WhatsApp Groupನಲ್ಲಿ ರಹಸ್ಯವಾಗಿ ಪ್ರತಿಕ್ರಿಯಿಸುವ ಸುಲಭ ವಿಧಾನ ನಿಮಗೆ ಗೊತ್ತೇ!

                    

ವಾಟ್ಸಾಪ್ ಗುಂಪಿನಲ್ಲಿರುವ ಯಾರಿಗಾದರೂ ರಹಸ್ಯ ಸಂದೇಶವನ್ನು ಕಳುಹಿಸಲು ಆ  ಸಂಖ್ಯೆಯನ್ನು ಸೇವ್ ಮಾಡಿಕೊಳ್ಳುವ ಅಗತ್ಯವಿಲ್ಲ. ಸಂಖ್ಯೆಯನ್ನು ಸೇವ್ ಮಾಡದೆಯೇ ನೀವು ಯಾರಿಗಾದರೂ ಸಂದೇಶವನ್ನು ಕಳುಹಿಸಬಹುದು.

1 /6

ನವದೆಹಲಿ: ವಾಟ್ಸಾಪ್ ಈಗ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ವೈಯಕ್ತಿಕ ಸಂದೇಶಗಳಿಂದ ಹಿಡಿದು ವೃತ್ತಿಪರ ಸಂದೇಶಗಳು ಈಗ ವಾಟ್ಸಾಪ್‌ನಲ್ಲಿಯೇ ಹೆಚ್ಚಾಗಿವೆ. ಈ ದಿನಗಳಲ್ಲಿ ನೀವು ಸಹ ಅನೇಕ ವಾಟ್ಸಾಪ್ ಗುಂಪುಗಳಿಗೆ ಸಂಪರ್ಕ ಹೊಂದಿರಬಹುದು. ಗುಂಪಿನಲ್ಲಿರುವ ಎಲ್ಲ ಜನರ ಸಂಪರ್ಕ ಸಂಖ್ಯೆಯನ್ನು ನಿಮ್ಮ ಫೋನ್‌ನಲ್ಲಿ ಉಳಿಸುವುದು ಅಂದರೆ ಸೇವ್ ಮಾಡುವುದು ಅನಿವಾರ್ಯವಲ್ಲ. ಅಂತಹ ಪರಿಸ್ಥಿತಿಯಲ್ಲಿ ವಾಟ್ಸಾಪ್ ಗುಂಪಿನಲ್ಲಿರುವ ಯಾವುದೇ ಸದಸ್ಯರಿಗೆ ರಹಸ್ಯ ಸಂದೇಶವನ್ನು ಹೇಗೆ ಕಳುಹಿಸುವುದು ಎಂದು ಇಂದು ನಾವು ನಿಮಗೆ ಹೇಳುತ್ತಿದ್ದೇವೆ ...

2 /6

ವಾಟ್ಸಾಪ್ ಗುಂಪು ಜನರೊಂದಿಗೆ ಸಂಪರ್ಕ ಸಾಧಿಸಲು ಬಹಳ ಸುಲಭವಾದ ಮಾರ್ಗವಾಗಿದೆ. ಆದರೆ ವಾಟ್ಸಾಪ್ ಗುಂಪುಗಳ ಎಲ್ಲ ಜನರನ್ನು ನೀವು ಖಾಸಗಿಯಾಗಿ ತಿಳಿದುಕೊಳ್ಳುವುದು ಅನಿವಾರ್ಯವಲ್ಲ. ವಾಸ್ತವವಾಗಿ ವಾಟ್ಸಾಪ್ ಗ್ರೂಪ್ ನಿರ್ವಾಹಕರು ಯಾವುದೇ ವ್ಯಕ್ತಿಯನ್ನು ಗುಂಪಿಗೆ ಸೇರಿಸಬಹುದು. ವಾಟ್ಸಾಪ್ ಗುಂಪು 100-250 ಸದಸ್ಯರನ್ನು ಹೊಂದಬಹುದು.

