Summer Fruit : ಈ ಐದು ಕಾರಣಗಳಿಗಾಗಿ ಖರ್ಬೂಜ ಹಣ್ಣು ತಿನ್ನಲೇಬೇಕು

ಖರ್ಬೂಜ ಹಣ್ಣು ಬೇಸಿಗೆಯಲ್ಲಿ ಬರುವ ತುಂಬಾ ರುಚಿಯಾದ ಹಣ್ಣುಗಳಲ್ಲಿ ಒಂದು.  ಆರೋಗ್ಯದ ದೃಷ್ಟಿಯಿಂದ ಖರ್ಬೂಜ ಅನೇಕ ಪ್ರಯೋಜನಗಳನ್ನು ಹೊಂದಿದೆ. ವಿಟಮಿನ್ ಸಿ ಸಮೃದ್ಧವಾಗಿರುವ ಕಾರಣ ಈ ಹಣ್ಣು ಅನೇಕ ರೋಗಗಳ ವಿರುದ್ಧ ಹೋರಾಡಲು ಸಹ  ಸಹಾಯ ಮಾಡುತ್ತದೆ.

ನವದೆಹಲಿ : ಬೇಸಿಗೆಯಲ್ಲಿ ಅನೇಕ ಹಣ್ಣುಗಳು ಮಾರುಕಟ್ಟೆಗೆ ಬರುತ್ತವೆ. ಇವುಗಳಲ್ಲಿ  ಮಾವು (mango) , ಲಿಚಿ, ಕಲ್ಲಂಗಡಿ (water melon) ಮತ್ತು ಖರ್ಬೂಜ (Musk melon) ಹಣ್ಣುಗಳು ಸೇರಿವೆ.  ಈ ಬೇಸಿಗೆ ಹಣ್ಣುಗಳು ತಿನ್ನಲು ಮಾತ್ರ ರುಚಿಯಾಗಿರುವುದಿಲ್ಲ. ಆರೋಗ್ಯದ ದೃಷ್ಟಿಯಿಂದಲೂ ಈ ಹಣ್ಣುಗಳ ಸೇವನೆ ತುಂಬಾ ಪ್ರಯೋಜನಕಾರಿಯಾಗಿದೆ.  ಖರ್ಬೂಜ ಹಣ್ಣು  ಹೇರಳವಾಗಿ ಮಿನರಲ್ಸ್, ಅಂಟಿ ಒಕ್ಸಿಡೆಂಟ್ ಗಳನ್ನು ಒಳಗೊಂಡಿದೆ.  ಅಲ್ಲದೆ ಈ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಬೀಟಾ ಕ್ಯಾರೋಟಿನ್ ಕೂಡಾ  ಅಧಿಕ ಪ್ರಮಾಣದಲ್ಲಿರುತ್ತವೆ. ಇದು ರೋಗಗಳ ವಿರುದ್ಧ ಹೋರಾಡುವ  ಸಾಮರ್ಥ್ಯವನ್ನು ಬಲಪಡಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

1 /5

ಕಲ್ಲಂಗಡಿಯಂತೆಯೇ, ಖರ್ಬೂಜ  (Musk melon) ಕೂಡಾ ಹೆಚ್ಚಿನ ಪ್ರಮಾಣದಲ್ಲಿ ನೀರು ಮತ್ತು ಫೈಬರ್ ಅನ್ನು ಹೊಂದಿರುತ್ತದೆ. ಈ ಹಣ್ಣಲ್ಲಿ ಫ್ಯಾಟ್ ಕಂಟೆಂಟ್ ಕೂಡಾ ಇಲ್ಲ. ಖರ್ಬೂಜ ತಿಂದ ನಂತರ, ಬಹಳ ಹೊತ್ತಿನವರೆಗೆ ಹೊಟ್ಟೆ ತುಂಬಿರುತ್ತದೆ. ಹಾಗಾಗಿ ಮಧ್ಯೆ ಮಧ್ಯೆ ಕುರುಕಲು ತಿಂಡಿಗಳನ್ನು ತಿನಬೇಕು ಅನ್ನಿಸುವುದಿಲ್ಲ. ಇದರಿಂದಾಗಿ ಅನಗತ್ಯವಾಗಿ ಕ್ಯಾಲೊರಿಗಳು ನಮ್ಮ ದೇಹ ಸೇರುವುದು ತಪ್ಪುತ್ತದೆ. ಇದರಿಂದಾಗಿ ದೇಹ ತೂಕ ಕೂಡಾ ನಿಯಂತ್ರಣದಲ್ಲಿರುತ್ತದೆ.  

