Ambassador car price Photo Viral: ಇತ್ತೀಚೆಗೆ 1972ರ ಅಂಬಾಸಿಡರ್ ಕಾರಿನ ಬೆಲೆಯ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಶೇಷವೆಂದರೆ ಈ ಚಿತ್ರವನ್ನು ಆನಂದ್ ಮಹೀಂದ್ರಾ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ 50 ವರ್ಷಗಳ ಹಿಂದಿನ ಜನವರಿ 25, 1972ರ ಸುದ್ದಿಯನ್ನು ತೋರಿಸಲಾಗಿದೆ. ‘ಕಾರುಗಳ ಬೆಲೆ ಏರಿಕೆಯಾಗಿದೆ’ ಎಂಬುದು ಸುದ್ದಿಯ ಮುಖ್ಯಾಂಶ. ಈ ಸುದ್ದಿ ಓದಿದಾಗ ಗೊತ್ತಾಗಿದ್ದು, 1972ರಲ್ಲಿ ಅಂಬಾಸಿಡರ್ ಬೆಲೆ 127 ರೂಪಾಯಿ ಏರಿಕೆಯಾಗಿ 16,946 ರೂಪಾಯಿ ಆಗಿತ್ತು ಎಂದು. ಈ ಬೆಲೆ ಕೇಳಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಸ್ವತಃ ಆನಂದ್ ಮಹೀಂದ್ರಾ ಕೂಡ ಇದೇ ಮಾತನ್ನು ಹೇಳಿದ್ದಾರೆ
ಅದೃಷ್ಟದ ಬಂಡಿ ಹತ್ತಿ ಬಂದು ನಾಮಪತ್ರ ಸಲ್ಲಿಕೆ ಮಾಡಿದ ಬಸವರಾಜ್ ಹೊರಟ್ಟಿ. ಪ್ರತಿ ಚುನಾವಣೆಗೂ ಇದೇ ಕಾರಿನಲ್ಲಿ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ನಾಮಿನೇಶನ್ ಮಾಡೋದು ಯಾಕೆ ಗೊತ್ತಾ?