Guru Uday 2023: ಶೀಘ್ರದಲ್ಲಿಯೇ ಮಂಗಳನ ಅಂಗಳದಲ್ಲಿ ಬೃಹಸ್ಪತಿಯ ಉದಯ, 4 ರಾಶಿಗಳ ಜನರ ಮನೆಯಲ್ಲಿ ಹಣದ ಹೊಳೆಯೇ ಹರಿಯಲಿದೆ!

Jupiter Rise April 2023: ಇಡೀ ಜಗತ್ತಿನ ಕಲ್ಯಾಣಕರ್ತ ಎಂದೇ ಕರೆಯಲಾಗುವ ದೇವ ಗುರು ಬೃಹಸ್ಪತಿ ಶೀಘ್ರದಲ್ಲಿಯೇ ಮಂಗಳನ ರಾಶಿಯಾಗಿರುವ ಮೇಷ ರಾಶಿಯಲ್ಲಿ ಉದಯಿಸಲಿದ್ದಾನೆ.  ಏಪ್ರಿಲ್ 27 ರಂದು ಗುರುವಿನ ಈ ಗೋಚರ ನೆರವೇರಲಿದ್ದು, ಈ ಗೋಚರದಿಂದ ಒಟ್ಟು ನಾಲ್ಕು ರಾಶಿಗಳ ಜಾತಕದವರ ಮನೆಯಲ್ಲಿ ಶುಭ ಮಂಗಳದ ಸಾಮ್ರಾಜ್ಯ ನಿರ್ಮಾಣಗೊಳ್ಳಲಿದೆ. 
 

Guru Uday April 2023: ದೇವ-ದೇವತೆಗಳ ಗುರು ಎಂದೇ ಭಾವಿಸಲಾಗುವ ಬೃಹಸ್ಪತಿ ಸಾಮಾನ್ಯ ವಾಗಿ ಒಂದು ಲಾಭಕಾರಿ ಗ್ರಹ ಎಂದೇ ಪರಿಗಣಿಸಲಾಗುತ್ತದೆ. ದೇವ ಗುರು ಬೃಹಸ್ಪತಿಯ ಆಶೀರ್ವಾದ ಒಂದು ವೇಳೆ ಪ್ರಾಪ್ತಿಯಾಗದೇ ಹೋದರೆ, ಜೀವನದಲ್ಲಿ ಯಾವುದೇ ಶುಭ ಸಂಗತಿಗಳು ಲಭಿಸುವುದಿಲ್ಲ ಎಂದು ಭಾವಿಸಲಾಗುತ್ತದೆ. ಜಾತಕದಲ್ಲಿ ಬೃಹಸ್ಪತಿಯ ಸ್ಥಾನ ಗಟ್ಟಿಯಾದರೆ, ಹಲವು ಅನುಕೂಲಕರ ಪರಿಣಾಮಗಳು ಪ್ರಾಪ್ತಿಯಾಗುತ್ತವೆ. ಒಂದು ವೇಳೆ ಜಾತಕದಲ್ಲಿ ಹಾನಿಕಾರಕ ಗ್ರಹಗಳ ಯುತಿ ನೆರವೇರಿದರೆ ವ್ಯಕ್ತಿ ಡೀಪ್ರೇಷನ್, ಧನ ಹಾನಿಗೆ ಒಳಗಾಗಿ ಘನತೆ-ಗೌರವದ ಕೊರತೆ ಎದುರಿಸುತ್ತಾನೆ ಎನ್ನಲಾಗುತ್ತದೆ. 

