Mercury Transit 2024: ಸಿಂಹ ರಾಶಿಯಲ್ಲಿ ಬುಧನ ಸಂಚಾರದಿಂದ 3 ಈ ರಾಶಿಗೆ ಸಿಗಲಿದೆ ಸುಖ-ಸಂಪತ್ತು!

Mercury Transit 2024: ಈ ಬುಧ ಸಂಕ್ರಮಣದಿಂದ 3 ರಾಶಿಯವರಿಗೆ ಇದು ತುಂಬಾ ಅದ್ಭುತ ಸಮಯವಾಗಿದೆ. ಈ ಮೂರು ರಾಶಿಯವರಿಗೆ ಅದೃಷ್ಟದ ಬೆಂಬಲ ದೊರೆಯಲಿದ್ದು, ಸುಖ-ಸಂಪತ್ತು ದೊರೆಯಲಿದೆ. ನೀವು ವ್ಯಾಪಾರ ಮತ್ತು ವ್ಯವಹಾರದಲ್ಲಿ ಉತ್ತಮ ಲಾಭ ಪಡೆಯುತ್ತೀರಿ. 

Mercury Transit 2024: ಗ್ರಹಗಳು ಕಾಲ ಕಾಲಕ್ಕೆ ರಾಶಿಗಳನ್ನು ಬದಲಾಯಿಸುತ್ತವೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡಿದಾಗ ಎಲ್ಲಾ ರಾಶಿಗಳ ಮೇಲೆ ಅದರ ಪರಿಣಾಮ ಉಂಟಾಗಲಿದೆ. ವೈದಿಕ ಜ್ಯೋತಿಷ್ಯದಲ್ಲಿ ಬುಧ ಗ್ರಹವನ್ನು ಬುದ್ಧಿವಂತಿಕೆ, ಅಧ್ಯಯನ, ಮಾತು, ವ್ಯವಹಾರದ ಅಂಶವೆಂದು ಪರಿಗಣಿಸಲಾಗಿದೆ. ಬುಧ ಗ್ರಹವನ್ನು ಕಡಿಮೆ ದಿನಗಳಲ್ಲಿ ರಾಶಿ ಬದಲಾವಣೆ ಮಾಡುತ್ತದೆ. ಬುಧ ಗ್ರಹವು ಮಿಥುನ & ಕನ್ಯಾ ರಾಶಿಯ ಅಧಿಪತಿಯಾಗಿದೆ. ಪ್ರತಿಬಾರಿ ಬುಧ ಒಂದು ರಾಶಿಯಲ್ಲಿ ಸಂಚರಿಸಿದಾಗ ಅದರ ಪ್ರಭಾವ ಎಲ್ಲಾ ಜನರ ಜೀವನದ ಮೇಲೆ ಗೋಚರಿಸುತ್ತದೆ. ಅದರಂತೆ ಬುಧನು ಪ್ರಸ್ತುತ ಕರ್ಕಾಟಕದಲ್ಲಿ ಸಂಚರಿಸುತ್ತಿದ್ದಾನೆ. ಜುಲೈ 19ರಂದು ಬುಧ ಗ್ರಹ ಸಿಂಹ ರಾಶಿಗೆ ಹೋಗಲಿದೆ. ಸಿಂಹ ರಾಶಿಯ ಅಧಿಪತಿ ಸೂರ್ಯ ಆಗಿದ್ದು, ಈ ಸೂರ್ಯ & ಬುಧ ಸೌಹಾರ್ದ ಸಂಬಂಧದಲ್ಲಿರುವುದರಿಂದ, ಎಲ್ಲಾ ರಾಶಿಗಳ ಮೇಲೆ ಈ ಸಂಕ್ರಮಣದ ಪ್ರಭಾವವು ಕಂಡುಬರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /4

ಈ ಬುಧ ಸಂಕ್ರಮಣದಿಂದ 3 ರಾಶಿಯವರಿಗೆ ಇದು ತುಂಬಾ ಅದ್ಭುತ ಸಮಯವಾಗಿದೆ. ಈ ಮೂರು ರಾಶಿಯವರಿಗೆ ಅದೃಷ್ಟದ ಬೆಂಬಲ ದೊರೆಯಲಿದ್ದು, ಸುಖ-ಸಂಪತ್ತು ದೊರೆಯಲಿದೆ. ನೀವು ವ್ಯಾಪಾರ ಮತ್ತು ವ್ಯವಹಾರದಲ್ಲಿ ಉತ್ತಮ ಲಾಭ ಪಡೆಯುತ್ತೀರಿ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಮೇಲುಗೈ ಸಾಧಿಸುತ್ತಾರೆ. ಮಾತುಕತೆಯಿಂದ ಅನೇಕ ಕೆಲಸಗಳು ಆಗಲಿವೆ. ಬುಧ ಗ್ರಹವು ಸಿಂಹರಾಶಿಗೆ ಹೋಗುವುದರಿಂದ ಯಾವ ರಾಶಿಯವರಿಗೆ ಈ ಸಮಯ ಉತ್ತಮವೆಂದು ತಿಳಿಯಿರಿ...

