Betel Leaf for Hair Growth : ಉದ್ದ ಮತ್ತು ದಪ್ಪವಾದ ಕೂದಲನ್ನು ಪಡೆಯುವುದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಆದರೆ ಕೆಲವು ಕಾರಣಗಳಿಂದ ಕೂದಲು ಉದುರುವಿಕೆ ಸಮಸ್ಯೆ ಜನರನ್ನು ಕಾಡುತ್ತದೆ. ಇದಕ್ಕೆ ವೀಳ್ಯದೆಲೆಯಲ್ಲಿ ಪರಿಹಾರವಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಇಂದಿನ ಬಿಡುವಿಲ್ಲದ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ, ಒತ್ತಡದ ಜೀವನ ಹೀಗೆ ಹಲವು ಕಾರಣಗಳಿಂದ ಕೂದಲು ಉದುರುವಿಕೆಯಿಂದ ಬಳಲುತ್ತಿದ್ದಾರೆ. ಮನೆಯಲ್ಲಿಯೇ ಸುಲಭವಾಗಿ ಸಿಗುವ ಪದಾರ್ಥಗಳಿಂದ ನೈಸರ್ಗಿಕವಾಗಿ ದಟ್ಟ ಕೂದಲನ್ನು ಪಡೆಯಬಹುದು.
ಸಾಮಾನ್ಯವಾಗಿ ನಾವು ತಾಂಬೂಲಕ್ಕೆ ವೀಳ್ಯದೆಲೆಯನ್ನು ಬಳಸುತ್ತೇವೆ. ಆದರೆ ಅದು ಕೂದಲಿಗೆ ಸಹ ತುಂಬಾ ಪ್ರಯೋಜನಕಾರಿಯಾಗಿದೆ. ಇದು ನೈಸರ್ಗಿಕ ಉತ್ಪನ್ನವಾಗಿರುವುದರಿಂದ ಯಾವುದೇ ಅಡ್ಡಪರಿಣಾಮ ಇರುವುದಿಲ್ಲ.
ಅನಾದಿ ಕಾಲದಿಂದಲೂ ವೀಳ್ಯದೆಲೆಯನ್ನು ಮನೆಮದ್ದುಗಳಲ್ಲಿ ಬಳಸಲಾಗುತ್ತಿದೆ. ವೀಳ್ಯದೆಲೆ ಹಲವಾರು ವಿಶಿಷ್ಟ ಔಷಧೀಯ ಗುಣಗಳನ್ನು ಹೊಂದಿದೆ. ವೀಳ್ಯದೆಲೆಯಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್, ನಿಕೋಟಿನಿಕ್ ಆಮ್ಲ, ವಿಟಮಿನ್ ಎ, ಸಿ, ಬಿ2, ಬಿ1 ಇದ್ದು, ಇದು ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
ವೀಳ್ಯದೆಲೆಗಳು ಆಂಟಿಮೈಕ್ರೊಬಿಯಲ್, ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿವೆ. ಕೂದಲಿನ ಕಿರುಚೀಲಗಳ ಬಳಿ ಅನೇಕ ರೀತಿಯ ನೆತ್ತಿಯ ಸೋಂಕನ್ನು ತಡೆಯುತ್ತಾರೆ.
ನಿಮ್ಮ ಕೂದಲಿಗೆ ವೀಳ್ಯದೆಲೆ ಚಿಕಿತ್ಸೆ ನೀಡಲು ಹೆಚ್ಚು ಶ್ರಮ ಬೇಕಾಗಿಲ್ಲ. ಕೂದಲಿನ ಉದ್ದಕ್ಕೆ ಬೇಕಾದಷ್ಟು ವೀಳ್ಯದೆಲೆಯನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ಮೃದುವಾದ ಪೇಸ್ಟ್ ಮಾಡಿ.
ವೀಳ್ಯದೆಲೆ ಪೇಸ್ಟ್ಗೆ ಒಂದು ಚಮಚ ಶುದ್ಧ ತುಪ್ಪವನ್ನು ಸೇರಿಸಿ. ಈ ಮಿಶ್ರಣವನ್ನು ತಲೆಗೆ ಹಚ್ಚಿ ಮತ್ತು ಒಂದು ಗಂಟೆ ಬಿಡಿ. ನಂತರ ರಾಸಾಯನಿಕ ಮುಕ್ತ ಶಾಂಪೂ ಬಳಸಿ ಬೆಚ್ಚಗಿನ ನೀರಿನಿಂದ ತೊಳೆಯಿರಿ.
ವಾರಕ್ಕೊಮ್ಮೆ ಹೀಗೆ ಮಾಡುವುದರಿಂದ ವೀಳ್ಯದೆಲೆಯಲ್ಲಿರುವ ಪೋಷಕಾಂಶಗಳು ಕೂದಲಿಗೆ ತಲುಪುತ್ತದೆ. ಕೂದಲು ಉದುರುವುದು, ಒಣಗುವುದು ಮುಂತಾದ ಸಮಸ್ಯೆಗಳು ಕಡಿಮೆಯಾಗುತ್ತವೆ. ಕೂದಲು ಬೇರುಗಳಿಂದ ಬಲವಾಗಿ ಮತ್ತು ಮೃದುವಾಗಿ ಬೆಳೆಯುತ್ತದೆ.
ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ.