Kedar Yog 2023: ಈ ರಾಶಿಗಳ ಹಣೆಬರಹವನ್ನೇ ಬದಲಿಸಲಿದೆ ಕೇದಾರ ಯೋಗ.. ಉದ್ಯೋಗದಲ್ಲಿ ಪ್ರಗತಿ, ಹಣದ ಸುರಿಮಳೆ!

Kedar Yog 2023: ಅಪರೂಪದ ಮತ್ತು ಮಂಗಳಕರ ಯೋಗ ಕೇದಾರ ಯೋಗ. ಜಾತಕದಲ್ಲಿ ಕೇದಾರ ಯೋಗವಿದ್ದರೆ ವ್ಯಕ್ತಿಗೆ ತುಂಬಾ ಅನುಕೂಲಗಳಿವೆ. ಜೀವನದಲ್ಲಿ ಬಯಸಿದ ಪ್ರಗತಿ ಮತ್ತು ಆರ್ಥಿಕ ಲಾಭ ಸಿಗುತ್ತದೆ. 
 

Kedar Yog 2023 Effect: ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಸಂಯೋಜನೆಯು ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಜಾತಕದಲ್ಲಿ ಶುಭ ಮತ್ತು ಅಶುಭ ಯೋಗಗಳು ಸೃಷ್ಟಿಗೆ ಗ್ರಹಗಳ ಸಂಚಾರ ಕಾರಣ. ಪ್ರತಿಯೊಬ್ಬರ ಜೀವನದ ಮೇಲೆ ಅದರ ಗ್ರಹಗಳ ಚಲನೆ ಪರಿಣಾಮವನ್ನು ತೋರಿಸುತ್ತದೆ. ಏಪ್ರಿಲ್ 23 ರಂದು 500 ವರ್ಷಗಳ ನಂತರ ಕೇದಾರ ಯೋಗ ನಿರ್ಮಾಣವಾಗುತ್ತಿದೆ. ಈ ರಾಶಿಯವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. 
 

1 /4

ಕೇದಾರ ಯೋಗವನ್ನು ಅಪರೂಪದ ಮತ್ತು ಮಂಗಳಕರ ಯೋಗವೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಗಣಿಸಲಾಗಿದೆ. ವ್ಯಕ್ತಿಯ ಜಾತಕದ ನಾಲ್ಕೂ ಮನೆಗಳಲ್ಲಿ 7 ಗ್ರಹಗಳು ಇದ್ದರೆ ಆಗ ಕೇದಾರ ಯೋಗ ರೂಪುಗೊಳ್ಳುತ್ತದೆ.   

2 /4

ಮೇಷ ರಾಶಿ: ಈ ರಾಶಿಯವರಿಗೆ  ಕೇದಾರ ಯೋಗದಿಂದ ವಿಶೇಷ ಲಾಭಗಳಿವೆ. ಈ ಸಮಯದಲ್ಲಿ ಸಾಮಾಜಿಕ ಪ್ರತಿಷ್ಠೆ ಮತ್ತು ಗೌರವ ಹೆಚ್ಚಾಗುತ್ತದೆ. ಎಲ್ಲಾ ಗುರಿಗಳನ್ನು ಸುಲಭವಾಗಿ ಸಾಧಿಸುವಲ್ಲಿ ಯಶಸ್ವಿಯಾಗುತ್ತೀರಿ. ವೃತ್ತಿಜೀವನದ ಬಗ್ಗೆಯೂ ಗಂಭೀರವಾಗಿರುತ್ತೀರಿ. ನಿಮ್ಮ ಪ್ರೇಮಿಯ ಜೊತೆಗಿನ ಮನಸ್ತಾಪ ಸರಿ ಹೋಗುತ್ತದೆ. ಗ್ರಹಗಳ ಚಲನೆಯೊಂದಿಗೆ, ಈ ರಾಶಿ ಜನರಿಗೆ ಅದೃಷ್ಟದ ಬಾಗಿಲು ತೆರೆಯುತ್ತದೆ.  

3 /4

ಸಿಂಹ ರಾಶಿ : ನಿಮ್ಮ ಜೀವನದಲ್ಲಿ ಸಂತೋಷವು ಬರಲಿದೆ. ಒಳ್ಳೆಯ ಸುದ್ದಿಯನ್ನು ಸ್ವೀಕರಿಸಬಹುದು. ಉದ್ಯೋಗಸ್ಥರು ಬಯಸಿದ ಸ್ಥಳಕ್ಕೆ ಬಡ್ತಿ ಅಥವಾ ವರ್ಗಾವಣೆಯನ್ನು ಪಡೆಯಬಹುದು. ಈ ಅವಧಿಯಲ್ಲಿ ವ್ಯಾಪಾರಸ್ಥರಿಗೆ ಲಾಭವಾಗಲಿದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ.  

4 /4

ಧನು ರಾಶಿ: ಕೇದಾರ ಯೋಗವು ನಿಮಗೆ ಅನುಕೂಲಕರ ಫಲಿತಾಂಶಗಳನ್ನು ತರುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಹೆಂಡತಿಯೊಂದಿಗಿನ ಸಂಬಂಧ ಉತ್ತಮವಾಗಲಿದೆ. ಕುಟುಂಬದ ಜೊತೆ ಉತ್ತಮ ಸಮಯವನ್ನು ಕಳೆಯುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಈ ಸಮಯದಲ್ಲಿ ವೃತ್ತಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿ ಬರಬಹುದು. ವ್ಯಾಪಾರದಲ್ಲಿ ಉತ್ತಮ ಲಾಭ ಇರಲಿದೆ.