March 31 Deadline: March 31 ರೊಳಗೆ ಈ 5 ಕೆಲಸ ಪೂರ್ಣಗೊಳಿಸಿ, ಇಲ್ಲದಿದ್ದರೆ ಬೀಳುತ್ತೆ ಭಾರಿ ಪೆನಾಲ್ಟಿ

March 31 Deadline: 2020-21ನೆ ಆರ್ಥಿಕ ವರ್ಷ ಮುಕ್ತಾಯಗೊಳ್ಳಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಇಂತಹುದರಲ್ಲಿ ಹಲವು ಕೆಲಸಗಳನ್ನು ಪೂರ್ಣಗೊಳಿಸಲು ಮಾರ್ಚ್ 31 ಡೆಡ್ ಲೈನ್ ನಿಗದಿಪಡಿಸಲಾಗಿದೆ. ಒಂದು ವೇಳೆ ನಿಗದಿತ ಗಡವಿಗೂ ಮೊದಲು ಈ ಕಾರ್ಯಗಳನ್ನು ಪೂರ್ಣ ಗೊಳಿಸದೆ ಹೋದಲ್ಲಿ ನಿಮಗೆ ಭಾರಿ ಪೆನಾಲ್ಟಿ ಬೀಳುವ ಸಾಧ್ಯತೆ ಇದೆ. 

ನವದೆಹಲಿ: March 31 Deadline: - 2020-21ನೆ ಆರ್ಥಿಕ ವರ್ಷ ಮುಕ್ತಾಯಗೊಳ್ಳಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಇಂತಹುದರಲ್ಲಿ ಹಲವು ಕೆಲಸಗಳನ್ನು ಪೂರ್ಣಗೊಳಿಸಲು ಮಾರ್ಚ್ 31 ಡೆಡ್ ಲೈನ್ ನಿಗದಿಪಡಿಸಲಾಗಿದೆ. ಒಂದು ವೇಳೆ ನಿಗದಿತ ಗಡವಿಗೂ ಮೊದಲು ಈ ಕಾರ್ಯಗಳನ್ನು ಪೂರ್ಣ ಗೊಳಿಸದೆ ಹೋದಲ್ಲಿ ನಿಮಗೆ ಭಾರಿ ಪೆನಾಲ್ಟಿ ಬೀಳುವ ಸಾಧ್ಯತೆ ಇದೆ. 

 

ಇದನ್ನೂ ಓದಿ-7th pay commission : ಸದ್ಯದಲ್ಲೇ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ .! ಹೊರಬೀಳಲಿದೆ ಬಹುನಿರೀಕ್ಷಿತ ಡಿಎ ಆದೇಶ

 

ತೆರಿಗೆಗೆ ಸಂಬಂಧಿಸಿದ ಕೆಲವು ಕೆಲಸಗಳನ್ನು ಪೂರ್ಣಗೊಳಿಸಲು ಮಾರ್ಚ್ 31 ಕೊನೆಯ ದಿನಾಂಕವಾಗಿದೆ. ಮಾರ್ಚ್ 31 ರ ಈ ಡೆಡ್ ಲೈನ್ ನೀವು ತಪ್ಪಿಸಿಕೊಂಡರೆ, ಮುಂದಿನ ವರ್ಷ ಪರಿಷ್ಕೃತ ಅಥವಾ ತಡವಾಗಿ ಆದಾಯ ತೆರಿಗೆ ಸಲ್ಲಿಸಲು ನಿಮಗೆ ಅವಕಾಶ ಸಿಗುವುದಿಲ್ಲ. ಗಮನಿಸಬೇಕಾದ ಸಂಗತಿಯೆಂದರೆ ಮಾರ್ಚ್ 31 ರವರೆಗೆ ನೀವು ತಡವಾಗಿ ಅಥವಾ ಪರಿಷ್ಕೃತ ಆದಾಯವನ್ನು ಭರ್ತಿ ಮಾಡಬಹುದು, ಆದರೆ ಇದಕ್ಕಾಗಿ ನೀವು 10 ಸಾವಿರ ರೂಪಾಯಿಗಳನ್ನು ದಂಡವಾಗಿ ಪಾವತಿಸಬೇಕು. ಹಾಗಾದರೆ ಬನ್ನಿ ಮಾರ್ಚ್ 31ರೊಳಗೆ ಯಾವ ಯಾವ ಕೆಲಸಗಳನ್ನು ನಾವು ಪೂರ್ಣಗೊಳಿಸಬೇಕು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಫೈಲಿಂಗ್ ಬಿಲೆಟೆಡ್ (Filing Belated) - ಮಾರ್ಚ್ 31 2020-21ರ ಆರ್ಥಿಕ ವರ್ಷದ ಕೊನೆಯ ದಿನ. ಆದ್ದರಿಂದ, ಇದು 19-20ರ ಆರ್ಥಿಕ ವರ್ಷದ ಪರಿಷ್ಕೃತ ಅಥವಾ ತಡವಾದ ಆದಾಯ ತೆರಿಗೆ ಕಡತದ ಕೊನೆಯ ದಿನಾಂಕವಾಗಿರುತ್ತದೆ. ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲು ಮೂಲ ಗಡುವು ಮುಗಿದ ನಂತರ ಬಿಲೆಟೆಡ್ ರಿಟರ್ನ್ ಸಲ್ಲಿಸಲಾಗುತ್ತದೆ. ಇದಕ್ಕಾಗಿ ತೆರಿಗೆ ಪಾವತಿದಾರನು ದಂಡ ಪಾವತಿಸಬೇಕಾಗುತ್ತದೆ. ಬಿಲೇಟೆಡ್ ಐಟಿಆರ್ 10000 ರೂ. ಲೇಟ್ ಫೈಲಿಂಗ್ ಶುಲ್ಕದೊಂದಿಗೆ ಸಲ್ಲಿಕೆ ಮಾಡಲು ಮಾರ್ಚ್ 31 ಕೊನೆಯ ದಿನವಾಗಿದೆ.