 

ಇದನ್ನೂ ಓದಿ-Malavya Rajyog: ಶೀಘ್ರದಲ್ಲೇ ವೃಷಭ ರಾಶಿಯಲ್ಲಿ ಶುಕ್ರನ ಗೋಚರ, ಮಾಲವ್ಯ ರಾಜಯೋಗದಿಂದ 3 ರಾಶಿಗಳ ಜನರಿಗೆ ಅಪಾರ ಧನಲಾಭ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಮೇಷ ರಾಶಿ- ಮೇಷ ರಾಶಿಯಲ್ಲಿಯೇ ಗುರುವಿನ ಈ ಉದಯ ನೆರವೇರಲಿದೆ. ಇದರಿಂದ ನಿಮ್ಮ ಆರೋಗ್ಯ ಉತ್ತಮವಾಗಲಿದ್ದು, ಸಕಾರಾತ್ಮಕ ಶಕ್ತಿಯಿಂದ ನೀವು ಭರಪೂರರಗುವಿರಿ. ಆಧ್ಯಾತ್ಮಿಕತೆಯ ಕಡೆಗೆ ನಿಮ್ಮ ಒಲವು ಹೆಚ್ಚಾಗಲಿದೆ. ನೀವು ದೂರದ ಆಧ್ಯಾತ್ಮಿಕ ಪ್ರಯಾಣಕ್ಕೆ ಹೋಗಬಹುದು. ವೃತ್ತಿಜೀವನದ ದೃಷ್ಟಿಯಿಂದ ಈ ಸಮಯವು ನಿಮಗೆ ಅನುಕೂಲಕರವಾಗಿರುತ್ತದೆ. ನೀವು ವಿದೇಶದಲ್ಲಿ ಉದ್ಯೋಗವನ್ನು ಪಡೆಯಬಹುದು ಮತ್ತು ಅಲ್ಲಿ ಶಾಶ್ವತವಾಗಿ ವಾಸಿಸುವ ಅವಕಾಶವನ್ನು ಪಡೆಯಬಹುದು. ನಿಮಗೆ  ಬಡ್ತಿ ಮತ್ತು ಉದ್ಯೋಗದಲ್ಲಿ ಉತ್ತಮ ಗ್ರೋತ್ ಸಾಧ್ಯತೆಗಳಿವೆ. ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳ ಬೆಂಬಲವನ್ನು ನೀವು ಪಡೆಯುತ್ತೀರಿ. ಈ ಸಮಯವು ವ್ಯವಹಾರಕ್ಕೆ ಅನುಕೂಲಕರವಾಗಿರುತ್ತದೆ.  

2 /4

ಕರ್ಕ ರಾಶಿ- ಬೃಹಸ್ಪತಿಯ ಈ ಮೇಷ ಗೋಚರ ಅಥವಾ ಉದಯ ನಿಮಗೆ ಅಸಾಧಾರಣ ಫಲಿತಾಂಶಗಳನ್ನು ನೀಡಲಿದೆ. ನೀವು ನಿಮ್ಮ ವ್ಯಾಪಾರವನ್ನು ವಿಸ್ತರಿಸಬಹುದು ಮತ್ತು ಪಾಲುದಾರಿಕೆಯಲ್ಲಿ ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಸಮಾಜದಲ್ಲಿ ನಿಮ್ಮ ಘನತೆ ಗೌರವ ಹೆಚ್ಚಾಗಲಿದೆ. ನೌಕರ ವರ್ಗದ  ಜನರಿಗೆ ಅನೇಕ ಪ್ರಯೋಜನಗಳ ಲಕ್ಷಣಗಳು ಗೋಚರಿಸುತ್ತಿವೆ. ಅವರ ಸಂಬಳದಲ್ಲಿ ಹೆಚ್ಚಾಗಲಿದೆ ಮತ್ತು ನೌಕರಿಯಲ್ಲಿ ಬಡ್ತಿಯೂ ಸಂಭವಿಸುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ವರ್ಗಾವಣೆ ಕೂಡ ಸಂಭವಿಸಬಹುದು. ಈ ಎರಡೂ ಸಂದರ್ಭಗಳು ನಿಮಗೆ ಪ್ರಯೋಜನವನ್ನು ನೀಡುತ್ತವೆ. ಕಠಿಣ ಪರಿಶ್ರಮಕ್ಕಾಗಿ ನೀವು ಹಿರಿಯರಿಂದ ಮೆಚ್ಚುಗೆಯನ್ನು ಪಡೆಯಬಹುದು.  

