ಶೀಘ್ರದಲ್ಲಿಯೇ ಬುಧನ ರಾಶಿಗೆ ಕೇತು ಪ್ರವೇಶ, ಈ ರಾಶಿಗಳ ಜನರಿಗೆ ರಾಜ ಜೀವನ ಕರುಣಿಸಲು ಬರಲಿದ್ದಾಳೆ ಧನದ ಅಧಿದೇವತೆ!

Ketu Transit In Kanya 2023: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಶೀಘ್ರದಲ್ಲಿಯೇ ಛಾಯಾಗ್ರಹ ಎಂದೇ ಖ್ಯಾತಿಯ ಕೇತು, ಬುಧಾಧಿಪತ್ಯದ ರಾಶಿಯಾಗಿರುವ ಕನ್ಯಾ ರಾಶಿಗೆ ಪ್ರವೇಶಿಸಲಿದೆ. ಇದರಿಂದ ಹಲವು ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿದ್ದು, ಕೇತುವಿನ ಈ ಗೋಚರದ ಪ್ರಭಾವ ಧನದ ಅಧಿದೇವತೆ ಒಟ್ಟು ಮೂರು ರಾಶಿಗಳ ಜನರಿಗೆ ರಾಜ ಜೀವನ ಕರುಣಿಸಲು ಬರಲಿದ್ದಾಳೆ. 
 

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ರಾಹುವಿನ ಜೊತೆಗೆ ಕೇತುವಿಗೂ ಕೂಡ ಪಾಪಿ ಗ್ರಹದ ಸ್ಥಾನಮಾನ ಪ್ರಾಪ್ತಿ ಇದೆ. ಇದೂ ಕೂಡ ಒಂದು ನಿಶ್ಚಿತ ಕಾಲಾಂತರದಲ್ಲಿ ತನ್ನ ರಾಶಿಯನ್ನು ಪರಿವರ್ತಿಸುತ್ತದೆ. ಕೇತುವಿನ ರಾಶಿ ಪರಿವರ್ತನೆಯಿಂದ ವೃತ್ತಿಪರ ಜೀವನ, ವೈವಾಹಿಕ ಜೀವನ, ಲವ್ ಲೈಫ್ ಹಾಗೂ ಆರೋಗ್ಯದ ಮೇಲೆ ಪ್ರಭಾವ ಉಂಟಾಗುತ್ತದೆ. ಹೀಗಿರುವಾಗ ಕೇತು ಬರುವ ಅಕ್ಟೋಬರ್ 30, 2023 ರಂದು ಮದ್ಯಾಹ್ನ 2 ಗಂಟೆ 13 ನಿಮಿಷಕ್ಕೆ ತುಲಾ ರಾಶಿಯನ್ನು ತೊರೆದು ಬುಧನ ಅಧಿಪತ್ಯದ ರಾಶಿಯಾಗಿರುವ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ಕೇತುವಿನ ಈ ಗೋಚರ ಹಲವು ರಾಶಿಗಳ ಜನರಿಗೆ ಜೀವನದಲ್ಲಿ ಸಂಕಷ್ಟಗಳನ್ನು ಹೆಚ್ಚಿಸಲಿದೆ. ಆದರೆ, ಕೆಲ ರಾಶಿಗಳ ಜಾತಕದವರಿಗೆ ಇದರಿಂದ ಸಾಕಷ್ಟು ಲಾಭವಾಗಲಿದ್ದು, ಅದೃಷ್ಟ ಲಕ್ಷ್ಮಿಯ ಕೃಪೆಯಿಂದ ಈ ರಾಶಿಗಳ ಜನರ ಜೀವನದಲ್ಲಿ ರಾಜಭೋಗದ ಎಲ್ಲಾ ಸಾಧ್ಯತೆಗಳು ರೂಪುಗೊಳ್ಳುತ್ತಿವೆ. 

 

ಇದನ್ನೂ ಓದಿ-ಶೀಘ್ರದಲ್ಲೇ ಸೂರ್ಯ-ಶನಿ ಅಶುಭ ಯೋಗ ಅಂತ್ಯ, 3 ರಾಶಿಗಳ ಜನರ ಮನೆಗೆ ಧನಲಕ್ಷ್ಮಿಯ ಆಗಮನ, ಸ್ವಾಗತಕ್ಕೆ ಸಿದ್ಧರಾಗಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

1 /5

Ketu Transit In Kanya 2023: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಶೀಘ್ರದಲ್ಲಿಯೇ ಛಾಯಾಗ್ರಹ ಎಂದೇ ಖ್ಯಾತಿಯ ಕೇತು, ಬುಧಾಧಿಪತ್ಯದ ರಾಶಿಯಾಗಿರುವ ಕನ್ಯಾ ರಾಶಿಗೆ ಪ್ರವೇಶಿಸಲಿದೆ. ಇದರಿಂದ ಹಲವು ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿದ್ದು, ಕೇತುವಿನ ಈ ಗೋಚರದ ಪ್ರಭಾವ ಧನದ ಅಧಿದೇವತೆ ಒಟ್ಟು ಮೂರು ರಾಶಿಗಳ ಜನರಿಗೆ ರಾಜ ಜೀವನ ಕರುಣಿಸಲು ಬರಲಿದ್ದಾಳೆ.   

