ಬಾಲ್ಕನಿಗೆ ಅದೃಷ್ಟದ ಸಸ್ಯಗಳು: ಮನೆಯಲ್ಲಿ ಇಎಲವು ಸಸ್ಯಗಳನ್ನು ಇಡುವುದನ್ನು ತುಂಬಾ ಶುಭ ಎಂದು ಹೇಳಲಾಗುತ್ತದೆ. ಅಂತೆಯೇ ಮನೆಯ ಬಾಲ್ಕನಿಯಲ್ಲಿ ಕೆಲವು ಸಸ್ಯಗಳನ್ನು ಇಡುವುದರಿಂದ ಆ ಸಸ್ಯಗಳು ಹಣವನ್ನು ಆಯಸ್ಕಾಂತದಂತೆ ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಸಸ್ಯಗಳ ಬಗ್ಗೆ ತಿಳಿಯೋಣ...
ಮನೆಗೆ ಹಣವನ್ನು ಆಕರ್ಷಿಸುವ ಸಸ್ಯಗಳು: ವಾಸ್ತು ಶಾಸ್ತ್ರ ಮತ್ತು ಫೆಂಗ್ ಶೂಯಿಯಲ್ಲಿ ಹಣಕ್ಕಾಗಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಇವುಗಳ ಪ್ರಕಾರ, ಮನೆಯಲ್ಲಿ ಕೆಲವು ಸಸ್ಯಗಳನ್ನು ನೆಡುವುದು ಸಹ ಆರ್ಥಿಕ ವೃದ್ಧಿಗೆ ಸಹಾಯ ಮಾಡುತ್ತವೆ. ಅದರಲ್ಲೂ, ಕೆಲವು ಮಂಗಳಕರ ಸಸ್ಯಗಳು ಹಣವನ್ನು ಅಯಸ್ಕಾಂತದಂತೆ ಆಕರ್ಷಿಸುತ್ತವೆ ಎಂದು ಹೇಳಲಾಗಿದೆ. ಮನೆಯ ಬಾಲ್ಕನಿಯಲ್ಲಿ ಈ ಗಿಡಗಳನ್ನು ಇಡುವುದರಿಂದ ಮನೆಯಲ್ಲಿ ಹಣದ ಮಳೆಯೇ ಸುರಿಯಲಿದ್ದು ಶೀಘ್ರದಲ್ಲೇ ಅವರು ಶ್ರೀಮಂತರಾಗುತ್ತಾರೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲ, ಈ ಈ ಮಣಿ ಪ್ಲಾಂಟ್ಗಳು ಮನೆಯ ಸಂತೋಷ ಮತ್ತು ಸಮೃದ್ಧಿಗೆ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮನಿ ಪ್ಲಾಂಟ್: ವಾಸ್ತು ಶಾಸ್ತ್ರ ಮತ್ತು ಫೆಂಗ್ ಶೂಯಿಯಲ್ಲಿ ಮನಿ ಪ್ಲಾಂಟ್ ತುಂಬಾ ಮಂಗಳಕರವಾಗಿದೆ ಎಂದು ಹೇಳಲಾಗುತ್ತದೆ. ಮನಿ ಪ್ಲಾಂಟ್ ಅನ್ನು ಹಣ-ಸಮೃದ್ಧಿ ಸಸ್ಯ ಎಂದು ಪರಿಗಣಿಸಲಾಗಿದೆ. ಮನೆಯ ಬಾಲ್ಕನಿಯಲ್ಲಿ ಮನಿ ಪ್ಲಾಂಟ್ ನೆಡುವುದರಿಂದ ಹೆಚ್ಚಿನ ಪ್ರಯೋಜನಗಳು ಲಭ್ಯವಾಗಲಿವೆ ಎಂದು ಹೇಳಲಾಗುತ್ತದೆ. ಮನಿ ಪ್ಲಾಂಟ್ ನೆಡಲು ಸರಿಯಾದ ದಿಕ್ಕು ಉತ್ತರ ದಿಕ್ಕು, ಆದರೆ, ಎಂದಿಗೂ ಸಹ ಅಪ್ಪಿತಪ್ಪಿಯೂ ದಕ್ಷಿಣ ದಿಕ್ಕಿನಲ್ಲಿ ಅದನ್ನು ನೆಡಬೇಡಿ. ಅದರ ಬಳ್ಳಿ ಯಾವಾಗಲೂ ಕೆಳಗಿನಿಂದ ಮೇಲಕ್ಕೆ ಹೋಗಬೇಕು.
