Sovereign Gold Bond 2021: ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಸಲು ಮಾ.1 ರಿಂದ ಸಿಗುತ್ತಿದೆ ಈ ಸುವರ್ಣಾವಕಾಶ

Sovereign Gold Bond 2021 - ಒಂದು ವೇಳೆ ನೀವೂ ಹಣ ಹೂಡಿಕೆ ಮಾಡಲು ಉತ್ತಮ ಆಯ್ಕೆಯ ಹುಡುಕಾಟದಲ್ಲಿದ್ದರೆ, ಮಾರ್ಚ್ ಒಂದರಿಂದ ನಿಮಗೆ ಸಾರ್ವಭೌಮ ಚಿನ್ನದ ಬಾಂಡ್ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವ ಸುವರ್ಣಾವಕಾಶ ಸಿಗಲಿದೆ.

ನವದೆಹಲಿ: Sovereign Gold Bond 2021 - ಒಂದು ವೇಳೆ ನೀವೂ ಕೂಡ  ಉತ್ತಮ ಹೂಡಿಕೆ ಆಯ್ಕೆಯಅನ್ವೇಷಣೆಯಲ್ಲಿದ್ದರೆ, ಸೋಮವಾರದಿಂದ ಅಂದರೆ ಮಾರ್ಚ್ 1 ರಿಂದ, ಸಾರ್ವಭೌಮ ಚಿನ್ನದ ಬಾಂಡ್‌ಗಳಲ್ಲಿ (Sovereign Gold Bond 2021) ಹೂಡಿಕೆ ಮಾಡಲು ಅವಕಾಶವಿದೆ. 12 ನೇ ಸರಣಿಯ ಚಿನ್ನದ ಬಾಂಡ್‌ಗಳು (SGB 2021 12th Series) ಮಾರ್ಚ್ 1 ರಿಂದ ಹೂಡಿಕೆಗಾಗಿ ತೆರೆದುಕೊಳ್ಳಲಿದ್ದು, ಇದು ಮಾರ್ಚ್ 5 ರವರೆಗೆ ಓಪನ್ ಆಗಿರಲಿದೆ. ಈ ಬಾರಿ ಸರ್ಕಾರವು ಪ್ರತಿ ಗ್ರಾಂಗೆ 4,662 ರೂ. ಅಂದರೆ ಚಿನ್ನದ ಬಾಂಡ್‌ಗಳಿಗೆ 10 ಗ್ರಾಂಗೆ 46,620 ರೂ. ನಿಗದಿಪಡಿಸಿದೆ. ಇದೆ ವೇಳೆ  ನೀವು ಆನ್‌ಲೈನ್‌ನಲ್ಲಿ ಚಿನ್ನದ ಬಾಂಡ್ (Gold Bond)‌ಗಳನ್ನು ಖರೀದಿಸಿದರೆ, ಪ್ರತಿ ಗ್ರಾಂಗೆ 50 ರೂಪಾಯಿಗಳ ರಿಯಾಯಿತಿ (Cheapest Gold) ಸಹ ಲಭ್ಯವಿರುತ್ತದೆ. ಆನ್‌ಲೈನ್ ಹೂಡಿಕೆದಾರರಿಗೆ, ವಿತರಣಾ ಬೆಲೆ ಪ್ರತಿ ಗ್ರಾಂಗೆ 4,612 ರೂ. ಅಂದರೆ 10 ಗ್ರಾಂಗೆ 46,120 ರೂ.ಇರಲಿದೆ.

 

ಇದನ್ನೂ ಓದಿ-ಚಿನ್ನಾಭರಣ ಪ್ರೀಯರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್..!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

1. ಗೋಲ್ಡ್ ಬಾಂಡ್ ಗಳನ್ನು ಎಲ್ಲಿ ಖರೀದಿಸಬಹುದು ಪ್ರತಿ SGB ಅಪ್ಲಿಕೇಶನ್‌ನೊಂದಿಗೆ ಹೂಡಿಕೆದಾರರ PAN ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕು. ಚಿನ್ನದ ಬಾಂಡ್‌ಗಳನ್ನು ಬ್ಯಾಂಕುಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (HSCIL), ಗೊತ್ತುಪಡಿಸಿದ ಅಂಚೆ ಕಚೇರಿಗಳು ಮತ್ತು ಮಾನ್ಯತೆ ಪಡೆದ ಷೇರು ವಿನಿಮಯ ಕೇಂದ್ರಗಳು (NSE ಮತ್ತು BSE) ಮೂಲಕ ಮಾರಾಟ ಮಾಡಲಾಗುತ್ತದೆ.

