ʼತಾವರೆಯ ಅಂದ ಕಣ್ಣಲ್ಲಿ, ಸಂಜೆಯ ಕೆಂಪು ಕೆನ್ನೆಯಲ್ಲಿʼ : ಮೇಘಾ ನೀ ಅಮೋಘ..!

ʼಜೊತೆ ಜೊತೆಯಲಿʼ ಮೂಲಕ ಕನ್ನಡಿಗರ ಮನ ಗೆದ್ದ ಚಲುವೆ ಮೇಘಾ ಶೆಟ್ಟಿ. ಧಾರಾವಾಹಿಯಲ್ಲಿ ತನ್ನ ಮುಗ್ಧತೆ, ಸೌಂದರ್ಯದಿಂದಲೇ ಫ್ಯಾನ್ಸ್‌ಗೆ ತುಂಬಾ ಇಷ್ಟವಾಗಿದ್ದಾರೆ. ಸದ್ಯ ಚಂದನಗೊಂಬೆ ಸಖತ್‌ ಫೋಟೋಶೂಟ್‌ ಮಾಡಿಸಿದ್ದು, ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ಗ್ಲಾಮರ್‌ ಗೊಂಬೆಯ ಅಂದಕ್ಕೆ ಫಿದಾ ಆಗಿದ್ದಾರೆ.

Megha Shetty : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಸೀರಿಯಲ್ ʼಜೊತೆ ಜೊತೆಯಲಿʼ ಮೂಲಕ ಕನ್ನಡಿಗರ ಮನ ಗೆದ್ದ ಚಲುವೆ ಮೇಘಾ ಶೆಟ್ಟಿ. ಧಾರಾವಾಹಿಯಲ್ಲಿ ತನ್ನ ಮುಗ್ಧತೆ, ಸೌಂದರ್ಯದಿಂದಲೇ ಫ್ಯಾನ್ಸ್‌ಗೆ ತುಂಬಾ ಇಷ್ಟವಾಗಿದ್ದಾರೆ. ಸದ್ಯ ಚಂದನಗೊಂಬೆ ಸಖತ್‌ ಫೋಟೋಶೂಟ್‌ ಮಾಡಿಸಿದ್ದು, ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ಗ್ಲಾಮರ್‌ ಗೊಂಬೆಯ ಅಂದಕ್ಕೆ ಫಿದಾ ಆಗಿದ್ದಾರೆ.

1 /6

ನಟಿ ಮೇಘಾ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಆಗಾಗ ಫೋಟೋಶೂಟ್ ಮಾಡಿಸಿ ಹಂಚಿಕೊಳ್ಳುತ್ತಿರುತ್ತಾರೆ.

2 /6

ಟ್ರೆಡಿಷನಲ್ ಲುಕ್​ನಲ್ಲಿ ಮೇಘಾ ಶೆಟ್ಟಿ ಅವರು ಸಾಕಷ್ಟು ಇಷ್ಟವಾಗುತ್ತಾರೆ. ಅವರ ಮುಗ್ಧತೆ, ಸೌಂದರ್ಯ, ಸ್ವೀಟ್‌ ವಾಯ್ಸ್‌ಗೆ ಅಭಿಮಾನು ಇಂಪ್ರೇಸ್‌ ಆಗಿದ್ದಾರೆ.

3 /6

ಇನ್ನು ಬಿಗ್‌ ಸ್ಕ್ರೀನ್‌ ಮೇಲೆ ಮಿಂಚಲು ಮೇಘಾ ರೇಡಿಯಾಗಿದ್ದು, ಜಯತೀರ್ಥ ನಿರ್ದೇಶನದ ಹೊಸ ಸಿನಿಮಾ ʼಕೈವʼ ಸಿನಿಮಾದಲ್ಲಿ ಧನ್ವೀರ್‌ಗೆ ಜೊತೆಯಾಗಿ ಮೇಘಾ ಶೆಟ್ಟಿ ಅಭಿನಯಿಸಿದ್ದಾರೆ.

4 /6

ಅಲ್ಲದೆ, ಮೇಘಾ ಶೆಟ್ಟಿ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಜೋಡಿಯಾಗಿ ʼತ್ರಿಬಲ್ ರೈಡಿಂಗ್ʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಮೂವರು ನಾಯಕಿಯರಿರುವ ಸಿನಿಮಾ ತ್ರಿಬಲ್‌ ರೈಡಿಂಗ್‌. 

5 /6

ಡಾರ್ಲಿಂಗ್ ಕೃಷ್ಣ ಅಭಿನಯದ ಬಹುನಿರೀಕ್ಷಿತ ʼದಿಲ್ ಪಸಂದ್ʼ ಚಿತ್ರ ನವೆಂಬರ್ 11ರಂದು ರಿಲೀಸ್ ಆಗಲಿದೆ. ಡಾರ್ಲಿಂಗ್ ಕೃಷ್ಣಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಹಾಗೂ ಮೇಘಾ ಶೆಟ್ಟಿ ಅಭಿನಯಿಸಿದ್ದಾರೆ.

6 /6

ಕಿರುತೆರೆ ಹಾಗೂ ಬೆಳ್ಳಿ ತೆರಯಲ್ಲಿ ಬ್ಯುಸಿಯಾಗಿರುವ ಮೇಘಾ ಶೆಟ್ಟಿಗೆ ಫ್ಯಾನ್ ಫಾಲೊಯಿಂಗ್‌ ಹೆಚ್ಚಿದೆ. ಸೋಷಿಯಲ್ ಮೀಡಿಯಾ ಮೂಲಕ ಮೇಘಾ ಅಭಿಮಾನಿಗಳ ಜೊತೆ ಸದಾ ಮಾತುಕತೆ ನಡೆಸುತ್ತಾರೆ.