ತುಳಸಿ ಗಿಡ: ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ಪೂಜ್ಯ ಸಸ್ಯವೆಂದು ಪರಿಗಣಿಸಲಾಗಿದೆ. ಇದರೊಂದಿಗೆ, ತುಳಸಿ ಸಸ್ಯವು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲ್ಪಟ್ಟಿರುವುದರಿಂದ ಯಾವ ಮನೆಯಲ್ಲಿ ತುಳಸಿಯನ್ನು ಭಕ್ತಿಯಿಂದ, ನಿಷ್ಠೆಯಿಂದ ಪೂಜಿಸುತ್ತಾರೋ ಅಂತಹ ಮನೆಯಲ್ಲಿ ಎಂದಿಗೂ ಕೂಡ ಬಡತನ ಎಂಬುದೇ ಇರುವುದಿಲ್ಲ ಎನ್ನಲಾಗುತ್ತದೆ. ತುಳಸಿಯ ಹಸಿರು ಸಸ್ಯವನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ನೆಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ.
ನೌಬಾಜಿಯಾ ಸಸ್ಯ: ವಾಸ್ತು ಶಾಸ್ತ್ರ ಮತ್ತು ಫೆಂಗ್ ಶೂಯಿಯಲ್ಲಿ ಬಾಲ್ಕನಿಯಲ್ಲಿ ನೌಬಾಜಿಯಾ ಗಿಡವನ್ನು ನೆಡುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ನೋಡಲು ತುಂಬಾ ಸುಂದರವಾಗಿದೆ ಮತ್ತು ಹಣ ಬರಲು ಹೊಸ ಮಾರ್ಗಗಳನ್ನು ಸೃಷ್ಟಿಸುತ್ತದೆ. ಯಾವ ಮನೆಯಲ್ಲಿ ಈ ಸಸ್ಯವನ್ನು ನೆಡಲಾಗಿದೆಯೋ ಅಂತಹ ಮನೆಯಲ್ಲಿ ಸರ್ವತೋಮುಖ ಅಭಿವೃದ್ಧಿ ಆಗುತ್ತದೆ ಎಂದು ಹೇಳಲಾಗುತ್ತದೆ.
ಅರೆಕಾ ಪಾಮ್ ಟ್ರೀ: ಅರೆಕಾ ಪಾಮ್ ಟ್ರೀ ಅಂದರೆ ತಾಳೆ ಮರವನ್ನು ವಾಸ್ತು ಶಾಸ್ತ್ರದಲ್ಲಿ ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ನೋಡಲು ಸುಂದರವಾಗಿರುತ್ತದೆ ಮತ್ತು ಮನೆಯಲ್ಲಿ ಸಂತೋಷ, ಹಣ ಮತ್ತು ಅದೃಷ್ಟವನ್ನು ತರುತ್ತದೆ. ಇದಲ್ಲದೇ ಮನೆಯವರ ಆರೋಗ್ಯವೂ ಉತ್ತಮವಾಗಿರುತ್ತದೆ. ಇದು ಮನೆಯಲ್ಲಿ ನಕಾರಾತ್ಮಕತೆಯನ್ನು ತೊಡೆದುಹಾಕುವ ಮೂಲಕ ಧನಾತ್ಮಕತೆಯನ್ನು ತರುತ್ತದೆ.
ಕ್ರಾಸ್ಸುಲಾ ಸಸ್ಯವು ಮನೆಯಲ್ಲಿ ಮ್ಯಾಗ್ನೆಟ್ನಂತೆ ಹಣವನ್ನು ಆಕರ್ಷಿಸುತ್ತದೆ. ಬಾಲ್ಕನಿಯಲ್ಲಿ ಕ್ರಾಸ್ಸುಲಾ ಸಸ್ಯವನ್ನು ನೆಡುವುದರಿಂದ, ಆರ್ಥಿಕ ನಷ್ಟ ಕಡಿಮೆ ಆಗಿ ಮನೆಯಲ್ಲಿ ಹಣದ ಒಳಹರಿವು ವೇಗವಾಗಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ, ನೀವು ಶ್ರೀಮಂತರಾಗಲು ಬಯಸಿದರೆ ಮನೆಯಲ್ಲಿ ಕ್ರಾಸ್ಸುಲಾ ಗಿಡವನ್ನು ನೆಡುವುದು ತುಂಬಾ ಒಳ್ಳೆಯದು. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.