ಚಳಿಗಾಲದಲ್ಲಿ ನೋಡಲೇಬೇಕಾದ 5 ಸ್ಥಳಗಳು..! ಸಂಗಾತಿ ಜೊತೆ ತಪ್ಪದೇ ಹೋಗಿ ನೋಡಿ..

Winter turist places : ಚಳಿಗಾಲದಲ್ಲಿ ಪಕೃತಿ ಸೊಬಗನ್ನು ನೋಡುವುದೇ ಒಂದು ಭಾಗ್ಯ.. ಬನ್ನಿ ಇಂದು ದಕ್ಷಿಣ ಭಾರತದಲ್ಲಿ ನೋಡಲೇಬೇಕಾದ ಕೆಲವು ಸ್ಥಳಗಳ ಕುರಿತು ತಿಳಿಯೋಣ.. ಕುಟುಂಬ ಅಥವಾ ಸ್ನೇಹಿತರೊಂದಿಗೆ ಹೋಗಿ ಮತ್ತು ಪಿಕ್ನಿಕ್ ಆನಂದಿಸಿ...
 

1 /6

ಚಳಿಗಾಲ ಸಮೀಪಿಸುತ್ತಿದೆ. ಇದಲ್ಲದೆ, ರಜಾದಿನಗಳು ಹೆಚ್ಚುತ್ತಿವೆ.. ಇದಕ್ಕಿಂತ ಪ್ರವಾಸಕ್ಕೆ ಉತ್ತಮ ಸಮಯ ಯಾವುದು..? ಅಲ್ವಾ.. ಹಾಗಾಗಿ ಇಲ್ಲಿ ನಾವು ಚಳಿಗಾಲದಲ್ಲಿ ದಕ್ಷಿಣ ಭಾರತದಲ್ಲಿ ನೋಡಲೇಬೇಕಾದ ಕೆಲವು ಸ್ಥಳಗಳನ್ನು ಪಟ್ಟಿ ಮಾಡಿದ್ದೇವೆ.. ನೋಡಿ... ಹೋಗಿ.. ಕುಟುಂಬ ಅಥವಾ ಸ್ನೇಹಿತರೊಂದಿಗೆ ರಜಾದಿನವನ್ನು ಆನಂದಿಸಿ.  

2 /6

ಊಟಿ: ಚಳಿಗಾಲದ ನಿಜವಾದ ಮಜೆಯನ್ನು ನಿಜವಾಗಿಯೂ ಆನಂದಿಸಬೇಕು ಅಂದ್ರೆ.. ಊಟಿಗಿಂತ ಉತ್ತಮವಾದ ಸ್ಥಳ ಯಾವುದಿಲ್ಲ.. ಊಟಿ ಚಳಿಗಾಲದಲ್ಲಿ ನೋಡಲೇಬೇಕಾದ ಪ್ರವಾಸಿ ತಾಣಗಳಲ್ಲಿ ಇಂದು ಪ್ರಮುಖ. ಮುಂಜಾನೆ ಮಂಜು, ಚಹಾ ತೋಟಗಳು, ವಿಧದ ಚಹಾವನ್ನು ಸವಿಯುತ್ತ.. ವಿಶ್ರಾಂತಿ ಪಡೆಯಲು ಉತ್ತಮ ಸ್ಥಳ.  

3 /6

ಮಡಿಕೇರಿ: ಮಡಿಕೇರಿಯನ್ನು ಭಾರತದ ಪುಟ್ಟ ಸ್ಕಾಟ್‌ಲ್ಯಾಂಡ್ ಎಂದು ಪ್ರೀತಿಯಿಂದ ಕರೆಯುತ್ತಾರೆ. ಸಂಸ್ಕೃತಿಗೆ ಹೆಸರಾದ ಸುಂದರ ಪ್ರವಾಸಿ ತಾಣ. ಇದು ಕಾಫಿ ಎಸ್ಟೇಟ್‌ಗಳಿಗೆ ಹೆಸರುವಾಸಿಯಾಗಿದೆ. ಜಲಪಾತ ಸೇರಿದಂತೆ ಸಾಹಸ ಕ್ರೀಡೆಗಳಿಗೆ ಕೊರತೆ ಇರುವುದಿಲ್ಲ.    

4 /6

ಆಲಪ್ಪುಳ: ಕೇರಳದ ವಿಶಿಷ್ಟತೆಗೆ ಆಲಪ್ಪುಳವೂ ಒಂದು ಕಾರಣ. ನೀರಿನಿಂದ ಸುತ್ತುವರೆದಿರುವ ನೈಸರ್ಗಿಕ ಭೂದೃಶ್ಯಗಳು, ಅದ್ಭುತವಾದ ಕಡಲತೀರಗಳು ಮತ್ತು ದೋಣಿ ವಿಹಾರವು ಈ ಸ್ಥಳದ ಸೌಂದರ್ಯವನ್ನು ಸೇರಿಸಲು ತಪ್ಪಿಸಿಕೊಳ್ಳಬಾರದು. ನಿಮ್ಮ ಸಂಗಾತಿಯೊಂದಿಗೆ ಚಳಿಗಾಲದಲ್ಲಿ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ.    

5 /6

ವಯನಾಡ್: ಚಳಿಗಾಲದಲ್ಲಿ ನೀವು ಭೇಟಿನೀಡಲೇಬೇಕಾದ ಸ್ಥಳ ಕೇರಳದ ವಯನಾಡ್. ಎಲ್ಲಿ ತಿರುಗಿದರೂ ಹಚ್ಚ ಹಸಿರಿನ ದೃಶ್ಯಾವಳಿ.. ಕಣ್ಣಿಗೆ ಹಬ್ಬ.. ಪರ್ವತಗಳ ಸೌಂದರ್ಯ ನಿಮ್ಮನ್ನ ಮಂತ್ರಮುಗ್ಧರನ್ನಾಗಿಸುತ್ತದೆ.. ವಿಶೇಷವಾಗಿ ಚಳಿಗಾಲದಲ್ಲಿ ನೋಡಲು ಎರಡು ಕಣ್ಣು ಸಾಲದು..  

6 /6

ಕೊಡೈಕೆನಾಲ್ : ಬೆಟ್ಟಗಳ ರಾಣಿ ಎಂದು ಪ್ರಸಿದ್ಧತೆ ಪಡೆದಿರುವ ಕೊಡೈಕೆನಾಲ್‌ಗೆ ಚಳಿಗಾಲದಲ್ಲಿ ಭೇಟಿ ನೀಡುವುದು ಅತ್ಯುತ್ತಮ ಪ್ಲಾನ್‌. ಇಲ್ಲಿನ ತಂಪಾದ ಗಾಳಿಯ ನಡುವೆ ಪರ್ವತದ ಮೇಲೆ ಕುಳಿತು ಒಂದು ಕಪ್ ಬಿಸಿ ಕಾಫಿ ಸವಿಯುತ್ತ.. ಪ್ರಕೃತಿಯನ್ನು ಆನಂದಿಸಬಹುದು. ನೀವು ಹೆಚ್ಚು ಶಾಂತಿಯುತ ವಾತಾವರಣ ಬಯಸುತ್ತಿದ್ದರೆ.. ಈ ಸ್ಥಳಕ್ಕೆ ತಪ್ಪದೇ ಭೇಟಿ ನೀಡಿ..