Mercury Transit 2024: ಸಿಂಹದಲ್ಲಿ ಬುಧನ ಸಂಚಾರದಿಂದ ಈ ರಾಶಿಯವರಿಗೆ ಅದೃಷ್ಟದ ಜಾಕ್‌ಪಾಟ್‌!

Mercury Transit 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜಕುಮಾರನೆಂದು ಕರೆಯಲ್ಪಡುವ ಬುಧ ಮುಂದಿನ ತಿಂಗಳು ಸಿಂಹ ರಾಶಿಗೆ ಚಲಿಸುತ್ತದೆ. ಸಿಂಹ ರಾಶಿಯ ಅಧಿಪತಿ ಬುಧ ಆಗಿದೆ. ಆದ್ದರಿಂದ ಈ ಬದಲಾವಣೆಯು ಉತ್ತಮ ಫಲಿತಾಂಶಗಳನ್ನು ತರುತ್ತದೆ.

Mercury Transit 2024: ಕೆಲ ಗ್ರಹಗಳು ಪರಸ್ಪರ ಸ್ನೇಹ ಗ್ರಹಗಳಾಗಿದ್ದರೆ, ಇನ್ನೂ ಕೆಲವು ಶತ್ರು ಗ್ರಹಗಳಾಗಿರುತ್ತವೆ. ಈ ಗ್ರಹಗಳು ಪ್ರತಿಯೊಂದು ರಾಶಿಯನ್ನು ಆಳುತ್ತವೆ. ಒಂದು ಗ್ರಹವು ತನಗೆ ಹೊಂದಿಕೆಯಾಗುವ ಇನ್ನೊಂದು ಗ್ರಹದ ರಾಶಿಯಲ್ಲಿದ್ದಾಗ, ಉತ್ತಮ ಫಲಿತಾಂಶ ನಿಡುತ್ತದೆ. ಆದರೆ ಅದು ಹೊಂದಾಣಿಕೆಯಾಗದ ಗ್ರಹದಲ್ಲಿದ್ದಾಗ ಪ್ರತಿಕೂಲ ಫಲಿತಾಂಶಗಳನ್ನುಂಟು ಮಾಡುತ್ತದೆ. ಇದರ ಪರಿಣಾಮಗಳು ಆಯಾ ರಾಶಿಗಳಲ್ಲಿ ಹುಟ್ಟಿದವರ ಮೇಲೂ ಬೀರುತ್ತವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /4

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜಕುಮಾರನೆಂದು ಕರೆಯಲ್ಪಡುವ ಬುಧ ಮುಂದಿನ ತಿಂಗಳು ಸಿಂಹ ರಾಶಿಗೆ ಚಲಿಸುತ್ತದೆ. ಸಿಂಹ ರಾಶಿಯ ಅಧಿಪತಿ ಬುಧ ಆಗಿದೆ. ಆದ್ದರಿಂದ ಈ ಬದಲಾವಣೆಯು ಉತ್ತಮ ಫಲಿತಾಂಶಗಳನ್ನು ತರುತ್ತದೆ. ನಿರ್ದಿಷ್ಟವಾಗಿ ಮೂರು ರಾಶಿಗಳು ಈ ರಾಶಿಯ ಬದಲಾವಣೆಯಿಂದ ಉತ್ತಮ ಪ್ರಯೋಜನಗಳನ್ನು ಪಡೆಯುತ್ತವೆ. ಆ ರಾಶಿಗಳು ಯಾವುವು ಎಂಬುದರ ಬಗ್ಗೆ ತಿಳಿಯಿರಿ. 