2 /5

2. ರಿವೈಸಡ್ ರಿಟರ್ನ್ (Revised Return Filing) - ಮೂಲ ಆದಾಯ ತೆರಿಗೆ ರಿಟರ್ನ್ ಪಾವತಿಸುವ ಸಂದರ್ಭದಲ್ಲಿ ಆದಾಯ ತೆರಿಗೆ ಪಾವತಿದಾರರು ಯಾವುದೇ ತಪ್ಪು ಮಾಡಿದ್ದರೆ, ತಿದ್ದುಪಡಿ ಮಾಡುವ ಮೂಲಕ ಅವರು ಮತ್ತೊಮ್ಮೆ ಅದನ್ನು ಸಲಿಸಬಹುದು, ಡಿಡಕ್ಶನ್ ಕ್ಲೇಮ್ ಮರೆಮರೆತುಹೋಗುವುದ, ಆದಾಯ ಅಥವಾ ಬ್ಯಾಂಕ್ ಇತ್ಯಾದಿಗಳ ವರದಿ ಸಲ್ಲಿಸದಿರುವಂತಹ ತಪ್ಪುಗಳು ಇದರಲ್ಲಿ ಶಾಮೀಲಾಗಿವೆ. ಒಂದು ವೇಳೆ ನೀವೂ ಕೂಡ ನಿಮ್ಮ ITR ಪಾವತಿಸಿದ್ದು ಮತ್ತು ಅದರಲ್ಲಿ ಬದಲಾವಣೆ ಬಯಸುತ್ತಿದ್ದರೆ ನೀವೂ ಕೂಡ ಮಾರ್ಚ್ 31 ರೊಳಗೆ ತಿದ್ದುಪಡಿ ಮಾಡಿದ ITR ದಾಖಲಿಸಬಹುದು.

3 /5

3. ಆಧಾರ್ ಹಾಗೂ ಪ್ಯಾನ್ ಜೋಡಣೆ (Aadhaar-PAN Linking) - ಒಂದು ವೇಳೆ ನೀವೂ ಕೂಡ ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡಿರದಿದ್ದರೆ, ಅದಕ್ಕಾಗಿ ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ನಿಮ್ಮ ಆಧಾರ್ - ಪ್ಯಾನ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಇದರೊಂದಿಗೆ, ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ ಆಧಾರ್ ಸಂಖ್ಯೆಯನ್ನು ಪ್ಯಾನ್‌ನೊಂದಿಗೆ ಒದಗಿಸುವುದು ಸಹ ಆಟತ್ಯವಾಗಿದೆ. ಪ್ಯಾನ್ ಅನ್ನು ಆಧಾರ್‌ಗೆ ಜೋಡಿಸಲು ಈ ಮೊದಲು ಸರ್ಕಾರ ಜೂನ್ 30 , 2020 ರವರೆಗೆ ನೀಡಿದ್ದ ಗಡುವನ್ನು  ಮಾರ್ಚ್ 31, 2021 ರವರೆಗೆ ವಿಸ್ತರಿಸಿದೆ. ಇದನ್ನೂ ಒಂದು ವೇಳೆ ನೀವು ಮಾಡದೆ ಹೋದಲ್ಲಿ ನಿಮಗೆ ದಂಡ ಬೀಳಲಿದೆ ಹಾಗೂ ಏಪ್ರಿಲ್ 1, 2021 ರ ಬಳಿಕ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯಗೊಳ್ಳಲಿದೆ.

