IPL 2021: ಯಾವುದೇ ಅರಮನೆಗಿಂತಲೂ ಕಡಿಮೆಯಿಲ್ಲ UAEಯ ಈ ರೆಸಾರ್ಟ್

                                 

ನವದೆಹಲಿ: ಎರಡನೇ ತರಂಗ ಕೊರೊನಾವೈರಸ್‌ನಿಂದಾಗಿ ಐಪಿಎಲ್ 2021 ಅನ್ನು ಮಧ್ಯದಲ್ಲಿ ನಿಲ್ಲಿಸಲಾಯಿತು. ಆದಾಗ್ಯೂ, ಈಗ ಅಭಿಮಾನಿಗಳ ಕಾಯುವಿಕೆ ಕೊನೆಗೊಳ್ಳಲಿದೆ. ಐಪಿಎಲ್‌ನ ಉಳಿದ ಪಂದ್ಯಗಳು ಸೆಪ್ಟೆಂಬರ್ 19 ರಿಂದ ಆರಂಭವಾಗಲಿವೆ. ಅದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಆಟಗಾರರು ಯುಎಇ ತಲುಪಿದ್ದಾರೆ. ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಪ್ರಸ್ತುತ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡುತ್ತಿದ್ದಾರೆ. ಇವರನ್ನು ಹೊರತುಪಡಿಸಿ ಮುಂಬೈ ಇಂಡಿಯನ್ಸ್ ತಂಡದ ಇತರ ಸದಸ್ಯರು ಅಬುಧಾಬಿಗೆ ತಲುಪಿದ್ದಾರೆ. ಮುಂಬೈ ಇಂಡಿಯನ್ಸ್  ಆಟಗಾರರು ರೆಜಿಸ್ ಸಾಡಿಯತ್ ರೆಸಾರ್ಟ್ ನಲ್ಲಿ ತಂಗಿದ್ದಾರೆ. ಈ ರೆಸಾರ್ಟ್ ತುಂಬಾ ಐಷಾರಾಮಿ ಆಗಿದೆ. ಈ ರೆಸಾರ್ಟ್ನ ಒಳಗಿನ ಚಿತ್ರಗಳನ್ನು ನೋಡೋಣ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಸೇಂಟ್ ಅಬುದಾಬಿ ವಿಮಾನ ನಿಲ್ದಾಣದಿಂದ ರೆಗಿಸ್ ಸಾಡಿಯತ್ ರೆಸಾರ್ಟ್ (Regis Saadiyat Resort)ಗೆ ತಲುಪಲು 20 ನಿಮಿಷಗಳು ಬೇಕಾಗುತ್ತದೆ. ಇದು 312 ಕೊಠಡಿಗಳು, 64 ಸೂಟ್‌ಗಳು ಮತ್ತು 14 ಸಭಾ ಕೊಠಡಿಗಳನ್ನು ಹೊಂದಿರುವ ಅತ್ಯಂತ ಐಷಾರಾಮಿ ಆಸ್ತಿಗಳಲ್ಲಿ ಒಂದಾಗಿದೆ. ಅಲ್ಲದೆ, ಎಲ್ಲಾ ಸೌಲಭ್ಯಗಳು ಇಲ್ಲಿ ಲಭ್ಯವಿದೆ. ಈ ರೆಸಾರ್ಟ್ ನ ಒಂದು ಕೋಣೆಯ ಬೆಲೆ 25000 ರೂಪಾಯಿಗಳು, ಅದೂ ಒಂದು ರಾತ್ರಿಗೆ.  