2 /4

ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಬುಧ ಸಂಕ್ರಮಣವು ಅನುಕೂಲಕರವಾಗಿರುತ್ತದೆ. ಸಿಂಹ ರಾಶಿ ಅದರ ಲಗ್ನ ಭಾವದಲ್ಲಿ ಈ ರಾಶಿ ಬದಲಾವಣೆ ಉಂಟಾಗಲಿದೆ. ಹೀಗಾಗಿ ಈ ಅವಧಿಯಲ್ಲಿ ಈ ರಾಶಿಯವರ ಬಗ್ಗೆ ಮೆಚ್ಚುಗೆ ಬಹಳ ಹೆಚ್ಚಾಗುತ್ತದೆ. ಇದರೊಂದಿಗೆ ಸಮಾಜದಲ್ಲಿ ಮನ್ನಣೆ ಮತ್ತು ಸ್ಥಾನಮಾನ ಹೆಚ್ಚಾಗಲಿದೆ. ವಿಶೇಷವಾಗಿ ವಿದ್ಯಾರ್ಥಿಗಳು ಈ ಸಂಚಾರದಿಂದ ವಿಶೇಷ ಪ್ರಯೋಜನ ಪಡೆಯುತ್ತಾರೆ. ಇದಲ್ಲದೆ ದೈನಂದಿನ ಆದಾಯ ಹೆಚ್ಚುತ್ತದೆ. ಹೊಸ ಜನರೊಂದಿಗೆ ಸಂಪರ್ಕ ಸಾಧಿಸುವಿರಿ. ಭವಿಷ್ಯದಲ್ಲಿ ಇದು ಉಪಯುಕ್ತವಾಗಿರುತ್ತದೆ. ವಿವಾಹಿತರು ಸಹ ಸಂತೋಷದ ವೈವಾಹಿಕ ಜೀವನ ನಡೆಸುತ್ತಾರೆ. ಜಂಟಿ ಉದ್ಯಮಗಳನ್ನು ಮಾಡುವವರಿಗೂ ಲಾಭ ಸಿಗಲಿದೆ.

3 /4

ತುಲಾ ರಾಶಿಯವರಿಗೆ ಬುಧ ಸಂಚಾರ ಅನುಕೂಲಕರವಾಗಿರುತ್ತದೆ. ಇದು ಈ ತುಲಾ ರಾಶಿಯ ಆದಾಯಕ್ಕೆ ಸಂಬಂಧಿಸಿದೆ. ಹೀಗಾಗಿ ಈ ಸಮಯದಲ್ಲಿ ಆದಾಯವು ಹೆಚ್ಚಾಗುತ್ತದೆ. ಈ ಸಮಯ ಹೂಡಿಕೆಗೆ ತುಂಬಾ ಅನುಕೂಲಕರ. ಈ ಸಮಯದಲ್ಲಿ ಮಾಡಿದ ಹೂಡಿಕೆಯು ಭವಿಷ್ಯದಲ್ಲಿ ಲಾಭದಾಯಕವಾಗಿರುತ್ತದೆ. ಬುಧ ಸಂಕ್ರಮಣದಿಂದ ವ್ಯಾಪಾರಸ್ಥರು ತಮ್ಮ ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸುವ ಅದೃಷ್ಟ ಹೊಂದುತ್ತಾರೆ. ಮಗುವಿನ ಜನನಕ್ಕೆ ಸಂಬಂಧಿಸಿದ ಒಳ್ಳೆಯ ಸುದ್ದಿ ಕೇಳಬಹುದು. ಈ ಸಮಯದಲ್ಲಿ ನೀವು ಷೇರು ಹೂಡಿಕೆ ಮತ್ತು ಲಾಟರಿಯಂತಹ ಅನಿರೀಕ್ಷಿತ ಆರ್ಥಿಕ ಲಾಭ ಪಡೆಯಬಹುದು. 

4 /4

ಧನು ರಾಶಿಯಲ್ಲಿ ಜನಿಸಿದವರಿಗೆ ಬುಧ ಸಂಕ್ರಮಣವು ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ಧನು ರಾಶಿಯವರಿಗೆ ಒಳ್ಳೆಯ ಸಮಯ ಪ್ರಾರಂಭವಾಗಲಿದೆ. ಎಲ್ಲದರಲ್ಲೂ ಅದೃಷ್ಟವಿರುತ್ತದೆ. ಈ ಅವಧಿಯು ವ್ಯಾಪಾರಸ್ಥರಿಗೆ ತುಂಬಾ ಅನುಕೂಲಕರವಾಗಿರುತ್ತದೆ. ವ್ಯಾಪಾರದಲ್ಲಿ ಲಾಭ ಪಡೆಯುವಿರಿ. ಅಧಿಕಾರಿಗಳು ಹೊಸ ಜವಾಬ್ದಾರಿ & ಕೆಲಸದಲ್ಲಿ ಹೊಸ ಅವಕಾಶ ಪಡೆಯುತ್ತಾರೆ. ಸ್ಥಗಿತಗೊಂಡ ಕಾರ್ಯಗಳನ್ನು ಪುನರಾರಂಭಿಸಬಹುದು. ಮನೆಯಲ್ಲಿ ಶುಭ ಕಾರ್ಯಕ್ರಮಗಳು ನಡೆಯುವ ಸಾಧ್ಯತೆಯಿದೆ.