2 /5

ಕ್ಯಾರೆಟಿನಂತೆ ಖರ್ಬೂಜ ಹಣ್ಣಿನಲ್ಲಿಯೂ  ಬೀಟಾ-ಕ್ಯಾರೋಟಿನ್ ಇರುತ್ತದೆ. ಈ ಕಾರಣದಿಂದಾಗಿಯೇ ಖರ್ಬೂಜ ಕೇಸರಿ ಬಣ್ಣವನ್ನು ಹೊಂದಿರುತ್ತದೆ. ಇದರಲ್ಲಿರುವ ಬೀಟಾ-ಕ್ಯಾರೋಟಿನ್ ಕಣ್ಣುಗಳ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಆದ್ದರಿಂದ ಬೇಸಿಗೆಯಲ್ಲಿ ಖರ್ಬೂಜ ಹಣ್ಣನ್ನು ಹೆಚ್ಚಾಗಿ ತಿನ್ನಬೇಕು.  

3 /5

 ಅಧಿಕ ರಕ್ತದೊತ್ತಡದ ರೋಗಿಗಳಿಗೆ ಖರ್ಬೂಜ ಹಣ್ಣು ಅತ್ಯಂತ ಪ್ರಯೋಜನಕಾರಿ. ಖರ್ಬೂಜದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೊಟ್ಯಾಶಿಯಮ್ ಇರುತ್ತದೆ. ಇದು ದೇಹದಲ್ಲಿ ರಕ್ತ ಸಂಚಾರವನ್ನು ಸುಲಭಗೊಳಿಸುತ್ತದೆ.  ಅಲ್ಲದೆ, ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

4 /5

ಹವಾಮಾನ ಬದಲಾವಣೆಯಿಂದ ಬಾಧಿಸುವ ಶೀತ-ಕೆಮ್ಮು ಮತ್ತು ಮೂಗು ಕಟ್ಟುವ ಸಮಸ್ಯೆಯನ್ನು ಖರ್ಬೂಜ ಹಣ್ಣು ನಿವಾರಿಸುತ್ತದೆ. ಬೇಕಾದರೆ ಸಲಾಡ್ ಅಥವಾ ಮೊಸರಿನೊಂದಿಗೆ ಸೇರಿಸಿ ಖರ್ಬೂಜದ ಬೀಜಗಳನ್ನು ಸೇವಿಸಬಹುದು. ಇದು ಅನೇಕ ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.

5 /5

ಖರ್ಬೂಜದಲ್ಲಿ ಕಂಡುಬರುವ ಪೊಟ್ಯಾಶಿಯಮ್ ಮೆದುಳಿನಲ್ಲಿ ಆಮ್ಲಜನಕದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರಕ್ತವು ಸರಿಯಾದ ಪ್ರಮಾಣದಲ್ಲಿ ಮೆದುಳನ್ನು ತಲುಪಿದಾಗ, ಮೆದುಳು ಶಾಂತವಾಗಿರುತ್ತದೆ. ಇದರಿಂದ ಒತ್ತಡವೂ ಕಡಿಮೆಯಾಗುತ್ತದೆ. ವಿಟಮಿನ್ ಸಿ ಹೇರಳವಗಿರುವುದರಿಂದ ಖರ್ಬೂಜ ಬಿಳಿ ರಕ್ತ ಕಣಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ.