ಬಾತ್ ರೂಂನಲ್ಲಿ ಹೃದಯಾಘಾತವಾಗುವುದಕ್ಕೆ ಹಲವು ಕಾರಣಗಳಿವೆ. ಹೃದಯ ಸಂಬಂಧಿ ಕಾಯಿಲೆಗಳನ್ನು ಹೊಂದಿರುವ ಜನರು ಹೆಚ್ಚು ಹೃದಯಾಘಾತಕ್ಕೆ ಒಳಗಾಗುತ್ತಾರೆ.
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಮೃತ ಪಡುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಈ ಪೈಕಿ ಅನೇಕ ಪ್ರಕರಣಗಳಲ್ಲಿ ಬಾತ್ ರೂಮ್ ನಲ್ಲೇ ಹೃದಯಾಘಾತವಾಗಿರುವ ಬಗ್ಗೆಯೂ ನೀವು ಕೇಳಿರಬಹುದು. ಆದರೆ ಯಾಕೆ ಹೀಗೆ? ಬಾತ್ ರೂಂನಲ್ಲಿ ಯಾಕೆ ಹೆಚ್ಚಾಗಿ ಹೃದಯಾಘಾತವಾಗುತ್ತದೆ ಎನ್ನುವುದನ್ನು ಎಂದಾದರು ಯೋಚಿಸಿದ್ದಿರಾ? ಅದಕ್ಕೆ ಕಾರಣಗಳು ಇಲ್ಲಿವೆ..
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಬಾತ್ ರೂಂನಲ್ಲಿ ಹೃದಯಾಘಾತವಾಗುವುದಕ್ಕೆ ಹಲವು ಕಾರಣಗಳಿವೆ. ಹೃದಯ ಸಂಬಂಧಿ ಕಾಯಿಲೆಗಳನ್ನು ಹೊಂದಿರುವ ಜನರು ಹೆಚ್ಚು ಹೃದಯಾಘಾತಕ್ಕೆ ಒಳಗಾಗುತ್ತಾರೆ.
ಬಾತ್ ರೂಂನಲ್ಲಿ ಹೃದಯಾಘಾತ ಹೆಚ್ಚಾಗಿ ಯಾಕೆ ಸಂಭವಿಸುತ್ತದೆ? ಹೌದು ಈ ಅಪಾಯವನ್ನು ತಪ್ಪಿಸಬೇಕಾದರೆ ಅದರ ಹಿಂದಿನ ಕಾರಣವನ್ನು ತಿಳಿದುಕೊಳ್ಳಬೇಕು. , ಅಮೇರಿಕನ್ ಸಂಸ್ಥೆ ಎನ್ಸಿಬಿಐ ವರದಿಯ ಪ್ರಕಾರ, 11% ಕ್ಕಿಂತ ಹೆಚ್ಚು ಹೃದಯಾಘಾತ ಪ್ರಕರಣಗಳು ಬಾತ್ ರೂಂನಲ್ಲಿ ಲ್ಲಿ ಸಂಭವಿಸುತ್ತವೆ.
ಸ್ನಾನ ಮಾಡುವಾಗಲೂ ಹೃದಯಾಘಾತದ ಅಪಾಯ ಹೆಚ್ಚಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ. ನಿಮ್ಮ ದೇಹಕ್ಕೆ ಅನುಗುಣವಾಗಿ ನೀರನ್ನು ಬಳಸದಿದ್ದಾಗ, ಈ ಅಪಾಯ ಹೆಚ್ಚಾಗುತ್ತದೆ. ಉದಾಹರಣೆಗೆ, ಚಳಿಗಾಲದಲ್ಲಿ ತುಂಬಾ ತಣ್ಣೀರು ಸಮಸ್ಯೆಗಳನ್ನು ಉಂಟುಮಾಡಬಹುದು. ದೇಹದ ತಾಪಮಾನಕ್ಕೆ ಅನುಗುಣವಾಗಿಯೇ ನೀರನ್ನು ಬಳಸಬೇಕು. ಮತ್ತು ಆತುರ ಆತುರವಾಗಿ ಸ್ನಾನ ಮಾಡುವುದನ್ನು ತಪ್ಪಿಸಬೇಕು. ಹೀಗಾದಾಗ ಸ್ಟ್ರೆಸ್ ಜಾಸ್ತಿಯಾಗುತ್ತದೆ. ಹೃದಯಾಘಾತದ ಅಪಾಯವು ಹೆಚ್ಚುತ್ತದೆ.
ಈಗಾಗಲೇ ಹೃದಯದ ತೊಂದರೆ ಇರುವವರು ಈ ವಿಷಯಗಳನ್ನು ತಿಳಿದುಕೊಳ್ಳಲೇಬೇಕು. ಇನ್ನೊಂದೆಡೆ, ಮಲಬದ್ಧತೆಯ ಸಮಸ್ಯೆ ಇರುವವರು ಹೊಟ್ಟೆ ಸ್ವಚ್ಛಗೊಳಿಸಲು ತುಂಬಾ ಪ್ರೆಶರ್ ಹಾಕಬೇಕಾಗುತ್ತದೆ. ಹಾಗೆ ಮಾಡುವುದರಿಂದ ವ್ಯಕ್ತಿಯ ಹೃದಯದ ಮೇಲೆ ಒತ್ತಡ ಉಂಟಾಗುತ್ತದೆ. ಆದ್ದರಿಂದ, ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ.
Healthline.com ಪ್ರಕಾರ, ಹೃದಯದಲ್ಲಿ ಎಲೆಕ್ಟ್ರಿಕಲ್ ಸಮಸ್ಯೆ ಇದ್ದಾಗ ಹೃದಯ ಸ್ತಂಭನ ಸಂಭವಿಸುತ್ತದೆ. ಅನಿಯಮಿತ ಹೃದಯ ಬಡಿತದಿಂದಲೂ ಹೀಗಾಗುತ್ತದೆ. ಸ್ನಾನ ಮಾಡುವಾಗ ಅಥವಾ ಫ್ರೆಶ್ ಆಗುವಾಗ ಈ ರೀತಿಯ ಅಸಮರ್ಪಕ ಕ್ರಿಯೆಯ ಸಾಧ್ಯತೆಗಳು ಹೆಚ್ಚಾಗುತ್ತವೆ. ಇದೆಲ್ಲದರ ಹಿಂದೆ ಒಂದು ದೊಡ್ಡ ಕಾರಣವೆಂದರೆ ನೀವು ತೆಗೆದುಕೊಳ್ಳುತ್ತಿರುವ ಸ್ರೆಸ್ಸ್ ಆಗಿರಬಹುದು.