Curd For Health: ಉತ್ತಮ ಆರೋಗ್ಯಕ್ಕೆ ಮೊಸರು ಅತ್ಯುತ್ತಮ ಆಹಾರ ಎಂದು ಪರಿಗಣಿಸಲಾಗಿದೆ. ಮೊಸರಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ-2, ವಿಟಮಿನ್ ಬಿ 12, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಮುಂತಾದ ಅನೇಕ ರೀತಿಯ ಪೋಷಕಾಂಶಗಳು ಸಾಕಷ್ಟು ಪ್ರಮಾಣದಲ್ಲಿದೆ. ಆದರೆ, ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾದ ಮೊಸರು ಸೇವನೆ ಮತ್ತು ಮೊಸರಿಗೆ ಸ್ಸಂಬಂಧಿಸಿದ ಕೆಲವು ತಪ್ಪುಗಳು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ರಾತ್ರಿ ವೇಳೆ ಮೊಸರು ಸೇವಿಸದಂತೆ ವೈದ್ಯರು ಸಲಹೆ ನೀಡುತ್ತಾರೆ. ರಾತ್ರಿಯಲ್ಲಿ ಮೊಸರು ತಿನ್ನುವುದರಿಂದ ದೇಹದಲ್ಲಿ ಆಲಸ್ಯ ಉಂಟಾಗುತ್ತದೆ, ಇದು ಲೋಳೆಯ ಉತ್ಪಾದನೆಯಿಂದ ಉಂಟಾಗುತ್ತದೆ. ಆಯುರ್ವೇದದ ಪ್ರಕಾರ, ಮೊಸರಿನ ಸಿಹಿ ಮತ್ತು ಸಂಕೋಚಕ ಗುಣಲಕ್ಷಣಗಳು ಲೋಳೆಯನ್ನು ಉತ್ಪತ್ತಿ ಮಾಡುತ್ತವೆ, ಇದು ಉಸಿರಾಟದ ತೊಂದರೆಗಳು, ಮೂಗಿನ ದಟ್ಟಣೆ, ಸಂಧಿವಾತ ಮತ್ತು ಉರಿಯೂತಕ್ಕೆ ಕಾರಣವಾಗುತ್ತದೆ.
ನಿಮ್ಮ ಜೀರ್ಣಾಂಗ ವ್ಯವಸ್ಥೆಯು ದುರ್ಬಲವಾಗಿದ್ದರೆ ನೀವು ಪ್ರತಿದಿನ ಮೊಸರನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ. ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ನೀವು ಹೆಚ್ಚು ಮೊಸರು ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆ ಉಂಟಾಗಬಹುದು. ಮಾತ್ರವಲ್ಲ, ಇದು ನಿಮ್ಮ ತೂಕ ಹೆಚ್ಚಳಕ್ಕೂ ಕಾರಣವಾಗಬಹುದು.
ಮೊಸರು ಅಥವಾ ಮೊಸರಿಂದ ತಯಾರಿಸಿದ ಖಾದ್ಯಗಳನ್ನು ಬಿಸಿ ಮಾಡಬಾರದು. ಮೊಸರು ಮಿಶ್ರಿತ ಆಹಾರವನ್ನು ಬಿಸಿ ಮಾಡಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.
ಬೊಜ್ಜು, ಕಫದ ತೊಂದರೆಗಳು, ರಕ್ತಸ್ರಾವದ ತೊಂದರೆಗಳು ಅಥವಾ ಉರಿಯೂತಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿರುವವರು ಮೊಸರು ಸೇವನೆಯನ್ನು ತಪ್ಪಿಸಬೇಕು.
ಕೆಲವರಿಗೆ ಆಹಾರದೊಂದಿಗೆ ಈರುಳ್ಳಿ ಸೇವಿಸುವ ಅಭ್ಯಾಸವಿರುತ್ತದೆ. ಆದರೆ, ಈರುಳ್ಳಿಯೊಂದಿಗೆ ಮೊಸರು ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಹಾನಿಕರಕ ಎಂದು ಸಾಬೀತುಪಡಿಸಬಹುದು. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.