PICS: ದೆಹಲಿಯಲ್ಲಿ ಸಂಚರಿಸಲಿದೆ ಹೈಟೆಕ್ MEMU ಟ್ರೈನ್

ದೇಶದ ಮೊದಲ ಇಂಜಿನ್ ರಹಿತ ಸೆಮಿ-ಹೈ ಸ್ಪೀಡ್ ರೈಲು ಟ್ರೈನ್-18 ಬಗ್ಗೆ ನಿಮಗೆ ತಿಳಿದಿದೆ. ಈಗ ಹೊಸ MEMU ರೈಲು ಚಾಲನೆ ಮಾಡಲು ಸಿದ್ಧವಾಗಿದೆ. ಈ ರೈಲು ಹಳೆಯ ರೈಲುಗಳಿಂದ ಸಂಪೂರ್ಣವಾಗಿ ಭಿನ್ನವಾಗಿದೆ. ಹೊಸ MEMU ರೈಲಿನ ಮೊದಲ ಪರೀಕ್ಷಾರ್ಥ ಸಂಚಾರ ದೆಹಲಿಯಲ್ಲಿ ನಡೆಯಲಿದೆ.   

  • Dec 19, 2018, 14:27 PM IST

ದೇಶದ ಮೊದಲ ಇಂಜಿನ್ ರಹಿತ ಸೆಮಿ-ಹೈ ಸ್ಪೀಡ್ ರೈಲು ಟ್ರೈನ್-18 ಬಗ್ಗೆ ನಿಮಗೆ ತಿಳಿದಿದೆ. ಕೆಲ ದಿನಗಳ ಹಿಂದೆಯಷ್ಟೇ ಯಶಸ್ವೀ ಪರೀಕ್ಷಾರ್ಥ ಸಂಚಾರ ನಡೆಸಿದ ಟ್ರೈನ್ 18 ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಚೆನ್ನೈ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ಒಂದು ವಿಶಿಷ್ಟ್ಯ ರೀತಿಯ MEMU ರೈಲನ್ನು ತಯಾರಿಸಿದೆ. ಈ ರೈಲು ಹಳೆಯ ರೈಲುಗಳಿಂದ ಸಂಪೂರ್ಣವಾಗಿ ಭಿನ್ನವಾಗಿದೆ. ಹೊಸ MEMU ರೈಲಿನ ಮೊದಲ ಪರೀಕ್ಷಾರ್ಥ ಸಂಚಾರ ದೆಹಲಿಯಲ್ಲಿ ನಡೆಯಲಿದೆ.   

1 /10

MEMU ರೈಲಿನಲ್ಲಿ ಬಯೋ ಶೌಚಾಲಯವನ್ನು ಬಳಸಲಾಗಿದೆ. ಇದರಿಂದ ಟಾಯ್ಲೆಟ್ ಅನ್ನು ಸ್ವಚ್ಛವಾಗಿರಿಸಲು ಸಹಾಯ ಮಾಡುತ್ತದೆ.

2 /10

ಈ ರೈಲಿನಲ್ಲಿ ಡಬಲ್ ಸ್ಲೈಡಿಂಗ್ ಬಾಗಿಲುಗಳನ್ನು ಬಳಸಲಾಗಿದೆ.

3 /10

ಚಾಲಕ ಕ್ಯಾಬಿನ್ ಕೂಡಾ ಹೆಚ್ಚು ಸುಂದರವಾದ ಮತ್ತು ಹೈ-ಟೆಕ್ ಮಾಡಲ್ಪಟ್ಟಿದೆ. ಅದರಲ್ಲಿ ಹೆಚ್ಚಿನ ಸ್ಥಳವಿದೆ. ಇಂಜಿನ್ ಅನ್ನು ಕೆಳಗೆ ಇರಿಸಲಾಗುತ್ತದೆ ಮತ್ತು ಕ್ಯಾಬಿನ್ ನಲ್ಲಿ ಕೇವಲ ಅಪರೇಷನ್ ಸಿಸ್ಟಂ ಅನ್ನು ಮಾತ್ರ ಅಳವಡಿಸಲಾಗಿದೆ.

4 /10

ರೈಲ್ವೆ ಅಧಿಕಾರಿಗಳು ರೈಲನ್ನು ಪರಿಶೀಲಿಸುತ್ತಿರುವುದು.

5 /10

ಇದರಲ್ಲಿ ಜಿಪಿಎಸ್ ಬೇಸ್ಡ್ ಮಾಹಿತಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದರ ಸಹಾಯದಿಂದ ಪ್ರತಿ ಕ್ಷಣಕ್ಕೂ ಮಾಹಿತಿ ಪಡೆಯಬಹುದು. ರೈಲನ್ನು ಟ್ರೇಸ್ ಮಾಡಲು ಸುಲಭವಾಗುತ್ತದೆ.

6 /10

ಸಾಮಾನುಗಳನ್ನು ಇಡಲು ಅಲ್ಯೂಮಿನಿಯಂ ಲಗೇಜ್ ರ್ಯಾಕ್ ಗಳನ್ನೂ ಅಳವಡಿಸಲಾಗಿದೆ. ಇದು ಹೆಚ್ಚು ವಿಶಾಲವಾಗಿದೆ.

7 /10

ಈ ರೈಲಿನಲ್ಲಿ ಅಪರೇಷನ್ ಸಿಸ್ಟಂ ಹೊರತುಪಡಿಸಿ ಎಂಜಿನ್ ನ ಬಹುತೇಕ ಭಾಗವನ್ನು ರೈಲಿನ ಅಡಿಯಲ್ಲಿ ಅಳವಡಿಸಲಾಗಿದೆ. ಹೀಗಾಗಿಯೇ ಚಾಲಕ ಕ್ಯಾಬಿನ್ ವಿಶಾಲ ಜಾಗವನ್ನು ಪಡೆದಿದೆ.

8 /10

ಹೊರಗಿನಿಂದ MEMU ಟ್ರೈನ್ ಈ ರೀತಿ ಕಾಣುತ್ತದೆ.

9 /10

MEMU ಟ್ರೈನ್ ನಲ್ಲಿ ಆಸನವು ಮೊದಲಿಗಿಂತ ಹೆಚ್ಚು ಆರಾಮದಾಯಕವಾಗಿದೆ. ಆಂತರಿಕ ವಿನ್ಯಾಸವನ್ನು ಸುಧಾರಿಸಲಾಗಿದೆ. 

10 /10

MEMU ಟ್ರೈನ್ ನಲ್ಲಿ ಕಿಟಕಿಗಳು ಹೆಚ್ಚು ಸುರಕ್ಷಿತವಾಗಿವೆ.