4 /5

4. ಅಡ್ವಾನ್ಸ್ಡ್ ತೆರಿಗೆ ಪಾವತಿಸುವುದು (Advanced Tax Filing) -  ಆದಾಯ ತೆರಿಗೆ ನಿಮಯಗಳ ಪ್ರಕಾರ ಯಾವುದೇ ಓರ್ವ ವ್ಯಕ್ತಿಯ ತೆರಿಗೆ ಪಾವತಿ ವರ್ಷದಲ್ಲಿ 10 ಸಾವಿರ ಮೀರಿದರೆ, ಅವರು ಅದನ್ನು ಒಟ್ಟು ನಾಲ್ಕು ಕಂತುಗಳಲ್ಲಿ ಅಂದರೆ 15 ಜುಲೈ, 15 ಸೆಪ್ಟೆಂಬರ್, 15 ಡಿಸೆಂಬರ್ ಹಾಗೂ 15 ಮಾರ್ಚ್ ಗೂ ಮೊದಲು ಮುಂಗಡವಾಗಿ ನಾಲ್ಕು ಕಂತುಗಳಲ್ಲಿ ಪಾವತಿಸಬೇಕು. ಅಡ್ವಾನ್ಸ್ಡ್ ತೆರಿಗೆ ಪಾವತಿ ಮಾಡದೆ ಹೋದ ಸಂದರ್ಭದಲ್ಲಿ ನಿಮಗೆ ಪೆನಾಲ್ಟಿ ಬೀಳಲಿದೆ. ಈ ರೀತಿ ಮಾರ್ಚ್ 15ರವರೆಗಿನ ನಾಲ್ಕನೇ ಕಂತನ್ನು ಪಾವತಿಸಬೇಕು.

5 /5

5. ವಿವಾದದಿಂದ ವಿಶ್ವಾಸ ಯೋಜನೆ (Vivad Se Vishvas Deadline) - 'ವಿವಾದದಿಂದ ವಿಶ್ವಾಸ' ಯೋಜನೆಯ ಅಡಿ ಡಿಕ್ಲೆರೇಷನ್ ಫೈಲ್ ಮಾಡುವ ಅಂತಿಮ ಗಡುವನ್ನು ಮಾರ್ಚ್ 31ರವರೆಗೆ ವಿಸ್ತರಿಸಲಾಗಿತ್ತು. ನೇರ ತೆರಿಗೆ 'ವಿವಾದದಿಂದ ವಿಶ್ವಾಸ' ಕಾನೂನು 17 ಮಾರ್ಚ್ 2020 ರಂದು ಜಾರಿಗೆ ಬಂದಿತ್ತು. ನೆನೆಗುದಿಗೆ ಬಿದ್ದ ತೆರಿಗೆ ವಿವಾದಗಳನ್ನು ಪರಿಹರಿಸುವುದು ಇದರ ಪ್ರಮುಖ ಉದ್ದೇಶವಾಗಿತ್ತು. ದೇಶಾದ್ಯಂತ ಇರುವ ನ್ಯಾಯಾಲಯಗಳಲ್ಲಿ ಸುಮಾರು 9.32 ಲಕ್ಷ ಕೋಟಿ ರೂ.ಗಳ ಸುಮಾರು 4.83 ಲಕ್ಷ ನೇರ ತೆರಿಗೆ ಪ್ರಕರಣಗಳಿವೆ. ಈ ಯೋಜನೆಯ ಅಡಿ ತೆರಿಗೆ ಪಾವತಿದಾರರು ಕೇವಲ ವಿವಾದಿತ ತೆರಿಗೆ ರಾಶಿಯನ್ನು ಮಾತ್ರ ಪಾವತಿಸಬೇಕು. ಆ ರಾಶಿಯ ಬಡ್ಡಿ ಹಾಗೂ ಪೆನಾಲ್ಟಿಯಿಂದ ಅವರಿಗೆ ಮುಕ್ತಿ ನೀಡಲಾಗುವುದು ಈಗಾಗಲೇ ಸ್ಪಷ್ಟಪಡಿಸಲಾಗಿದೆ.

You May Like

Sponsored by Taboola