1st October New Rule:ಅಕ್ಟೋಬರ್ 1 ರಿಂದ ಈ 6 ನಿಯಮಗಳು ಬದಲಾಗುತ್ತಿವೆ, ಆರ್ಥಿಕ ವಹಿವಾಟಿನ ಮೇಲೆ ನೇರ ಪ್ರಭಾವ

1st October New Rule:ಅಕ್ಟೋಬರ್ 1ರಿಂದ ದೇಶದಲ್ಲಿ ಹಣಕಾಸಿನ ವಹಿವಾಟು ಮತ್ತು ಷೇರು ಮಾರುಕಟ್ಟೆಗೆ ಸಂಬಂಧಿಸಿದ ಕೆಲವು ಪ್ರಮುಖ ಬದಲಾವಣೆಗಳು ನಡೆಯುತ್ತಿವೆ. ಈ ಹೊಸ ನಿಯಮಗಳು ಗ್ರಾಹಕರ ಮೇಲೆ ನೇರ ಪರಿಣಾಮ ಬೀರಲಿವೆ. 

1st October New Rule: ಅಕ್ಟೋಬರ್ 1ರಿಂದ ದೇಶದಲ್ಲಿ ಹಣಕಾಸಿನ ವಹಿವಾಟು ಮತ್ತು ಷೇರು ಮಾರುಕಟ್ಟೆಗೆ ಸಂಬಂಧಿಸಿದ ಕೆಲವು ಪ್ರಮುಖ ಬದಲಾವಣೆಗಳು ನಡೆಯುತ್ತಿವೆ. ಈ ಹೊಸ ನಿಯಮಗಳು ಗ್ರಾಹಕರ ಮೇಲೆ ನೇರ ಪರಿಣಾಮ ಬೀರಲಿವೆ. ಇದರಲ್ಲಿ, ಆಟೋ ಡೆಬಿಟ್ ನಿಯಮಗಳು, ಮೂರು ಬ್ಯಾಂಕ್‌ಗಳ (Banking Rules) ಚೆಕ್‌ಬುಕ್‌ಗಳ ಕೆಲಸ ಮಾಡದಿರುವಿಕೆ ಸೇರಿದಂತೆ ಹಲವು ನಿಯಮಗಳಿವೆ. ನೀವು ಉದ್ಯೋಗದಲ್ಲಿದ್ದರೆ ಅಥವಾ ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುತ್ತಿದ್ದರೆ, ಈ ನಿಯಮಗಳನ್ನು ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ. ಅಕ್ಟೋಬರ್ 1 ರಿಂದ ಯಾವ ನಿಯಮಗಳು ಬದಲಾಗಲಿವೆ ತಿಳಿದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ-Electric Mobility: ಕೇವಲ 25 ಪೈಸೆ ವೆಚ್ಚದಲ್ಲಿ ಚಲಿಸಲಿದೆ ಈ e-Scooter, 160 ಕಿ.ಮೀ ಡ್ರೈವಿಂಗ್ ರೇಂಜ್, ಕೇವಲ ರೂ.499 ಕೊಟ್ಟು ಬುಕ್ ಮಾಡಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಡೆಬಿಟ್/ಕ್ರೆಡಿಟ್ ಕಾರ್ಡ್ ಆಟೋ ಡೆಬಿಟ್ ನಿಯಮ (Debit And Credit Card Rule) - ಅಕ್ಟೋಬರ್ 1 ರಿಂದ, ನಿಮ್ಮ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ ಆಟೋ ಡೆಬಿಟ್ ನಿಯಮವು ಬದಲಾಗಲಿದೆ. ಆರ್‌ಬಿಐನ ಹೊಸ ನಿಯಮವು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ಬ್ಯಾಂಕುಗಳು ಅಥವಾ ಇತರ ಹಣಕಾಸು ಸಂಸ್ಥೆಗಳು ಡೆಬಿಟ್-ಕ್ರೆಡಿಟ್ ಕಾರ್ಡ್ ಅಥವಾ ಮೊಬೈಲ್ ವ್ಯಾಲೆಟ್ ಮೂಲಕ ರೂ. 5000 ಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಹೆಚ್ಚುವರಿ ಅಂಶ ದೃಡೀಕರಣವನ್ನು ಕೋರಬೇಕೆಂದು RBI ನಿಯಮ ಹೇಳುತ್ತದೆ. ಅಂದರೆ, ಇದೀಗ ಗ್ರಾಹಕರ ಅನುಮೋದನೆಯಿಲ್ಲದೆ ಬ್ಯಾಂಕ್ ನಿಮ್ಮ ಕಾರ್ಡ್‌ನಿಂದ ಹಣವನ್ನು ಡೆಬಿಟ್ ಮಾಡಲು ಸಾಧ್ಯವಿಲ್ಲ.

