವುದಿಲ್ಲ. ಕರೋನಾ ಲಸಿಕೆ ಪರಿಚಯಿಸುವುದರೊಂದಿಗೆ, ವಿಶ್ವ ಆರ್ಥಿಕತೆಯ ಜೊತೆಗೆ ಭಾರತೀಯ ಆರ್ಥಿಕತೆಯಲ್ಲೂ (Indidan Economy) ಪರಿಸ್ಥಿತಿ ಸುಧಾರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಹಣದುಬ್ಬರ(Inflation) ಹೆಚ್ಚಾಗುವುದು ನಿಶ್ಚಿತ. ಭಾರತದಲ್ಲಿ ಹಣದುಬ್ಬರ ಪ್ರಸ್ತುತ ಅತ್ಯಂತ ಕೆಳಮಟ್ಟದಲ್ಲಿದೆ. ಆದರೆ ಇದು ಈ ಕೆಳಗೆ ಹೋಗುವುದಿಲ್ಲ. ಇದರರ್ಥ ಹಣದುಬ್ಬರದ ಗ್ರಾಫ್ (Rise In Inflation) ಇಲ್ಲಿಂದ ಏರಲು ಪ್ರಾರಂಭಿಸುತ್ತದೆ.

 

ಇದನ್ನು ಓದಿ-Gold Price Today - Good News:ವಾರದ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಇಳಿಕೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

ಚಿನ್ನದ ಹೂಡಿಕೆಯ ಮೇಲೆ ಹೆಚ್ಚು ಲಾಭಗಳಿಸಲು ಹಣದುಬ್ಬರದ ಮೇಲೆ ನಿಗಾ ಇಡುವುದು ತುಂಬಾ ಮುಖ್ಯವಾದ ಅಂಶವಾಗಿದೆ. ಹಣದುಬ್ಬರ ಹೆಚ್ಚುತ್ತಿದೆ ಎಂದು ನೀವು ಭಾವಿಸಿದರೆ, ನಂತರ ಚಿನ್ನದ ಮೇಲೆ ಹೂಡಿಕೆ ಮಾಡಲು ಪ್ರಾರಂಭಿಸಿ ಏಕೆಂದರೆ ಅದು ಹಣದುಬ್ಬರದ ವಿರುದ್ಧದ ಉತ್ತಮ ಲಾಭವಾಗಿದೆ. ಹಣದುಬ್ಬರದ ಪ್ರವೃತ್ತಿಯನ್ನು ನೀವು ಎಷ್ಟು ಬೇಗನೆ ಕಂಡು ಹಿಡಿಯುತ್ತೀರೋ ಅಷ್ಟು ಬೇಗ ನೀವು ಹೂಡಿಕೆಯನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಆರ್‌ಬಿಐನಿಂದ ಹೆಚ್ಚಿನ ಕರೆನ್ಸಿ ವಿತರಣೆಯನ್ನು ನೀವು ಚಿನ್ನದಲ್ಲಿ ಹೂಡಿಕೆ ಹೆಚ್ಚಿಸುವ ಸಂಕೇತವೆಂದು ಪರಿಗಣಿಸಬಹುದು. ಚಿನ್ನದ ಬೆಲೆಯ ಚಕ್ರವನ್ನು ನೀವು ಮೇಲ್ವಿಚಾರಣೆ ಮಾಡಲು ಸಾಧ್ಯವಾದರೆ ಉತ್ತಮ. ಬೀಳುವ ಬೆಲೆಯಲ್ಲಿ ಚಿನ್ನವನ್ನು ಖರೀದಿಸುವುದು ಮತ್ತು ಹೆಚ್ಚಾಗುತ್ತಿರುವ ಬೆಲೆಯಲ್ಲಿ ಮಾರಾಟ ಮಾಡುವುದು ಒಂದು ಉತ್ತಮ ತಂತ್ರವಾಗಿದೆ.

2 /3

ಚಿನ್ನದಲ್ಲಿ ಮಾಡಲಾಗುವ ಯಾವುದೇ ರೀತಿಯ ಹೂಡಿಕೆ ಉತ್ತಮ ರಿಟರ್ನ್ ನೀಡುತ್ತದೆ ಎಂಬುದು ಸಾಬೀತುಪಡಿಸುತ್ತದೆ. ಆದರೂ ಕೂಡ ಗೋಲ್ಡ್ ಮ್ಯುಚವಲ್ ಪಂಡ್ ಹಾಗೂ ಗೋಲ್ಡ್ ಇಟಿಎಫ್ ಗಳಲ್ಲಿನ ಹೂಡಿಕೆಗೆ ನೀವು ಆದ್ಯತೆ ನೀಡಬಹುದು.  ಗೋಲ್ಡ್ ಇಟಿಎಫ್ ಗಳು ಲಿಸ್ಟೆಡ್ ಮಾಡಲಾಗಿರುತ್ತದೆ ಮತ್ತು ಇವು ಷೇರು ವಿನಿಮಯ ಕೇಂದ್ರದಲ್ಲಿ ವ್ಯಾಪಾರ ಮಾಡುತ್ತವೆ. ಆದರೆ, ಇದಕ್ಕಾಗಿ ನೀವು ಡಿಮ್ಯಾಟ್ ಖಾತೆ ಹೊಂದಿರುವುದು ಆವಶ್ಯಕ. ಇದರಲ್ಲಿ ಹೂಡಿಕೆಗಾಗಿ ನೀವು ದಲ್ಲಾಳಿ ಶುಲ್ಕ ಪಾವತಿಸಬೇಕು. ಆದರೆ, ಈ ಶುಲ್ಕ ತುಂಬಾ ಕಡಿಮೆಯಾಗಿರುತ್ತದೆ. 

3 /3

ಗೋಲ್ಡ್ ಬಾರ್ ಅಥವಾ ನಾಣ್ಯಗಳಲ್ಲಿಯೂ ಕೂಡ ನೀವು ಹೂಡಿಕೆ ಮಾಡಬಹುದು. ಆಭರಣಗಳಲ್ಲಿನ ಹೂಡಿಕೆಗಿಂತ ಇದು ಉತ್ತಮ ಆದಾಯ ನೀಡುತ್ತದೆ. ಏಕೆಂದರೆ ಇದರಲ್ಲಿ ಮೇಕಿಂಗ್ ಚಾರ್ಜ್ ಶಾಮೀಲಾಗಿರುವುದಿಲ್ಲ.