Kisan Samman Nidhi : ಸುಳ್ಳು ಮಾಹಿತಿ ನೀಡುವ ಮುನ್ನ ಎಚ್ಚರ..!

ನೀವು ಯೋಜನೆಯ ಫಲಾನುಭವಿಗಳಲ್ದಿದ್ದರೂ, ಯೋಜನೆಯ ಲಾಭಪಡೆಯುತ್ತಿದ್ದರೆ ಇದಕ್ಕೆ ನೀವು ಭಾರೀ ಬೆಲೆ ತೆರಬೇಕಾದೀತು. ಹೌದು, ಯೋಜನೆಯ ಅಡಿಯಲ್ಲಿ ನೀವು ಇಲ್ಲಿವರೆಗೆ ಪಡೆದಿರುವ ಹಣವನ್ನು ಸರ್ಕಾರಕ್ಕೆ ವಾಪಸ್ ನೀಡಬೇಕಾಗುತ್ತದೆ.
 

ನವದೆಹಲಿ : ಕಿಸಾನ್ ಸಮ್ಮನ್ ನಿಧಿಯ (Kisan Samman Nidhi) ಮುಂದಿನ ಕಂತು ಇನ್ನೇನು ನಿಮ್ಮ ಖಾತೆಗೆ ಜಮೆಯಾಗಲಿದೆ. ನೀವು ಈ ಯೋಜನೆಯ ಫಲಾನುಭವಿಗಳಾಗಿದ್ದರೆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎನ್ನುವುದನ್ನು ಒಮ್ಮೆ ಪರಿಶೀಲಿಸಿಕೊಳ್ಳಿ. ಆದರೆ ನೆನಪಿರಲಿ, ಈ ಯೋಜನೆಯ ಮಾರ್ಗಸೂಚಿಗಳ ಪ್ರಕಾರ , ಒಂದು ವೇಳೆ ನೀವು ನಿಜವಾಗಿಯೂ, ಈ ಯೋಜನೆಯ ಫಲಾನುಭವಿಗಳಲ್ಲದೇ ಇದ್ದರೆ, ನಿಮ್ಮ ಹೆಸರನ್ನು ತೆಗೆದುಹಾಕಬೇಕಾಗುತ್ತದೆ. ನೀವು ಯೋಜನೆಯ ಫಲಾನುಭವಿಗಳಲ್ದಿದ್ದರೂ, ಯೋಜನೆಯ ಲಾಭಪಡೆಯುತ್ತಿದ್ದರೆ ಇದಕ್ಕೆ ನೀವು ಭಾರೀ ಬೆಲೆ ತೆರಬೇಕಾದೀತು. ಹೌದು, ಯೋಜನೆಯ ಅಡಿಯಲ್ಲಿ ನೀವು ಇಲ್ಲಿವರೆಗೆ ಪಡೆದಿರುವ ಹಣವನ್ನು ಸರ್ಕಾರಕ್ಕೆ (Government) ವಾಪಸ್ ನೀಡಬೇಕಾಗುತ್ತದೆ. ಅಲ್ಲದೆ ನಿಮ್ಮ ವಿರುದ್ಧ ಕ್ರಮ ಕೂಡಾ ತೆಗೆದುಕೊಳ್ಳಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಇಲ್ಲಿವರೆಗೆ ಕಿಸಾನ್ ಸಮ್ಮಾನ್ ನಿಧಿಯ 7 ಕಂತುಗಳ ಹಣವನ್ನು  ರೈತರ ಖಾತೆಗೆ ವರ್ಗಾಯಿಸಲಾಗಿದೆ. ಇನ್ನೇನು  ಎಂಟನೇ ಕಂತಿನ ಹಣವೂ ಬಿಡುಗಡೆಯಾಗಲಿದೆ. ಕಿಸಾನ್ ಸಮ್ಮನ್ ನಿಧಿಯ ಮಾರ್ಗಸೂಚಿಗಳ ಪ್ರಕಾರ,  4 ತಿಂಗಳ ಅಂತರದಲ್ಲಿ ವರ್ಷಕ್ಕೆ 3 ಸಲ ರೈತರ ಖಾತೆಗೆ 2 ಸಾವಿರ ರೂಪಾಯಿಗಳನ್ನು ಹಾಕಲಾಗುತ್ತದೆ.  