2 /4

ಬುಧನು ಸಿಂಹ ರಾಶಿಯ ಮೊದಲ ಮನೆಯಲ್ಲಿ ಸಂಚರಿಸುತ್ತಿದ್ದಾನೆ. ಇದರಿಂದ ಈ ರಾಶಿಯವರು ಅನೇಕ ಪ್ರಯೋಜನ ಪಡೆಯುತ್ತವೆ. ಕುಟುಂಬ ಸದಸ್ಯರಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗಲಿದೆ. ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ನಿಮ್ಮ ಕೆಲಸವು ಮೆಚ್ಚುಗೆ ಪಡೆಯುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಅಂದುಕೊಂಡ ಉದ್ಯೋಗ ದೊರೆಯಲಿದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯಲಿದ್ದು, ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯುವ ಸಾಧ್ಯತೆಯಿದೆ. ವಿದೇಶಿ ವ್ಯಾಪಾರ ಮಾಡುವವರು ಉತ್ತಮ ಲಾಭ ಪಡೆಯುತ್ತಾರೆ. ನಿಮ್ಮ ಹಣಕಾಸಿನ ಸ್ಥಿತಿ ಬಲವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಆಹ್ಲಾದಕರ ಸಮಯ ಕಳೆಯುತ್ತೀರಿ. ನಿಮ್ಮ ಆರೋಗ್ಯವು ಚೆನ್ನಾಗಿರುತ್ತದೆ.

3 /4

ಬುಧನು ಧನು ರಾಶಿಯ 9ನೇ ಮನೆಗೆ ಚಲಿಸುತ್ತಾನೆ. ಹೀಗಾಗಿ ಈ ರಾಶಿಯವರು ಜೀವನ ಸಂಗಾತಿಯಿಂದ ಸಂಪೂರ್ಣ ಬೆಂಬಲ ಪಡೆಯುತ್ತಾರೆ. ಉದ್ಯೋಗಾಕಾಂಕ್ಷಿಗಳಿಗೆ ಒಳ್ಳೆಯ ಕೆಲಸ ಸಿಗಬಹುದು. ಉದ್ಯೋಗಿಗಳು ತಮ್ಮ ಕೆಲಸದಲ್ಲಿ ತೃಪ್ತರಾಗಿರುತ್ತಾರೆ. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ. ಜಂಟಿ ಉದ್ಯಮ ಮಾಡುವವರು ಉತ್ತಮ ಲಾಭ ಪಡೆಯುತ್ತಾರೆ. ನಿಮ್ಮ ಹಣಕಾಸಿನ ಸ್ಥಿತಿಗತಿಯು ತುಂಬಾ ಬಲವಾಗಿರುತ್ತದೆ. ನೀವು ಅನಿರೀಕ್ಷಿತ ಹಣದ ಲಾಭ ಪಡೆಯುತ್ತೀರಿ. ಅದೃಷ್ಟದ ಸಂಪೂರ್ಣ ಬೆಂಬಲದೊಂದಿಗೆ ಯಶಸ್ಸು & ಸಂಪತ್ತು ಹೆಚ್ಚಾಗುತ್ತದೆ. ನಿಮ್ಮ & ಕುಟುಂಬದ ಆರೋಗ್ಯವು ಚೆನ್ನಾಗಿರುತ್ತದೆ.

4 /4

ಬುಧನು ತುಲಾ ರಾಶಿಯ 11ನೇ ಮನೆಗೆ ಚಲಿಸುತ್ತಾನೆ. ಇದು ಈ ರಾಶಿಗಳ ಸ್ವಾಭಿಮಾನ & ಧೈರ್ಯವನ್ನು ಹೆಚ್ಚಿಸುತ್ತದೆ. ನಿಮ್ಮ ಬಹುಕಾಲದ ಆಸೆಗಳು ಈಡೇರುತ್ತವೆ. ವೃತ್ತಿಪರವಾಗಿ ನೀವು ದೊಡ್ಡ ನಿರ್ಧಾರ ತೆಗೆದುಕೊಳ್ಳುವಿರಿ. ಕೆಲಸದ ಸ್ಥಳದಲ್ಲಿ ಉನ್ನತ ಅಧಿಕಾರಿಗಳು ನಿಮ್ಮನ್ನು ಪ್ರಶಂಸಿಸುತ್ತಾರೆ. ನಿಮಗೆ ಕೆಲವು ಪ್ರಮುಖ ಜವಾಬ್ದಾರಿ ನೀಡಬಹುದು. ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ದೊರೆಯುತ್ತದೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ನೀವು ಬಹಳಷ್ಟು ಹಣ ಗಳಿಸಬಹುದು. ಸಂಗಾತಿಯೊಂದಿಗಿನ ನಿಮ್ಮ ಸಂಬಂಧ ಆಹ್ಲಾದಕರವಾಗಿರುತ್ತದೆ. ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.