Upcoming Smartphones: ಮುಂದಿನ 15 ದಿನಗಳಲ್ಲಿ ಬಿಡುಗಡೆಯಾಗಲಿವೆ ಈ 5 ಫೋನ್‌ಗಳು!

Upcoming Smartphones Next Week: ಮುಂಬರುವ ವಾರದಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ 5 ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಲಿವೆ. Honor, Motorola, Redmi, Vivo ಮತ್ತು Tecno ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಮುಂಬರುವ ವಾರದಲ್ಲಿ ಬಿಡುಗಡೆಯಾಗಲಿವೆ.

ಮುಂದಿನ ವಾರ ಬಿಡುಗಡೆಯಾಗಲಿರುವ ಸ್ಮಾರ್ಟ್‌ಫೋನ್‌ಗಳು: ಈ ತಿಂಗಳು ಅಂದರೆ ಸೆಪ್ಟೆಂಬರ್‌ನಲ್ಲಿ iPhone 15 ಸರಣಿಯ ಬಗ್ಗೆ ಸಖತ್ ಚರ್ಚೆ ನಡೆಯುತ್ತಿದೆ. ಮುಂಬರುವ ವಾರದಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ 5 ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಲಿವೆ. Honor, Motorola, Redmi, Vivo ಮತ್ತು Tecno ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಮುಂಬರುವ ವಾರದಲ್ಲಿ ಬಿಡುಗಡೆಯಾಗಲಿವೆ. ಇವುಗಳಲ್ಲಿ 2 ಫೋಲ್ಡ್ ಫೋನ್‌ಗಳಾಗಿವೆ. ಈ ಪೈಕಿ 2 ಫೋನ್‌ಗಳನ್ನು ಚೀನಾದಲ್ಲಿ ಬಿಡುಗಡೆ ಮಾಡಲಾಗುವುದು, ಸಿಂಗಾಪುರದಲ್ಲಿ 1 ಮತ್ತು ಉಳಿದ 2 ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

1 /5

Honor Purse Vಯನ್ನು IFA 2023ರ ಪರಿಕಲ್ಪನೆಯ ಫೋನ್ ಆಗಿ ಪರಿಚಯಿಸಲಾಯಿತು. ಈಗ ಕಂಪನಿಯು ಫೋನ್ ಅನ್ನು ಸೆಪ್ಟೆಂಬರ್ 19ರಂದು ಚೀನಾದಲ್ಲಿ ಬಿಡುಗಡೆ ಮಾಡಲಿದೆ ಎಂದು ಖಚಿತಪಡಿಸಿದೆ. ಫೋನ್‌ನ ವಿನ್ಯಾಸವು ಸಾಕಷ್ಟು ಅದ್ಭುತವಾಗಿದೆ ಮತ್ತು ಪರ್ಸ್‌ನಂತೆ ಕಾಣುತ್ತದೆ. ಹುಡುಗಿಯರು ಈ ಫೋನ್ ಅನ್ನು ತುಂಬಾ ಇಷ್ಟಪಡುತ್ತಾರೆ.

2 /5

Motorola Edge 40 Neo ಭಾರತದಲ್ಲಿ ಸೆಪ್ಟೆಂಬರ್ 21ರಂದು ಬಿಡುಗಡೆಯಾಗಲಿದೆ. ಫೋನ್ ಈಗಾಗಲೇ ಯುರೋಪ್‌ನಲ್ಲಿ ಬಿಡುಗಡೆಯಾಗಿದೆ. ಇದು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಆಗಿದ್ದು, ಇದು MediaTek Dimensity 7030 ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ ಮತ್ತು 68W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ. ಈ ಫೋನ್ 6.5 ಇಂಚಿನ ಡಿಸ್ಪ್ಲೇಯೊಂದಿಗೆ ಬರಲಿದೆ.

3 /5

Redmi Note 13 ಸರಣಿಯು ಚೀನಾದಲ್ಲಿ ಬಿಡುಗಡೆಯಾಗಲಿದೆ. ಇದನ್ನು ಸೆಪ್ಟೆಂಬರ್ 21ರಂದು ಪ್ರಸ್ತುತಪಡಿಸುವುದಾಗಿ ಕಂಪನಿಯು ಖಚಿತಪಡಿಸಿದೆ. ಈ ಸರಣಿಯಲ್ಲಿ Redmi Note 13, Redmi Note 13 Pro ಮತ್ತು Redmi Note 13 Pro+ ಎಂಬ 3 ಮಾದರಿಗಳಿರುತ್ತವೆ.

4 /5

Vivo T2 Pro 5G ಫೋನ್ ಭಾರತದಲ್ಲಿ ಸೆಪ್ಟೆಂಬರ್ 22ರಂದು ಬಿಡುಗಡೆಯಾಗಲಿದೆ. ಟೀಸರ್‌ಗಳು ಮತ್ತು ಸೋರಿಕೆಯ ಮಾಹಿತಿ ಪ್ರಕಾರ, ಫೋನ್ ಮರುಬ್ರಾಂಡೆಡ್ iQOO Z7 Pro ಆಗಿದೆ. ಈ ಫೋನ್ 120Hz ಬಾಗಿದ AMOLED ಡಿಸ್ಪ್ಲೇ, 66W ಚಾರ್ಜಿಂಗ್ ಬೆಂಬಲ ಮತ್ತು ಹಲವಾರು ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

5 /5

Tecno Phantom V Flip ಸೆಪ್ಟೆಂಬರ್ 22ರಂದು ಸಿಂಗಾಪುರದಲ್ಲಿ ಬಿಡುಗಡೆಯಾಗಲಿದೆ. ಇದರ ವಿನ್ಯಾಸ ಬಹಳ ಇಷ್ಟವಾಗುತ್ತಿದೆ. ಫೋನ್ 6.75-ಇಂಚಿನ ಡಿಸ್ಪ್ಲೇ, 64MP ಮುಖ್ಯ ಕ್ಯಾಮೆರಾ ಮತ್ತು 45W ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.