2 /5

Pmkisan.gov.in ಪ್ರಕಾರ, ಇದುವರೆಗೆ 11 ಕೋಟಿ 26 ಲಕ್ಷ ರೈತರಿಗೆ ಸಮ್ಮಾನ್ ನಿಧಿಯ ಲಾಭ ಸಿಕ್ಕಿದೆ. ಮೋದಿ ಸರ್ಕಾರ ಡಿಸೆಂಬರ್ 1, 2018 ರಂದು ಈ ಯೋಜನೆಯನ್ನು ಪ್ರಾರಂಭಿಸಿತು. ಇದಾದ  ನಂತರ ಫಲಾನುಭವಿ ರೈತರ ಸಂಖ್ಯೆ ಹೆಚ್ಚುತ್ತಲೇ ಬಂದಿದೆ. 

3 /5

ಕಿಸಾನ್ ಸಮ್ಮನ್ ನಿಧಿಯ ಹಣವನ್ನು ನೇರವಾಗಿ ರೈತನ ಖಾತೆಗೆ ಕಳುಹಿಸಲಾಗುತ್ತದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, 2020 ರ ಡಿಸೆಂಬರ್‌ನಿಂದ 2021 ರ ಮಾರ್‌್ಅವರೆಗಿನ ಅವಧಿಯಲ್ಲಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಒಟ್ಟು 9 ಕೋಟಿ 64 ಲಕ್ಷ 9 ಸಾವಿರದ 263 ರೂಪಾಯಿಗಳನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ.  

4 /5

Pmkisan.gov.in ಪ್ರಕಾರ, ಕಳೆದ ವರ್ಷ ಆಗಸ್ಟ್ ಮತ್ತು ನವೆಂಬರ್ ನಡುವೆ ಒಟ್ಟು 10 ಕೋಟಿ, 21 ಲಕ್ಷ, 35 ಸಾವಿರ ಮತ್ತು 267 ರೂಪಾಯಿಗಳನ್ನು ರೈತರ ಖಾತೆಗೆ ಕಳುಹಿಸಲಾಗಿದೆ, ಆದರೆ ಡಿಸೆಂಬರ್ ಮತ್ತು ಮಾರ್ಚ್ ನಡುವೆ ಈ ಅಂಕಿ ಅಂಶ ಕಡಿಮೆಯಾಗಿದೆ.  ಏಕೆಂದರೆ ತಪ್ಪು ಮಾಡಿದವರ ಖಾತೆಗೆ ಈ ಬಾರಿ ಹಣವನ್ನು ಜಮೆ ಮಾಡಲಾಗಿಲ್ಲ.  

5 /5

ಕೆಲವರು ಸುಳ್ಳು ಮಾಹಿತಿ ನೀಡುವ ಮೂಲಕ ಕಿಸಾನ್ ಸಮ್ಮನ್ ನಿಧಿಯ ಲಾಭವನ್ನು ಪಡೆದಿದ್ದಾರೆ. ಪರಿಶೀಲನೆಯ ನಂತರ ದನ್ನು ಪತ್ತೆಹಚ್ಚಲಾಗಿದ್ದು, ಯಾಋ ಮಾಹಿತಿ ತಪ್ಪು ಎಂದು ಕಂಡು ಬಂದಿತ್ತೋ ಅಂಥವರ ಖಾತೆಗೆ ಹಣ ಜಮಾವಣೆಯಾಗುವುದನ್ನು ತಡೆ ಹಿಡಿಯಲಾಗಿದೆ. ಅಲ್ಲದೆ, ಇವರು ಇಲ್ಲಿವರೆಗೆ ಸರ್ಕಾರದಿಂದ ಪಡೆದ ಹಣವನ್ನು ಕೂಡಾ ವಾಪಸ್ ಪಡೆಯಲಾಗುವುದು.  ಅಲ್ಲದೆ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. pmkisan.gov.in ಗೆ ಭೇಟಿ ನೀಡಿ, ನಿಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಹಾಕಿ ನಿಮ್ಮ ಸ್ಟೇಟಸ್ ತಿಳಿದುಕೊಳ್ಳಬಹುದು.