how to darken white hair naturally : ಈ ಎಣ್ಣೆ ಕೂದಲಿನ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿ ಕಾರ್ಯ ನಿರ್ವಹಿಸುತ್ತದೆ. ಈ ಎಣ್ಣೆಯನ್ನು ಮನೆಯಲ್ಲಿಯೇ ತಯಾರಿಸಬಹುದು.
ಬೆಂಗಳೂರು : ಕೂದಲು ಉದುರುವುದು ಸೇರಿದಂತೆ ಕಿರಿಯ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವ ಸಮಸ್ಯೆಯನ್ನು ಇತ್ತೀಚಿನ ದಿನಗಳಲ್ಲಿ ಬಹುತೇಕರು ಎದುರಿಸುತ್ತಿದ್ದಾರೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಮನೆಯಲ್ಲಿಯೇ ತಯಾರಿಸುವ ಎಣ್ಣೆಯನ್ನು ಬಳಸಬಹುದು. ಈ ಎಣ್ಣೆ ಕೂದಲಿನ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿ ಕಾರ್ಯ ನಿರ್ವಹಿಸುತ್ತದೆ. ಈ ಎಣ್ಣೆಯನ್ನು ಮನೆಯಲ್ಲಿಯೇ ತಯಾರಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ವಿಶ್ವದ ಕೆಲವು ಭಾಗಗಳಲ್ಲಿ ಸಾರಭೂತ ತೈಲಗಳನ್ನು ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ.ಈ ಎಣ್ಣೆ ಕೂದಲು ಉದುರಿದ ಜಾಗದಲ್ಲಿ ಮತ್ತೆ ಕೂದಲು ಬೆಳೆಯಲು ಸಹಾಯ ಮಾಡುತ್ತದೆ.
ಪುದೀನಾ ಎಣ್ಣೆಯನ್ನು ಕೂದಲು ಉದುರುವಿಕೆಗೆ ಪರಿಹಾರವಾಗಿ ಬಳಸುತ್ತಾರೆ. ಪುದೀನಾ ಸಾರಭೂತ ತೈಲದಲ್ಲಿರುವ ಮೆಂಥಾಲ್ ವಾಸೋಡಿಲೇಟರ್ ಆಗಿರುವುದರಿಂದ ರಕ್ತದ ಹರಿವನ್ನು ಸುಧಾರಿಸುತ್ತದೆ.ಕೂದಲು ಕಿರುಚೀಲಗಳಿಗೆ ರಕ್ತದ ಹರಿವು ಹೆಚ್ಚಾಗುವುದರಿಂದ ಕೂದಲು ಉದುರುವುದು ತಡೆಯುತ್ತದೆ.
ನೇರ ನೆತ್ತಿಯ ಮೇಲೆ ಮಸಾಜ್ ಮಾಡುವ ಮೂಲಕ ಈ ಎಣ್ಣೆಯನ್ನು ಬಳಸಬಹುದು. ತೆಂಗಿನ ಎಣ್ಣೆಗೆ ಒಂದೆರಡು ಒಂದೆರಡು ಪುದೀನ ಎಣ್ಣೆಯನ್ನು ಸೇರಿಸಬೇಕು. ಹೀಗೆ ಎರಡು ಎಣ್ಣೆಯನ್ನು ಮಿಶ್ರಣ ಮಾಡಿ ಕೂದಲ ಮೇಲೆ ಮಸಾಜ್ ಮಾಡುತ್ತಾ ಬಂದರೆ ಕೂದಲಿಗೆ ಭಾರೀ ಪ್ರಯೋಜನ ಸಿಗುತ್ತದೆ.
ಹೀಗೆ ಕೂದಲಿಗೆ ಎಣ್ಣೆ ಹಚ್ಚಿದ ನಂತರ 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು. ನಂತರ ಕೂದಲನ್ನು ತೊಳೆಯಿರಿ.ನಿಮ್ಮ ಶಾಂಪೂ ಮತ್ತು ಕಂಡಿಷನರ್ ಬಾಟಲಿಗಳಿಗೆ ಕೂಡಾ ಪುದೀನಾ ಎಣ್ಣೆಯನ್ನು ನೇರವಾಗಿ ಹಾಕಬಹುದು.ಶಾಂಪೂ ಅಥವಾ ಕಂಡಿಷನರ್‌ನ ಪ್ರತಿ ಔನ್ಸ್‌ಗೆ ಸುಮಾರು ಐದು ಹನಿಗಳನ್ನು ಸೇರಿಸಬಹುದು, ಇದಕ್ಕಿಂತ ಹೆಚ್ಚು ಬೇರೆಸದಂತೆ ನೋಡಿಕೊಳ್ಳಿ.
ಹೀಗೆ ಮಾಡುತ್ತಾ ಬಂದರೆ ಕೂದಲು ಉದುರುವುದು ತಡೆಯುವುದು ಮಾತ್ರವಲ್ಲ ಕೂದಲು ಬೆಳ್ಳಾಗಾಗುವುದನ್ನು ಕೂಡಾ ಶಾಶ್ವತವಾಗಿ ತಡೆಯಬಹುದು ಎನ್ನುತ್ತದೆ ಅಧ್ಯಯನ. ( ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)