Mahashivaratri 2021 Date: ಹಿಂದೂ ಪಂಚಾಂಗದ ಅನುಸಾರ ಈ ಬಾರಿ ಮಾರ್ಚ್ 11, 2021 ರಂದು ಈ ಬಾರಿಯ ಮಹಾಶಿವರಾತ್ರಿಯ ಮಹಾಪರ್ವ ಆಚರಿಸಲಾಗುತ್ತಿದೆ. ಶಿವರಾತ್ರಿಯ ದಿನ ದೇವಾಧಿದೇವ ಮಹಾದೇವನಿಗೆ ಪೂಜೆ ಸಲ್ಲಿಸುವುದರಿಂದ ಗ್ರಹಗಳ ದೋಷ ನಿವಾರಣೆಯಾಗುತ್ತದೆ.
Mahashivaratri 2021: ಹಿಂದೂ ಧರ್ಮಶಾಸ್ತ್ರಗಳಲ್ಲಿ ಮಹಾಶಿವರಾತ್ರಿಗೆ ಪರ್ವಕ್ಕೆ ಭಾರಿ ಮಹತ್ವವಿದೆ. ಇಂದಿನ ದಿನ ದೇವಾಧಿದೇವ ಶಿವನಿಗೆ ಪೂಜೆ ಸಲ್ಲಿಸುವುದರಿಂದ ಸಕಲ ಮನೋಕಾಮನೆಗಳು ಪೂರ್ಣಗೊಳ್ಳುತ್ತವೆ. ಹಿಂದೂ ಪಂಚಾಂಗದ ಪ್ರಕಾರ ಈ ಬಾರಿ ಮಾರ್ಚ್ 11ರಂದು ಫಾಲ್ಗುಣ ಮಾಸ, ಕೃಷ್ಣಪಕ್ಷದ ತ್ರಯೋದಸಿ ತಿಥಿಯಂದು ಮಹಾಶಿವರಾತ್ರಿ (Mahashivaratri) ಉತ್ಸವ ಆಚರಿಸಲಾಗುತ್ತಿದೆ. ಮಹಾ ಶಿವರಾತ್ರಿಯ ಪೂಜೆಯ ವೇಳೆ ಪೂಜಾ ವಿಧಿಯ ವಿಶೇಷ ಗಮನಹರಿಸಬೇಕು. ಸಂಪೂರ್ಣ ವಿಧಿ-ವಿಧಾನಗಳ ಮೂಲಕ ವೃತ ಹಾಗೂ ಪೂಜೆ ಮಾಡುವುದರಿಂದ ಶಿವ ಪ್ರಸನ್ನನಾಗುತ್ತಾನೆ ಹಾಗೂ ತನ್ನ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎನ್ನಲಾಗುತ್ತದೆ.
ಇದನ್ನೂ ಓದಿ-Mahashivaratri : ಮಹಾಶಿವನ ಪೂಜೆಯಲ್ಲಿ ಈ ಐದು ವಸ್ತುಗಳನ್ನು ಯಾವತ್ತೂ ಬಳಸಬೇಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಬ್ರಹ್ಮಾಂಡದ ಸೃಷ್ಟಿಕರ್ತ ಶಿವ - ಶಿವನನ್ನು ಬ್ರಹ್ಮಾಂಡದ ಸೃಷ್ಟಿಕರ್ತ ಎಂದು ಕರೆಯಲಾಗುತ್ತದೆ. ಶಿವನು ಈ ಸಂಪೂರ್ಣ ಸೃಷ್ಟಿಯನ್ನು ಸ್ಥಾಪಿಸಿದ್ದಾನೆ ಎಂದು ವೇದ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಇದೇ ಕಾರಣದಿಂದ ಶಿವನನ್ನು ದೇವಾಧಿದೇವ ಶಿವ ಎಂದು ಕರೆಯಲಾಗುತ್ತದೆ. ಶಿವನನ್ನು ವಿನಾಶದ ದೇವರು ಎಂದೂ ಕರೆಯಲಾಗಿದೆ. ಶಿವನನ್ನು ಆದಿ ಎಂದೂ ಕರೆಯುತ್ತಾರೆ. ಜ್ಯೋತಿಷ್ಯದ ಆಧಾರ ಶಿವ ಎಂದುಪರಿಗಣಿಸಲಾಗುತ್ತದೆ. ಶಿವನನ್ನು ದೇವರು ಎಂದು ಪರಿಗಣಿಸಲಾಗುತ್ತದೆ. ಅತಿ ಶೀಘ್ರದಲ್ಲಿಯೇ ತನ್ನ ಭಕ್ತರಿಗೆ ಒಲೆಯುವ ದೇವನಾದ ಕಾರಣ ಅವನನ್ನು ಭೋಲೆನಾಥ್ ಎಂದೂ ಕೂಡ ಕರೆಯುತ್ತಾರೆ. ಶಿವನು ಎಂದಿಗೂ ತನ್ನ ಭಕ್ತರನ್ನು ನಿರಾಶೆಗೊಳಿಸುವುದಿಲ್ಲ ಮತ್ತು ತನ್ನ ನಿರಂತರ ಆಶೀರ್ವಾದವನ್ನು ಭಕ್ತರ ಮೇಲಿಡುತ್ತಾನೆ ಎನ್ನಲಾಗುತ್ತದೆ.