3 /6

ಕೆಲವೊಮ್ಮೆ ವಾಟ್ಸಾಪ್ ಗುಂಪಿನಲ್ಲಿ (Whatsapp Group) ಸಾರ್ವಜನಿಕವಾಗಿ ಉತ್ತರಿಸಲು ಸಾಧ್ಯವಾಗದಂತಹ ವಿಷಯಗಳ ಮೇಲೆ ಚರ್ಚೆ ನಡೆಯುತ್ತಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ನಿರ್ದಿಷ್ಟ ವ್ಯಕ್ತಿಗೆ ನೇರ ಉತ್ತರ ಅಥವಾ ಸಲಹೆಯನ್ನು ನೀಡಲು ಬಯಸುತ್ತೀರಿ ಎಂದಾದರೆ ರಹಸ್ಯ ಸಂದೇಶಗಳನ್ನು ನೇರವಾಗಿ ಕಳುಹಿಸುವುದು ಕೆಲವೊಮ್ಮೆ ಅತ್ಯಂತ ನಿಖರವಾದ ಮಾರ್ಗವಾಗಿದೆ.

4 /6

ನೀವು ಉತ್ತರಿಸಲು ಬಯಸುವ ವಾಟ್ಸಾಪ್ (Whatsapp) ಗುಂಪಿನಲ್ಲಿ ಚಾಟ್ ಅನ್ನು ಮೊದಲು ಒತ್ತಿರಿ. ಸಂದೇಶವನ್ನು ಆಯ್ಕೆ ಮಾಡಿದ ನಂತರ, ಬಲಭಾಗದಲ್ಲಿ ತೋರಿಸಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.

5 /6

ಈಗ ನೀವು Reply Privately ಮೇಲೆ ಟ್ಯಾಪ್ ಮಾಡಿ. ವಾಟ್ಸಾಪ್‌ನಲ್ಲಿ ಹೊಸ ಟ್ಯಾಬ್ ತೆರೆಯುತ್ತದೆ, ಅದರಲ್ಲಿ ನೀವು ರಹಸ್ಯವಾಗಿ ಸಂದೇಶ ಕಳುಹಿಸಲು ಬಯಸುವ ವ್ಯಕ್ತಿಯ ಸಂಖ್ಯೆ ತೋರಿಸಲ್ಪಡುತ್ತದೆ. ಈಗ ನೀವು ಸಂದೇಶವನ್ನು ಇಲ್ಲಿ ಟೈಪ್ ಮಾಡಬಹುದು. ನೀವು ರಹಸ್ಯವಾಗಿ ಸಂದೇಶ ಕಳುಹಿಸಲು ಬಯಸುವ ವ್ಯಕ್ತಿಗೆ ಆ ಸಂದೇಶವನ್ನು ನೇರವಾಗಿ ಕಳುಹಿಸಲಾಗುತ್ತದೆ ಮತ್ತು ನೀವು ಈ ಸಂದೇಶವನ್ನು ವಾಟ್ಸಾಪ್ ಗುಂಪಿನಲ್ಲಿ ನೋಡುವುದಿಲ್ಲ. ಇದನ್ನೂ ಓದಿ: Whatsapp: ಹೊಸ ನಿಯಮಗಳನ್ನು ಸ್ವೀಕರಿಸಿ, ಇಲ್ಲದಿದ್ದರೆ ಅಕೌಂಟ್ ಡಿಲೀಟ್ ಮಾಡಿ!

6 /6

ವಾಟ್ಸಾಪ್ ಗುಂಪಿನಲ್ಲಿರುವ ಯಾರಿಗಾದರೂ ರಹಸ್ಯ ಸಂದೇಶವನ್ನು ಕಳುಹಿಸಲು ನೀವು ಆ ಸಂಖ್ಯೆಯನ್ನು ಸೇವ್ ಮಾಡಲೇ ಬೇಕು ಎನ್ನುವ ಅನಿವಾರ್ಯತೆ ಇಲ್ಲ.  ಸಂಖ್ಯೆಯನ್ನು ಉಳಿಸದೆ ನೀವು ಯಾರಿಗಾದರೂ ಸಂದೇಶವನ್ನು ಕಳುಹಿಸಬಹುದು. ಇದನ್ನೂ ಓದಿ: WhatsApp ಮೂಲಕ ಹಣ ಸಂಪಾದಿಸಬಹುದೇ? ಇಲ್ಲಿದೆ ಮಾಹಿತಿ ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ Android Link - https://bit.ly/3hDyh4G iOS Link - https://apple.co/3loQYe