ನಮ್ಮ ಕೈಯ ಒಂದು ಸೆಂಟಿಮೀಟರ್ ಚದರ ಜಾಗದಲ್ಲಿ ಸುಮಾರು 1500 ಹಾನಿಕಾರಕ ಬ್ಯಾಕ್ಟೀರಿಯಗಳು ಇರುತ್ತವೆ. ಈಗ ಲೆಕ್ಕ ಹಾಕಿ, ನಿಮ್ಮ ಎರಡೂ ಕೈಗಳಲ್ಲಿ ಹಾಗಾದರೆ ಎಷ್ಟು ಸಾವಿರ ಬ್ಯಾಕ್ಟೀರಿಯಾಗಳಿರಬಹುದು.
ನವದೆಹಲಿ : ಕರೋನಾ ಹೊತ್ತಲ್ಲಿ ಎಲ್ಲರೂ ಸಾಬೂನಿನಿಂದ ಕೈ ತೊಳೆಯಿರಿ ಎಂದು ಸಲಹೆ ನೀಡುತ್ತಲೇ ಇರುತ್ತಾರೆ. ಕರೋನಾ ಹೊರತಾಗಿಯೂ ನಿಮಗೆ ಗೊತ್ತಿರಲಿ. ನಿಮ್ಮ ಆರೋಗ್ಯದ ಗುಟ್ಟು ನಿಮ್ಮ ಅಂಗೈಯಲ್ಲೇ ಇದೆ. ನೀವು ತಿಳಿದಿರಲೇ ಬೇಕು. ಏನಂದರೆ ನಮ್ಮ ಕೈಯ ಒಂದು ಸೆಂಟಿಮೀಟರ್ ಚದರ ಜಾಗದಲ್ಲಿ ಸುಮಾರು 1500 ಹಾನಿಕಾರಕ ಬ್ಯಾಕ್ಟೀರಿಯಗಳು ಇರುತ್ತವೆ. ಈಗ ಲೆಕ್ಕ ಹಾಕಿ, ನಿಮ್ಮ ಎರಡೂ ಕೈಗಳಲ್ಲಿ ಹಾಗಾದರೆ ಎಷ್ಟು ಸಾವಿರ ಬ್ಯಾಕ್ಟೀರಿಯಾಗಳಿರಬಹುದು. ಅವೆಂಥಾ ಮಾರಕ ರೋಗಗಳಿಗೆ ಕಾರಣವಾಗಬಹುದು. ? ನಿಮ್ಮಲ್ಲಿ ಇಮ್ಯೂನಿಟಿ ಚೆನ್ನಾಗಿದ್ದರೆ ಸರಿ. ಇಲ್ಲದೇ ಹೋದರೆ ಇಷ್ಟೊಂದು ಬ್ಯಾಕ್ಟೀರಿಯಾಗಳು ಕೈ ಮೂಲಕ ದೇಹ ಸೇರಿದರೆ ಕಥೆ ಏನು.?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಕೊಳಕು ಕೈಯಿಂದ ನೀವು ಆವಾಗಾವಾಗ ಕಣ್ಣು, ಮೂಗು, ಚರ್ಮ ಮುಟ್ಟುತ್ತಿದ್ದರೆ ನಿಮ್ಮ ಕೈಯಲ್ಲಿರುವ ಸಹಸ್ರಾರು ಕೀಟಾಣು ಸುಲಭವಾಗಿ ದೇಹ ಸೇರಿಕೊಂಡು ರೋಗ ಬರಿಸುತ್ತವೆ. ಹಾಗಾಗಿ ಪ್ರತಿ ಮೂರು ಗಂಟೆಗೊಮ್ಮೆ ಕೈ ತೊಳೆಯುತ್ತಲೇ ಇರಬೇಕು. ಕೊಳಕು ವಸ್ತುಗಳನ್ನು ಮುಟ್ಟಿದ ಕೂಡಲೇ ಕೈ ತೊಳೆಯಲೇ ಬೇಕು.