2. ಶಿವನ ಉಪಾಸನೆಯಿಂದ (Shiv Puja) ಗ್ರಹಗಳ ದೋಷ ನಿವಾರಣೆಯಾಗುತ್ತದೆ - ಶಿವನನ್ನು ಜೋತಿಷ್ಯದ ಆಧಾರ ಎಂದು ಧರ್ಮಶಾಸ್ತ್ರಗಳಲ್ಲಿ ಪರಿಗಣಿಸಲಾಗಿದೆ. ದೇವಾಧಿ ದೇವ ಮಹಾದೇವನಿಗೆ ಪೂಜೆ ಸಲ್ಲಿಸುವುದರಿಂದ ಗ್ರಹಗಳ ದೋಷ ಪರಿಹಾರವಾಗುತ್ತದೆ ಎಂದು ಧರ್ಮಶಾಸ್ತ್ರಗಳಲ್ಲಿ ಹೇಳಲಾಗಿದೆ. ಜನ್ಮಜಾತಕದಲ್ಲಿ ಉಂಟಾಗುವ ಕಾಲಸರ್ಪ ದೋಷ, ಅಂಗಾರಕ ಯೋಗದ ದೋಷಗಳೂ ಕೂಡ ಶಿವನಿಗೆ ಪೂಜೆ ಸಲ್ಲಿಸುವುದರಿಂದ ದೂರಾಗುತ್ತವೆ. ಪ್ರಸ್ತುತ ವೃಷಭ ರಾಶಿಯಲ್ಲಿ ಮಂಗಳ ಹಾಗೂ ರಾಹು ಗ್ರಹಗಳ ಯುತಿಯಿಂದ ಅಂಗಾರಕ ಯೋಗ ಸೃಷ್ಟಿಯಾಗುತ್ತಿದೆ. ಅಶುಭ ಯೋಗಗಳ ಪ್ರಭಾವವನ್ನು ಶಿವನ ಪೂಜೆಯಿಂದ ದೂರಗೊಳಿಸಬಹುದು.
3. ಶಿವನ ಪೂಜೆಯಿಂದ ಮಂಗಳ ಗ್ರಹ ಶಾಂತಿ ಸಂಭವ (ShivPuja Shiva Removes Inauspiciousness Of Mars) - ಶಂಭೋಲಿಂಗನ ಪೂಜೆಯಿಂದ ಮಂಗಳಗ್ರಹದ ಶಾಂತಿ ಮಾಡಿದಂತಾಗುತ್ತದೆ. ಯಾರ ಜನ್ಮಜಾತಕದಲ್ಲಿ ಮಂಗಳ (Mangal) ಅಶುಭನಾಗಿದ್ದರೆ ಅಥವಾ ಮಂಗಳ ಹಾಗೂ ಅಶುಭ ಗ್ರಹಗಳ ಮಿಲನದಿಂದ ದೋಷ ನಿರ್ಮಾಣವಾಗುತ್ತಿದ್ದರೆ, ಅವರು ಶಿವನಿಗೆ ಪೂಜೆ ಸಲ್ಲಿಸಿದರೆ ಅವರಿಗೆ ಲಾಭ ಸಿಗಲಿದೆ.
4. ಈ ಮಂತ್ರ ಜಪಿಸಿ - ಯಾರೊಬ್ಬರ ಕುಂಡಲಿಯಲ್ಲಿ ಮಂಗಳ ಅಶುಭನಾಗಿದ್ದರೆ, ಆ ವ್ಯಕ್ತಿ ಕೋಪಿಸಿಕೊಳ್ಳುವುದು ಜಾಸ್ತಿ. ಇದರಿಂದ ಆ ವ್ಯಕ್ತಿ ಗಂಭೀರ ಸಮಸ್ಯೆಗಳಿಗೆ ಗುರಿಯಾಗುತ್ತಾನೆ. ಅಂಗಾರಕ ಯೋಗ ನಿರ್ಮಾಣಗೊಳ್ಳುವ ಕಾರಣ ಅವರು ಹಲವು ಸಂಕಷ್ಟಗಳನ್ನು ಎಳೆದುಕೊಳ್ಳುತ್ತಾರೆ. ಈ ಸ್ಥಿತಿಯಿಂದ ಪಾರಾಗಲು ಓಂ ಅಂ ಅಂಗಾರಕಾಯನಮಃ ಮಂತ್ರವನ್ನು ಪಠಿಸಬೇಕು.