ಟೀಂ ಇಂಡಿಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ ಯಾರು? ವಿರಾಟ್, ಹಾರ್ದಿಕ್, ರೋಹಿತ್’ರನ್ನೇ ಮೀರಿಸಿದ ಆಟಗಾರ ಈತ

Published: May 16, 2024, 06:07 PM IST|Updated: May 16, 2024, 06:07 PM IST

Highest Paid Cricketer in India 2024: ಟೀಂ ಇಂಡಿಯಾದಲ್ಲಿ ಇದುವರೆಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅತಿಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ ಎಂದು ಹೇಳಲಾಗುತ್ತಿತ್ತು. ಆದರೆ ಈ ಬಾರಿ ಐಪಿಎಲ್ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಈ ಹೆಗ್ಗಳಿಕೆ ಬೇರೊಬ್ಬ ಆಟಗಾರನ ಕಡೆ ತಿರುಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=O-hDphMYFMg

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Highest Paid Cricketer in India 20241/6

ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಎಂಎಸ್ ಧೋನಿ ಅಥವಾ ರಿಷಬ್ ಪಂತ್ ಐಪಿಎಲ್‌’ನ ನಡೆಯುತ್ತಿರುವ ಋತುವಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ಆಟಗಾರರಲ್ಲ.

Highest Paid Cricketer in India 20242/6

ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ

IPL 2024 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ಆಟಗಾರ ಬೇರಾರು ಅಲ್ಲ, ಕನ್ನಡಿಗ ಕೆಎಲ್ ರಾಹುಲ್.

Highest Paid Cricketer in India 20243/6

ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ

ಬಲಗೈ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಮತ್ತು ಭಾರತೀಯ ತಂಡದ ಉಪನಾಯಕ ಕೆಎಲ್ ರಾಹುಲ್ ಐಪಿಎಲ್ 2024 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ಆಟಗಾರರಾಗಿದ್ದಾರೆ. 2022 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) 17 ಕೋಟಿ ರೂ. ನೀಡಿ ರಾಹುಲ್ ಅವರನ್ನು ತಮ್ಮ ತಂಡಕ್ಕೆ ಸೇರ್ಪಡೆಗೊಳಿಸಿದೆ.

Highest Paid Cricketer in India 20244/6

ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ

ವಿವಿಧ ವರದಿಗಳ ಪ್ರಕಾರ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ರಿಷಭ್ ಪಂತ್ ಅವರು ತಮ್ಮ ಫ್ರಾಂಚೈಸಿಗಳೊಂದಿಗೆ ಒಪ್ಪಂದದಿಂದ ವಾರ್ಷಿಕವಾಗಿ 16 ಕೋಟಿ ರೂಪಾಯಿಗಳನ್ನು ಗಳಿಸುತ್ತಾರೆ, ಈ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

Highest Paid Cricketer in India 20245/6

ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ

ಈ ವರ್ಷದ ಆರಂಭದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಿಡುಗಡೆ ಮಾಡಿದ 2023-2024 ಆಟಗಾರರ ಒಪ್ಪಂದಗಳ ಪಟ್ಟಿಯ ಪ್ರಕಾರ, ಕೆಎಲ್ ರಾಹುಲ್ ಅವರನ್ನು ಗ್ರೇಡ್ ಬಿ ಯಿಂದ ಗ್ರೇಡ್ ಎ ಗೆ ಬಡ್ತಿ ಮಾಡಲಾಗಿದೆ. ಈ ಮೂಲಕ ವಾರ್ಷಿಕ ರೂ 5 ಕೋಟಿ ವೇತನಕ್ಕೆ ಅರ್ಹವಾಗಿರುತ್ತಾರೆ.

Highest Paid Cricketer in India 20246/6

ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ

BCCI ಮತ್ತು IPL ಫ್ರಾಂಚೈಸಿ (ಲಕ್ನೋ ಸೂಪರ್ ಜೈಂಟ್ಸ್) ಜೊತೆಗಿನ ಒಪ್ಪಂದಗಳ ಹೊರತಾಗಿ, KL ರಾಹುಲ್ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌’ಗಳಿಂದ ಗಣನೀಯ ಪ್ರಮಾಣದ ಹಣವನ್ನು ಗಳಿಸುತ್ತಾರೆ.