ದಿಢೀರ್‌ ಆಸ್ಪತ್ರೆಗೆ ದಾಖಲಾದ ನಟಿ ಜಾನ್ವಿ ಕಪೂರ್..! ಹೆಚ್ಚಿದ ಆತಂಕ, ಭಯಗೊಂಡ ಫ್ಯಾನ್ಸ್‌

Janhvi Kapoor hospitalised : ಬಿಟೌನ್‌ ಸ್ಟಾರ್ ಹೀರೋಯಿನ್ ಜಾನ್ವಿ ಕಪೂರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟಿಯನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.. ಇದರಿಂದಾಗಿ ಅವರ ಅಭಿಮಾನಿಗಳು ಆತಂಕಗೊಂಡಿದ್ದಾರೆ... ಈ ಕುರಿತು ವರದಿ ಇಲ್ಲಿದೆ..

1 /7

ಸ್ಟಾರ್ ಹೀರೋಯಿನ್ ಜಾನ್ವಿ ಕಪೂರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ವೈದ್ಯರ ಸಲಹೆಯಂತೆ ಬೆಡ್ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಾಗುತ್ತಿದೆ..

2 /7

ಅನಾರೋಗ್ಯದ ಕಾರಣ ಜಾನ್ವಿ ಕಪೂರ್ ಸದ್ಯ ಯಾವುದೇ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿಲ್ಲವಂತೆ. ಬುಧವಾರದವರೆಗಿನ ಎಲ್ಲಾ ದಿನಾಂಕಗಳನ್ನು ರದ್ದುಗೊಳಿಸಿದ್ದಾರೆಂದು ತಿಳಿದು ಬಂದಿದೆ..  

3 /7

ಗುರುವಾರ ನಟಿಯ ಆರೋಗ್ಯ ಹದಗೆಟ್ಟಿದ್ದು, ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಜಾನ್ವಿ ಕಪೂರ್ ಫುಡ್‌ ಪಾಯಿಸನ್‌ನಿಂದ ಅಸ್ವಸ್ಥರಾಗಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ  

4 /7

ಇದರ ನಡುವೆ ಮುಂಬೈನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ನಗರದಲ್ಲಿ ಸೋಂಕುಗಳು ಮತ್ತು ಅನಾರೋಗ್ಯ ಪ್ರಕರಣಗಳು ಹೆಚ್ಚಿವೆ. ಜಾನ್ವಿ ಕಪೂರ್ ಅವರ ಸ್ಥಿತಿ ಸುಧಾರಿಸುವವರೆಗೂ ವೈದ್ಯರ ಮೇಲ್ವಿಚಾರಣೆಯಲ್ಲಿರಲಿದ್ದಾರೆ..   

5 /7

ಕಳೆದ ವರ್ಷದವರೆಗೂ ಬಾಲಿವುಡ್‌ ಚಿತ್ರಗಳಲ್ಲಿ ಮಾತ್ರ ಬ್ಯುಸಿಯಾಗಿದ್ದ ಜಾನ್ವಿ ಕಪೂರ್ ಈಗ ಟಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ದೇವರ ಚಿತ್ರದ ಮೂಲಕ ಮೊದಲ ಬಾರಿಗೆ ಜೂನಿಯರ್‌ ಎನ್‌ಟಿಆರ್‌ ಜೊತೆ ಜಾನ್ವಿ ಸ್ಕ್ರೀನ್‌ ಶೇರ್‌ ಮಾಡಲಿದ್ದಾರೆ..  

6 /7

ಅಲ್ಲದೆ, ರಾಮಚರಣ್ ಜೊತೆ ಬುಚ್ಚಿಬಾಬು ನಿರ್ದೇಶನದ ಮತ್ತೊಂದು ತೆಲುಗು ಚಿತ್ರದಲ್ಲೂ ಜೂನಿಯರ್ ಶ್ರೀದೇವಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರಸ್ತುತ, ಜಾನ್ವಿ ಕಪೂರ್ 'ಉಲಾಜ್' ​​ಚಿತ್ರದಲ್ಲಿ ರಾಯಭಾರ ಕಚೇರಿಯ ಡೆಪ್ಯುಟಿ ಹೈಕಮಿಷನರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.   

7 /7

ʼಉಲಾಜ್‌ʼ ಸುಧಾಂಶು ಸರಿಯಾ ನಿರ್ದೇಶನದ ಈ ಚಿತ್ರದಲ್ಲಿ ಗುಲ್ಶನ್ ದೇವಯ್ಯ, ರೋಷನ್ ಮ್ಯಾಥ್ಯೂ, ರಾಜೇಶ್ ತೈಲಾಂಗ್ ಮತ್ತು ಆದಿಲ್ ಹುಸೇನ್ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.