2 /3

2. ಎಷ್ಟು ಹೂಡಿಕೆ ಮಾಡಬಹುದು? ಯೋಜನೆಯಡಿಯಲ್ಲಿ, ವೈಯಕ್ತಿಕ ಹೂಡಿಕೆದಾರರು (Investment In Gold) ಮತ್ತು ಹಿಂದೂ ಅವಿಭಾಜ್ಯ ಕುಟುಂಬಗಳು ಆರ್ಥಿಕ ವರ್ಷದಲ್ಲಿ ಕನಿಷ್ಠ ಒಂದು ಗ್ರಾಂ ಮತ್ತು ಗರಿಷ್ಠ ನಾಲ್ಕು ಕಿಲೋಗ್ರಾಂ ಚಿನ್ನದಲ್ಲಿ (Gold) ಹೂಡಿಕೆ ಮಾಡಬಹುದು. ಟ್ರಸ್ಟ್ ಮತ್ತು ಇಂತಹ ಇತರ ಘಟಕಗಳು ಪ್ರತಿವರ್ಷ 20 ಕೆಜಿ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಚಿನ್ನದ ಬಾಂಡ್‌ಗಳನ್ನು ಬ್ಯಾಂಕುಗಳು, ಭಾರತದ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್‌ಗಳು, ಅಂಚೆ ಕಚೇರಿಗಳು ಮತ್ತು ಮಾನ್ಯತೆ ಪಡೆದ ಷೇರು ವಿನಿಮಯ ಕೇಂದ್ರಗಳ ಮೂಲಕ ಮಾರಾಟ ಮಾಡಲಾಗುತ್ತದೆ.

3 /3

3. Gold Bondಗಳ ಲಾಭವೇನು?: - ಗೋಲ್ಡ್ ಬಾಂಡ್ ಹೂಡಿಕೆಯ ಮ್ಯಾಚುರಿಟಿ ತೆರಿಗೆ ಮುಕ್ತವಾಗಿರುತ್ತದೆ. ಅಲ್ಲದೆ ಇದರಲ್ಲಿ ಎಕ್ಷ್ಪೆನ್ಸ ರೆಶ್ಯೋ ಒಟ್ಟಿಗೆ ಇರುವುದಿಲ್ಲ. ಭಾರತ ಸರ್ಕಾರಕ್ಕ ಸಮರ್ಪಿತವಾದ ಕಾರಣ ಡಿಫಾಲ್ಟ್ ಅಪಾಯ ಇರುವುದಿಲ್ಲ. - ಇದು HINs ಗಾಗಿ ಉತ್ತಮ ಆಯ್ಕೆಯಾಗಿದೆ. ಹೀಗಾಗಿ ಮ್ಯಾಚ್ಯೂರಿಟಿವರೆಗೆ ಕಾಯ್ದರೆ, ಕ್ಯಾಪಿಟಲ್ ಗೆನ್ಸ್ ಟ್ಯಾಕ್ಸ್ ಕೂಡ ಇರುವುದಿಲ್ಲ. ಇಕ್ವಿಟಿ ಮೇಲೆ ಶೇ.10ರಷ್ಟು ಕ್ಯಾಪಿಟಲ್ ಗೆನ್ಸ್ ಟ್ಯಾಕ್ಸ್ ಇರುತ್ತದೆ. ಹೇಗಾಗಿ ದೀರ್ಘಾವಧಿ ಹೂಡಿಕೆಗೆ ಇದೊಂದು ಉತ್ತಮ ಆಯ್ಕೆಯಾಗಿದೆ. - ಭೌತಿಕ ಚಿನ್ನಕ್ಕೆ ಹೋಲಿಸಿದರೆ ಇದೊಂದು ಸುರಕ್ಷಿತ ಹೂಡಿಕೆಯಾಗಿದೆ. - ಚಿನ್ನದ ಶುದ್ಧತೆಯನ್ನು ಪರಿಶೀಲಿಸುವ ಅವಶ್ಯಕತೆ ಇಲ್ಲ. - ಎಕ್ಸಿಟ್ ಗಾಗಿ ತುಂಬಾ ಸರಳ ಆಯ್ಕೆಗಳಿವೆ. ಇದರ ಮೇಲೆ ನೀವು ಸಾಲವನ್ನು ಕೂಡ ಪಡೆಯಬಹುದು.