ಡಿಸೆಂಬರ್‌ನಲ್ಲಿ ಈ ರಾಶಿಯವರ ಮೇಲೆ ಹಣದ ಮಳೆಯಾಗಲಿದೆ, ನೀವೂ ಅದೃಷ್ಟವಂತರಾ?

ದೇವಿ ಲಕ್ಷ್ಮಿಯ ಅನುಗ್ರಹವು ಈ ರಾಶಿಯವರ ಎಲ್ಲಾ ಆರ್ಥಿಕ ತೊಂದರೆಗಳನ್ನು ಕೊನೆಗೊಳಿಸುತ್ತದೆ ಮತ್ತು ಬಹಳಷ್ಟು ಸಂತೋಷವನ್ನು ನೀಡುತ್ತದೆ.  

2021ರ ಕೊನೆಯ ತಿಂಗಳು ಡಿಸೆಂಬರ್‌ನಲ್ಲಿ ಪ್ರಾರಂಭವಾಗಲಿದೆ. ಇಡೀ ವರ್ಷದಲ್ಲಿ ನಡೆದ ಸಿಹಿ-ಕಹಿ ಘಟನೆಗಳನ್ನು ಜನರು ಮೆಲಕು ಹಾಕುತ್ತಾರೆ. ವರ್ಷದ ಕೊನೆಯ ತಿಂಗಳು ಯಾವ ಸಿಹಿಸುದ್ದಿ ಸಿಗಬಹುದು ಎಂಬ ನಿರೀಕ್ಷೆಯನ್ನು ಹೊಂದಿರುತ್ತಾರೆ. ಈ ಸಂದರ್ಭದಲ್ಲಿ ಕೆಲವು ರಾಶಿಚಕ್ರ ಚಿಹ್ನೆಗಳ ಜನರಿಗೆ ಅದೃಷ್ಟವು ಕೈಹಿಡಿಯಲಿದೆ. ಏಕೆಂದರೆ ವರ್ಷದ ಕೊನೆಯ ತಿಂಗಳು ಈ ರಾಶಿಯವರ ಮೇಲೆ ಹಣದ ಮಳೆಯಾಗಲಿದೆ. ದೇವಿ ಲಕ್ಷ್ಮಿಯ ಅನುಗ್ರಹವು ಇವರ ಎಲ್ಲಾ ಆರ್ಥಿಕ ತೊಂದರೆಗಳನ್ನು ಕೊನೆಗೊಳಿಸುತ್ತದೆ ಮತ್ತು ಬಹಳಷ್ಟು ಸಂತೋಷವನ್ನು ನೀಡುತ್ತದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮೇಷ ರಾಶಿಯ ಜನರು ಹೆಚ್ಚಿನ ಹಣದ ಲಾಭವನ್ನು ಪಡೆಯುತ್ತಾರೆ ಮತ್ತು ಇದು ಅವರ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಈ ರಾಶಿಯವರು ಮಾಡಿದ ಹೂಡಿಕೆಯು ಮಂಗಳಕರವಾಗಿರುತ್ತದೆ. ಈ ರಾಶಿಯವರಿಗೆ ಹಣ ಮಾತ್ರವಲ್ಲ, ಸಾಕಷ್ಟು ಸುಖ-ಸಂತೋಷವೂ ಸಿಗುತ್ತದೆ.

2 /5

ಸಿಂಹ ರಾಶಿಯವರಿಗೆ ಆದಾಯ ಹೆಚ್ಚಾಗಲಿದೆ. ಮನೆ ಅಥವಾ ಜಮೀನು ಖರೀದಿಸಲು ಬಯಸುವ ಜನರ ಕನಸು ಈ ತಿಂಗಳು ನನಸಾಗಬಹುದು. ಆದರೆ ಒಪ್ಪಂದಗಳ ದಾಖಲೆಗಳ ವಿಚಾರದಲ್ಲಿ ತಪ್ಪು ಮಾಡಬೇಡಿ. ಕುಟುಂಬದಲ್ಲಿ ಸಂತೋಷ ಇರುತ್ತದೆ.

3 /5

ಕನ್ಯಾ ರಾಶಿಯ ಜನರು ಸಹ ಬಹಳಷ್ಟು ಹಣವನ್ನು ಪಡೆಯುತ್ತಾರೆ ಮತ್ತು ಪ್ರತಿ ಕೆಲಸದಲ್ಲಿಯೂ ಸಹ ಯಶಸ್ಸನ್ನು ಪಡೆಯುತ್ತಾರೆ. ಅದರಲ್ಲೂ ವ್ಯಾಪಾರಸ್ಥರಿಗೆ ಡಿಸೆಂಬರ್ ತಿಂಗಳು ತುಂಬಾ ಶುಭಕರವಾಗಿರುತ್ತದೆ. ಹೆಚ್ಚುತ್ತಿರುವ ಆದಾಯವನ್ನು ನೋಡಿ ವಿಪರೀತ ಖರ್ಚು ಮಾಡಬೇಡಿ.

4 /5

ತುಲಾ ರಾಶಿಯವರಿಗೆ ಆದಾಯ ಹೆಚ್ಚಾಗಲಿದೆ. ಹೊಸ ರೀತಿಯಲ್ಲಿ ಹಣ ಬರಲಿದೆ. ಇಲ್ಲಿಯವರೆಗೆ ನಡೆಯುತ್ತಿದ್ದ ಹಣದ ಮುಗ್ಗಟ್ಟು ಈಗ ಕೊನೆಗೊಳ್ಳಲಿದೆ. ಹಳೆಯ ವಹಿವಾಟು ಇದ್ದರೆ ಅದನ್ನು ಈ ತಿಂಗಳು ಇತ್ಯರ್ಥಪಡಿಸಿ.

5 /5

ವೃಶ್ಚಿಕ ರಾಶಿಯವರಿಗೆ ಧನ ಲಾಭವಾಗುತ್ತದೆ, ಆದರೆ ಖರ್ಚು ಕೂಡ ಹೆಚ್ಚಾಗುತ್ತದೆ. ಈ ಹೆಚ್ಚುವರಿ ಆದಾಯವನ್ನು ಹೂಡಿಕೆಯಲ್ಲಿ ಬಳಸುವುದು ಉತ್ತಮ. ಇದು ಭವಿಷ್ಯದಲ್ಲಿ ಪ್ರಯೋಜನವನ್ನು ನೀಡುತ್ತದೆ. ಮನೆಗೆ ಕಾರನ್ನು ತೆಗೆದುಕೊಂಡು ಹೋಗಲು ಇದು ಉತ್ತಮ ಸಮಯ.