3 /4

ತುಲಾ ರಾಶಿ- ದೇವ ಗುರು ಬೃಹಸ್ಪತಿಯ ಉದಯದಿಂದ ನೀವು ಅನೇಕ ಹೊಸ ಜನರನ್ನು ಭೇಟಿಯಾಗುವಿರಿ ಮತ್ತು ಅವರೊಂದಿಗೆ ನಿಮ್ಮ ಸ್ನೇಹವು ಬಲಗೊಳ್ಳಲಿದೆ. ಆರೋಗ್ಯದ ದೃಷ್ಟಿಯಿಂದ ಸಮಯವು ಅನುಕೂಲಕರವಾಗಿರುತ್ತದೆ ಮತ್ತು ನೀವು ಉತ್ತಮ ಆರೋಗ್ಯವನ್ನು ಆನಂದಿಸುವಿರಿ. ವ್ಯವಹಾರದಲ್ಲಿ, ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಾರೆ, ಆದರೆ ನಿಮ್ಮ ತಿಳುವಳಿಕೆ ಮತ್ತು ಚತುರತೆಯಿಂದ ನೀವು ಎಲ್ಲಾ ಸಮಸ್ಯೆಗಳ ಮೇಲೆ ಜಯ ಸಾಧಿಸುವಿರಿ. ಪಾರ್ಟ್ನರ್ಶಿಪ್ ನಲ್ಲಿ ವ್ಯಾಪಾರ ಮಾಡುವುದರಿಂದ ನೀವು ಉತ್ತಮ ಲಾಭ ಪಡೆಯಬಹುದು. ಆದರೆ ನಿಮ್ಮ ಲಾಭದ ಪ್ರಮಾಣ ಮೊದಲಿಗಿಂತ ಹೆಚ್ಚಾಗಿರಲಿದೆ ಮತ್ತು ನೀವು ಕೆಲವು ಹೊಸ ವಿಷಯಗಳಲ್ಲಿ ಹೂಡಿಕೆ ಮಾಡಬಹುದು.  

4 /4

ಮಕರ ರಾಶಿ- ಮಂಗಳನ ಅಂಗಳದಲ್ಲಿ ಬೃಹಸ್ಪತಿಯ ಉದಯ ನಿಮಗೆ ಒಳ್ಳೆಯ ಸುದ್ದಿಯನ್ನು ತರುತ್ತದೆ. ನೀವು ಒಡಹುಟ್ಟಿದವರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ, ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ನೀವು ಹೊಸ ಮನೆಗೆ ಪ್ರವೇಶಿಸಬಹುದು. ಈ ಅವಧಿಯಲ್ಲಿ ನೀವು ಸುಲಭವಾಗಿ ಹಣ ಗಳಿಸಲು ಮತ್ತು ನೀವು ಗಳಿಸಿದ ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ನಿಮ್ಮ ಕುಟುಂಬಕ್ಕಾಗಿ ನೀವು ಹೆಚ್ಚಿನ ಹಣವನ್ನು ಖರ್ಚು ಮಾಡಬಹುದು. ನೀವು ಆಸ್ತಿಯಲ್ಲಿಯೂ ಹೂಡಿಕೆ ಮಾಡಬಹುದಾದ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ನಿಮ್ಮ ಮನೆಯಲ್ಲಿ ಕೆಲವು ಶುಭ ಅಥವಾ ಮಂಗಳ ಕಾರ್ಯಗಳು ನಡೆಯುವ ಸಾಧ್ಯತೆಯಿದೆ. ಇದರಿಂದ ನೀವು ತೃಪ್ತಿಯ ಭಾವನೆಯನ್ನು ಅನುಭವಿಸುವಿರಿ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)  

You May Like

Sponsored by Taboola