ಅಣಬೆಯ ಸೇವನೆಯಿಂದ ತಟ್ಟನೆ ಇಳಿಕೆಯಾಗುವುದು ಶುಗರ್‌..ಒಮ್ಮೆ ಟ್ರೈ ಮಾಡಿ ಮಧುಮೇಹ ಚಿಂತೆಗೆ ಗುಡ್‌ ಬೈ ಹೇಳಿ

mushroom for diabetes: ಅಣಬೆ ಸೇವನೆ ಆರೋಗ್ಯಕ್ಕೆ ರಾಮಬಾಣ. ವಿಟಮಿನ್‌ಗಳಿಂದ ಹಿಡಿದು ಅಮೈನೋ ಆಮ್ಲಗಳವರೆಗಿನ ಪೋಷಕಾಂಶಗಳು ಅಣಬೆಯಲ್ಲಿವೆ. ಇದನ್ನು ಸೇವಿಸುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದಷ್ಟೆ ಅಲ್ಲದೆ ಬೊಜ್ಜನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

1 /12

ಅಣಬೆ ಸೇವನೆ ಆರೋಗ್ಯಕ್ಕೆ ರಾಮಬಾಣ. ವಿಟಮಿನ್‌ಗಳಿಂದ ಹಿಡಿದು ಅಮೈನೋ ಆಮ್ಲಗಳವರೆಗಿನ ಪೋಷಕಾಂಶಗಳು ಅಣಬೆಯಲ್ಲಿವೆ. ಇದನ್ನು ಸೇವಿಸುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದಷ್ಟೆ ಅಲ್ಲದೆ ಬೊಜ್ಜನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2 /12

ಅನೇಕ ಜನರು ಅಣಬೆಗಳನ್ನು ಇಷ್ಟಪಡುತ್ತಾರೆ. ಅಣಬೆಗಳು ರುಚಿ ಅಷ್ಟೆ ಅಲ್ಲದೆ  ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. 

3 /12

ಅಣಬೆಗಳಿಂದ ಸಾಮಾನ್ಯವಾಗಿ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಆದರೆ. ಕೆಲವರಿಗೆ ಮಾತ್ರ ಇದರ ಸೇವನೆಯಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿದಿದೆ.

4 /12

ಅಣಬೆಗಳನ್ನು ಮಶ್ರೂಮ್ ಎಂದೂ ಸಹ ಕರೆಯುತ್ತಾರೆ.  ಇವು ಆರೋಗ್ಯ ಮತ್ತು ಔಷಧೀಯ ಗುಣಗಳಿಂದ ಕೂಡಿದ್ದು,  ಫೈಬರ್, ಪೊಟ್ಯಾಸಿಯಮ್, ವಿಟಮಿನ್ ಡಿ ಮತ್ತು ಪ್ರೋಟೀನ್ಗಳಲ್ಲಿ ಸಮೃದ್ಧವಾಗಿದೆ.

5 /12

ಅಣಬೆಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು,  ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಸಹ ಹೆಚ್ಚಿಸುತ್ತವೆ.

6 /12

ದೇಶದ ಅನೇಕ ಸ್ಥಳಗಳಲ್ಲಿ ಅಣಬೆಗಳನ್ನು ಬೆಳೆಸಲಾಗುತ್ತದೆ. ಔಷಧೀಯ ಗುಣಗಳಿಂದಾಗಿ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ. 

7 /12

ಅಣಬೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಮಶ್ರೂಮ್ ಬ್ಯಾಕ್ಟೀರಿಯಾ ಮತ್ತು ಇತರ ಶಿಲೀಂಧ್ರಗಳ ಸೋಂಕನ್ನು ಸಹ ಗುಣಪಡಿಸುತ್ತದೆ.

8 /12

ಹೃದ್ರೋಗಿಗಳಿಗೂ ಅಣಬೆ ತುಂಬಾ ಒಳ್ಳೆಯದು. ಇದು ಪೋಷಕಾಂಶಗಳಲ್ಲಿ ಸಮೃದ್ಧವಾದ್ದು, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಅಷ್ಟೆ ಅಲ್ಲದೆ ಹೃದಯಾಘಾತದಂತಹ ಅಪಾಯಗಳನ್ನು ಕಡಿಮೆ ಮಾಡುತ್ತದೆ.  

9 /12

ಅಣಬೆಯ ಸೇವನೆಯಿಂದ ಮಲಬದ್ಧತೆ, ಅಜೀರ್ಣ ಇತ್ಯಾದಿ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸಬಹುದು.  ಇದು ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಸಹ ನಿರ್ವಹಿಸುತ್ತದೆ. ಏಕೆಂದರೆ ಇದರಲ್ಲಿ ಫೋಲಿಕ್ ಆಸಿಡ್ ಮತ್ತು ಕಬ್ಬಿಣಾಂಶ ಹೇರಳವಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.

10 /12

ದೇಹದಲ್ಲಿನ ರಕ್ತದ ಕೊರತೆಯನ್ನು ಅಣಬೆ ನಿವಾರಿಸುತ್ತದೆ.  ರಕ್ತಹೀನತೆ ಇರುವ ರೋಗಿಗಳಿಗೆ ಇದು ತುಂಬಾ ಉಪಯುಕ್ತವಾಗಿದೆ. ಅಣಬೆಯಲ್ಲಿ ಫೋಲಿಕ್ ಆಮ್ಲ ಮತ್ತು ಕಬ್ಬಿಣದ ಅಂಶ ಹೇರಳವಾಗಿದೆ. ಇವು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

11 /12

ಅಣಬೆ ಆರೋಗ್ಯದ ಜೊತೆಗೆ ತ್ವಚೆಗೂ ಒಳ್ಳೆಯದು. ಮಶ್ರೂಮ್ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಅಣಬೆಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿವೆ. 

12 /12

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.)