2 /5

ಐಪಿಎಲ್ 2021 ರ ಎರಡನೇ ಹಂತದ ಆರಂಭದ ಮೊದಲು, ಆಟಗಾರರು ಇಲ್ಲಿ ಉತ್ತಮ ಸಮಯವನ್ನು ಕಳೆಯಬಹುದು. ಸೇಂಟ್ ರೆಗಿಸ್ ಸಾಡಿಯತ್ ರೆಸಾರ್ಟ್ ಒಳಗಿನಿಂದ ಐಷಾರಾಮಿಯಾಗಿದೆ. ವಾಸ್ತವವಾಗಿ, ಇಲ್ಲಿನ ವಿಶೇಷವೆಂದರೆ ಈ ರೆಸಾರ್ಟ್‌ನಲ್ಲಿರುವ ಕೊಳವು ಖಾಸಗಿ ಬೀಚ್‌ನಂತಿದೆ.

3 /5

ಸೇಂಟ್ ರೆಗಿಸ್ ಸಾಡಿಯತ್ ರೆಸಾರ್ಟ್ (St Regis Saadiyat Resort) ನಾಲ್ಕು ಕಡೆಯಿಂದ ನೀರಿನಿಂದ ಆವೃತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಅಲ್ಲಿನ ಕೊಠಡಿಗಳು ಖಾಸಗಿತನದ ಜೊತೆಗೆ ಉತ್ತಮ ನೋಟವನ್ನು ನೀಡುತ್ತವೆ. ಕೊಠಡಿಗಳ ವಿನ್ಯಾಸವು ಅತ್ಯಂತ ಐಷಾರಾಮಿ ಆಗಿದ್ದು, ಎಲ್ಲಾ ರೀತಿಯ ಸೌಲಭ್ಯಗಳು ಲಭ್ಯವಿದೆ. ಇದನ್ನೂ ಓದಿ- IND vs ENG: ಮೊಹಮ್ಮದ್ ಸಿರಾಜ್ ‘ಸಿಗ್ನೇಚರ್ ಸ್ಟೈಲ್’ ನ ಕಟೌಟ್ ನಿಲ್ಲಿಸಿದ ಅಭಿಮಾನಿಗಳು..!

4 /5

ಕೊಳದ ಹೊರತಾಗಿ, ಸೇಂಟ್. ರೆಗಿಸ್ ಸಾಡಿಯತ್ ರೆಸಾರ್ಟ್ ವಿಶೇಷ ಸ್ಪಾ ಸೌಲಭ್ಯವನ್ನು ಹೊಂದಿದೆ. ಪಂದ್ಯಾವಳಿಯ ಆರಂಭದ ಮೊದಲು ಇದು ಆಟಗಾರರಿಗೆ (Players) ಒಂದು ರೀತಿಯ ರಿಲೀಫ್ ನೀಡಲಿದೆ. ಇಲ್ಲಿ ಆಟಗಾರರು ಸಮುದ್ರದ ಬಳಿ ಭೋಜನದ ಮೋಜು ಕೂಡ ಮಾಡಬಹುದು. ಇದನ್ನೂ ಓದಿ- ICC- ಈ ಆಟಗಾರನ ಮೇಲೆ ನಿಷೇಧ ಹೇರಿದ ಐಸಿಸಿ, ಯಾಕಿಷ್ಟು ದೊಡ್ಡ ಶಿಕ್ಷೆ ಎಂದು ತಿಳಿಯಿರಿ!

5 /5

ಕೇವಲ ಐಷಾರಾಮಿ ಕೋಣೆಗಳು ಮಾತ್ರವಲ್ಲ, ಸೇಂಟ್. ರೆಗಿಸ್ ಸಾಡಿಯತ್ ರೆಸಾರ್ಟ್ ತನ್ನ ಅತಿಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಬಯಸುತ್ತದೆ. ಇಂತಹ ಸನ್ನಿವೇಶದಲ್ಲಿ, ಅಲ್ಲಿನ ಸ್ನಾನಗೃಹಗಳನ್ನು ನೋಡಿ ನೀವು ಆಘಾತಕ್ಕೊಳಗಾಗುತ್ತೀರಿ. ಇಲ್ಲಿನ ಸ್ನಾನದ ಗೃಹವೂ ತುಂಬಾ ಐಷಾರಾಮಿಯಾಗಿವೆ.