2 /5

ಮೇಷ ರಾಶಿ: ನಿಮ್ಮ ಗೋಚರ ಜಾತಕದ ಶಷ್ಟಮ ಭಾವದಲ್ಲಿ ಕೇತುವಿನ ಈ ಗೋಚರ ಸಂಭವಿಸುತ್ತಿದ್ದು, ಕೇತು ಕನ್ಯಾ ಗೋಚರ ನಿಮ್ಮ ಪಾಲಿಗೆ ಶುಭ ಸಾಬೀತಾಗಲಿದೆ. ಇದರಿಂದ ಮೇಷ ಜಾತಕದವರಿಗೆ ಮಾನಸಿಕ ಒತ್ತಡದಿಂದ ಮುಕ್ತಿ ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ ನಿಮಗೆ ಲಾಭವೆ ಲಾಭ ಸಿಗಲಿದೆ. ಪದೋನ್ನತಿಯ ಜೊತೆಗೆ ಹಲವು ದೊಡ್ಡ ಜವಾಬ್ದಾರಿಗಳು ನಿಮಗೆ ಸಿಗಲಿವೆ. ಆದರೆ, ಆರೋಗ್ಯಕ್ಕೆ ಸಂಬಂಧಿಸಿದಂತೆ ಸ್ವಲ್ಪ ಜಾಗರೂಕರಾಗಿರಬೇಕಾದ ಅವಶ್ಯಕತೆ ಇದೆ. ಆದಾಯದಲ್ಲಿ ಅಪಾರ ಹೆಚ್ಚಳ ಸಂಭವಿಸಲಿದೆ. ದೀರ್ಘಕಾಲದಿಂದ ನಿಂತುಹೋದ ಕೆಲಸಗಳು ಮತ್ತೆ ಆರಂಭಗೊಳ್ಳಲಿವೆ.   

3 /5

ಕರ್ಕ ರಾಶಿ: ಕೇತುವಿನ ಈ ಕನ್ಯಾ ಗೋಚರ ನಿಮ್ಮ ಪಾಲಿಗೂ ಕೂಡ ಶುಭ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ತೃತೀಯ ಭಾವದಲ್ಲಿ ಕೇತುವಿನ ಈ ಗೋಚರ ನೆರವೇರುತ್ತಿದೆ. ಇದರಿಂದ ನಿಮಗೆ ಭಾಗ್ಯದ ಸಂಪೂರ್ಣ ಸಾಥ್ ಸಿಗಲಿದೆ. ವ್ಯಾಪಾರದಲ್ಲಿ ಸ್ವಲ್ಪ ಅಪಾಯವನ್ನು ಎದುರಿಸಿದರೆ ಒಳ್ಳೆಯ ಲಾಭ ನಿಮ್ಮದಾಗಲಿದೆ. ಸಹೋದರ-ಸಹೋದರಿಯರ ಜೊತೆಗಿನ ನಿಮ್ಮ ಸಂಬಂಧ ಸುಧಾರಣೆಯಾಗಲಿದೆ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿದ್ದು, ಇದರಿಂದ ಆರ್ಥಿಕ ಸ್ಥಿತಿ ಸುಧಾರಣೆಯಾಗಿ, ನಿಮ್ಮ ಎಲ್ಲಾ ಇಚ್ಛೆ-ಆಕಾಂಕ್ಷೆಗಳು ಈಡೇರಲಿವೆ. ಕೇತು ನಿಮಗೆ ನಿಮ್ಮ ಜೀವನದಲ್ಲಿ ಮುಂದುವರೆಯುವ ಅವಕಾಶ ಕಲ್ಪಿಸಲಿದ್ದಾನೆ. ಹೀಗಾಗಿ ಜೀವನದಲ್ಲಿ ಜೀವನದಲ್ಲಿ ಯಾವುದೇ ಒಳ್ಳೆಯ ಕೆಲಸ ಮಾಡಲು ಅಥವಾ ಸಮ್ಮಾನ ಸ್ವೀಕರಿಸಲು ಅವಕಾಶ ಸಿಕ್ಕಾಗ, ಅದನ್ನು ತಪ್ಪಿಸಿಕೊಳ್ಳಬೇಡಿ. ಸಮಾಜದಲ್ಲಿ ನಿಮ್ಮ ಷ್ಟಾನಮಾನ ಹೆಚ್ಚಾಗಲಿದೆ. ಆಸ್ತಿಪಾಸ್ತಿ ಖರೀದಿಸುವ ನಿಮ್ಮ ಕನಸು ನನಸಾಗಲಿದೆ.   

4 /5

ವೃಶ್ಚಿಕ ರಾಶಿ: ಕನ್ಯಾ ರಾಶಿಯಲ್ಲಿ ಕೇತುವಿನ ಈ ಗೋಚರದಿಂದ ನಿಮ್ಮ ಜೀವನದಲ್ಲಿ ಸ್ವರ್ಣಕಾಲ ಆರಂಭಗೊಳ್ಳಲಿದೆ. ನಿಮ್ಮ ಹಲವು ಇಚ್ಛೆ ಆಕಾಂಕ್ಷೆಗಳು ನೆರವೇರಲಿವೆ. ಜೀವನದಲ್ಲಿ ಖುಷಿಗಳ ಕೊರತೆಯೇ ಇರುವುದಿಲ್ಲ. ಹಲವು ಮೂಲಗಳಿಂದ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಸಾಕಷ್ಟು ಬಲವಾಗಲಿದೆ. ಮಕ್ಕಳ ಕಡೆಯಿಂದ ಉತ್ತಮ ಸಮಾಚಾರ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಕುಟುಂಬದ ಸಂಪೂರ್ಣ ಬೆಂಬಲ ನಿಮಗೆ ಪ್ರಾಪ್ತಿಯಾಗಲಿದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)