ಚೆನ್ನಾಗಿ ಕೈತೊಳೆಯದೇ ಊಟ ಮಾಡಿದರೆ ಡಯರಿಯಾ ಉಂಟಾಗುತ್ತದೆ. ದೇಶದಲ್ಲಿ ಡಯಾರಿಯಾ ದಲ್ಲಿ ಸಾಯುವವರ ಸಂಖ್ಯೆ ತುಂಬಾ ಹೆಚ್ಚು. ಮುಖ್ಯವಾಗಿ ಮಕ್ಕಳಲ್ಲಿ ಕೈ ತೊಳೆದೇ ಊಟ ಮಾಡುವ ಪದ್ದತಿ ಬೆಳೆಸಬೇಕು. ಮಕ್ಕಳು ಶಾಲೆಯಿಂದ, ಆಟ ಪಾಠ ಮುಗಿಸಿ ಬರುವಾಗ ಚೆನ್ನಾಗಿ ಕೈತೊಳೆದು ತಿಂಡಿ ತಿನ್ನುವ ಪರಿಪಾಠ ಬೆಳೆಸಬೇಕು. ಮಕ್ಕಳಿಗೆ ಊಟ ಕೊಡುವಾಗ ಅಮ್ಮಂದಿರು ಕೂಡಾ ತಮ್ಮ ಕೈಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.
ನ್ಯುಮೋನಿಯಾ ಒಂದು ಅಪಾಯಕಾರಿ ರೋಗ. ಪ್ರಾಣಕ್ಕೂ ಸಂಚಕಾರ ತಂದು ಬಿಡುತ್ತದೆ. ಚೆನ್ನಾಗಿ ಕೈ ತೊಳೆಯದೇ ಆಹಾರ ತಿಂದರೆ ನ್ಯೂಮೋನಿಯಾ ಬರುವ ಸಂಭವ ಇರುತ್ತದೆ. ನ್ಯೂಮೋನಿಯಾ ಬಾರದಂತೆ ತಡೆಯಬೇಕಾದರೆ ಊಟ ತಿಂಡಿಗೆ ಮೊದಲು ಹಾಗೂ ಶೌಚ ಮಾಡಿದ ನಂತರ ಚೆನ್ನಾಗಿ ಕೈತೊಳೆಯಬೇಕು.
ಶೌಚಾಲಯಕ್ಕೆ ಹೋಗಿ ಸರಿಯಾಗಿ ಕೈತೊಳೆಯದೇ ಬಂದರೆ ಇಕೋಲಿ ಎಂಬ ಕೀಟಾಣು ನಮ್ಮ ಹೊಟ್ಟೆ ಸೇರುವ ಅಪಾಯ ಇರುತ್ತದೆ. ಇಕೋಲಿ ಇದು ಮಲದಲ್ಲಿ ಇರುವ ಬ್ಯಾಕ್ಟೀರಿಯಾ. ಇದು ಹೊಟ್ಟೆ ಸೇರಿದರೆ ಅಪಾಯಕಾರಿ ರೋಗಗಳು ಬರುವ ಸಾಧ್ಯತೆ ಇರುತ್ತದೆ. ಬಳಿಕ ಇದು ಬೇರೆಯವರಿಗೂ ಅಂಟುವ ಅಪಾಯ ಇರುತ್ತದೆ. ಹಾಗಾಗಿ, ಶೌಚಾಲಯಕ್ಕೆ ಹೋಗಿ ಬಂದಾಗ ಕೈ ತುಂಬಾ ಚೆನ್ನಾಗಿ ವಾಶ್ ಮಾಡಬೇಕು.
ಕಚ್ಚಾ ಚಿಕನ್ ಅಥವಾ ಮಾಂಸವನ್ನು ಕೊಳಕು ಕೈಯಿಂದ ಮುಟ್ಟಿದ್ದರೆ ಅದರಲ್ಲಿ ಬ್ಯಾಕ್ಟೀರಿಯಾ ಆವರಿಸಿಕೊಳ್ಳುತ್ತದೆ. ಅದನ್ನು ತಿಂದರೆ, ಹೊಟ್ಟೆಯಲ್ಲಿ ಫುಡ್ ಪಾಯಿಸನಿಂಗ್ ಆಗಬಹುದು. ಇದರಿಂದ ನಿಮ್ಮ ಆಹಾರ, ಆರೋಗ್ಯ ಎರಡೂ ಹದಗೆಡಬಹುದು. ಹಾಗಾಗಿ ನಿಮ್ಮ ಆರೋಗ್ಯದ ರಹಸ್ಯ ನಿಮ್ಮ ಕೈಯಲ್ಲಿದೆ. ಕೈ ಯಾವತ್ತೂ ಚೆನ್ನಾಗಿ ತೊಳೆಯುತ್ತಿಲಿರಬೇಕು.