Lucky Charm: ಈ ಜೀವಿಗಳನ್ನು ಸಾಕುವುದು ತುಂಬಾ ಶುಭ, ಪ್ರತಿ ಕೆಲಸದಲ್ಲೂ ಸಿಗುತ್ತೆ ಯಶಸ್ಸು

                          

Lucky Charm: ಅನೇಕ ಮನೆಗಳಲ್ಲಿ ಸಾಕುಪ್ರಾಣಿಗಳನ್ನು ಸಾಕುತ್ತಾರೆ. ಈ ಪ್ರಾಣಿ-ಪಕ್ಷಿಗಳನ್ನು ಮನೆಯಲ್ಲಿ ಸಾಕುವುದು, ಅವುಗಳಿಗೆ ಆಹಾರ ನೀಡುವುದು ಅತ್ಯಂತ ಪುಣ್ಯದ ಕಾರ್ಯ. ಈ ಪ್ರಾಣಿಗಳು ಮತ್ತು ಪಕ್ಷಿಗಳು ಸಹ ನಿಮಗೆ ಬೇಷರತ್ತಾದ ಪ್ರೀತಿಯನ್ನು ನೀಡುತ್ತವೆ. ಇದಲ್ಲದೆ, ಈ ಸಾಕುಪ್ರಾಣಿಗಳು ನಿಮಗೆ ಅದೃಷ್ಟದ ಬಾಗಿಲುಗಳನ್ನು ತೆರೆಯುತ್ತವೆ. ಇಂದು ನಾವು ಅಂತಹ ಜೀವಿಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ ಅವುಗಳನ್ನು ಮನೆಯಲ್ಲಿ ಸಾಕುವುದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಈ ಪ್ರಾಣಿಗಳಿದ್ದರೆ ಅಂತಹ ಮನೆಗಳಲ್ಲಿ ಸುಖ-ಸಂತೋಷ ಮತ್ತು ಸಮೃದ್ಧಿ ಸದಾ ಇರಲಿದೆ ಎಂದು ಹೇಳಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಆಮೆ ಇದ್ದರೆ ತುಂಬಾ ಶುಭ. ಇದರೊಂದಿಗೆ, ನಿಮ್ಮ ಎಲ್ಲಾ ಕೆಲಸಗಳು ಸುಲಭವಾಗಿ ಕೈಹಿಡಿಯುತ್ತವೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಆಮೆಯ ಉಪಸ್ಥಿತಿಯು ಸಂಪತ್ತನ್ನು ವೇಗವಾಗಿ ಹೆಚ್ಚಿಸುತ್ತದೆ ಎನ್ನಲಾಗುತ್ತದೆ.

2 /5

ಅನೇಕ ಮನೆಗಳಲ್ಲಿ ಅಕ್ವೇರಿಯಂಗಳಿರುವುದನ್ನು ನಾವು ನೋಡುತ್ತೇವೆ. ಮನೆಯಲ್ಲಿ ಮೀನುಗಳನ್ನು ಇಡುವುದರಿಂದ ಧನಾತ್ಮಕತೆ ಮತ್ತು ಅದೃಷ್ಟ ಎರಡನ್ನೂ ತರುತ್ತದೆ. ವಿಶೇಷವಾಗಿ ಚಿನ್ನದ ಬಣ್ಣದ ಮೀನುಗಳೊಂದಿಗೆ ಕಪ್ಪು ಮೀನುಗಳನ್ನು ಇಟ್ಟುಕೊಳ್ಳಿ. ಇದರಿಂದ ಮನೆಯಲ್ಲಿ ಸಾಕಷ್ಟು ಹಣ ಬರುತ್ತದೆ ಮತ್ತು ಎಲ್ಲಾ ತೊಂದರೆಗಳು ಸಹ ದೂರವಾಗುತ್ತವೆ ಎಂದು ಹೇಳಲಾಗುತ್ತದೆ.

3 /5

ನೀವು ಮನೆಯ ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕಲು ಬಯಸಿದರೆ ಮೊಲವನ್ನು ಸಾಕುವುದು ತುಂಬಾ ಒಳ್ಳೆಯದು. ಇದು ನಕಾರಾತ್ಮಕತೆಯನ್ನು ಧನಾತ್ಮಕವಾಗಿ ಪರಿವರ್ತಿಸುತ್ತದೆ ಮತ್ತು ದುಷ್ಟ ಕಣ್ಣುಗಳಿಂದ ಮಕ್ಕಳನ್ನು ರಕ್ಷಿಸುತ್ತದೆ. ಅಲ್ಲದೆ ಮನೆಯಲ್ಲಿ ಅದೃಷ್ಟವನ್ನು ತರುತ್ತದೆ ಎಂಬ ನಂಬಿಕೆ ಇದೆ.

4 /5

ನಾಯಿಯ ಸೇವೆಯು ಅನೇಕ ತೊಂದರೆಗಳಿಂದ ಉಳಿಸುತ್ತದೆ. ಇದು ಕಾಲಭೈರವನ ಸೇವಕ ಮತ್ತು ನಾಯಿಯನ್ನು ಸಾಕುವುದರಿಂದ, ಅನೇಕ ಅಶುಭ ಗ್ರಹಗಳು ಸಹ ಶುಭ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತವೆ ಎಂದು ಹೇಳಲಾಗುತ್ತದೆ.

5 /5

ಅದೃಷ್ಟದ ಚಿಹ್ನೆಯ ಪಟ್ಟಿಯಲ್ಲಿ ಕುದುರೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಆದರೆ ಅದನ್ನು ಸಾಕುವುದು ಸುಲಭವಲ್ಲ. ಆದ್ದರಿಂದ, ಮನೆಯಲ್ಲಿ ಕುದುರೆಯ ಚಿತ್ರ ಅಥವಾ ಪ್ರತಿಮೆಯನ್ನು ಇರಿಸಿ, ಅದು ನಿಮ್ಮನ್ನು ತ್ವರಿತ ಪ್ರಗತಿಯತ್ತ ಕೊಂಡೊಯ್ಯುತ್ತದೆ ಎನ್ನಲಾಗುತ್ತದೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಪುಷ್ಟೀಕರಿಸುವುದಿಲ್ಲ.