2 /6

ಈ ಮೂರು ಬ್ಯಾಂಕ್ ಗಳ ಚೆಕ್ ಬುಕ್ ಗಳು ನಿಷ್ಕ್ರೀಯಗೊಳ್ಳಲಿವೆ (Cheque Book Rule) - ಅಕ್ಟೋಬರ್ 1 ರಿಂದ 3 ಬ್ಯಾಂಕ್‌ಗಳ ಚೆಕ್ ಬುಕ್ ಮತ್ತು MICR ಕೋಡ್ ನಿಷ್ಕ್ರೀಯಗೊಳ್ಳಲಿವೆ. ಈ ಬ್ಯಾಂಕುಗಳಲ್ಲಿ ಅಲಹಾಬಾದ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಶಾಮೀಲಾಗಿವೆ. ಈ 3 ಬ್ಯಾಂಕುಗಳ ಗ್ರಾಹಕರಿಗೆ ಹೊಸ ಚೆಕ್ ಬುಕ್ ಗಳನ್ನು ಸೆಪ್ಟೆಂಬರ್ 30 ರೊಳಗೆ ನೀಡುವಂತೆ ಕೋರಲಾಗಿದೆ.

3 /6

ಡಿಮ್ಯಾಟ್ ಹಾಗೂ ಟ್ರೇಡಿಂಗ್ ಅಕೌಂಟ್ KYC ಅಪ್ಡೇಟ್ ಗಡುವು  - ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಗಳನ್ನು ಹೊಂದಿರುವ ಜನರು 30 ಸೆಪ್ಟೆಂಬರ್ 2021 ರ ಮೊದಲು ಕೆವೈಸಿ ವಿವರಗಳನ್ನು ಅಪ್‌ಡೇಟ್ ಮಾಡುವಂತೆ ಸೆಬಿ ಹೇಳಿದೆ. ಸೆಪ್ಟೆಂಬರ್ 30 ರ ಮೊದಲು ನೀವು ನಿಮ್ಮ ಖಾತೆಯಲ್ಲಿ KYC ಅನ್ನು ಅಪ್‌ಡೇಟ್ ಮಾಡದಿದ್ದರೆ, ಡಿಮ್ಯಾಟ್ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಮತ್ತು ಖಾತೆದಾರರಿಗೆ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು  ಸಾಧ್ಯವಾಗುವುದಿಲ್ಲ.

4 /6

ಡಿಮ್ಯಾಟ್ ಹಾಗೂ ಟ್ರೇಡಿಂಗ್ ಅಕೌಂಟ್ ಗಳಿಗೆ ನಾಮಿನೆಶನ್ ಕೊಡ ಮಾಡಿಸಬೇಕು (DMAT And Trading Account Rule) - ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಲು, ಇದೀಗ ಹೂಡಿಕೆದಾರರಿಗೆ ನಾಮಿನೇಷನ್ ಮಾಹಿತಿಯನ್ನು ನೀಡುವುದು ಅನಿವಾರ್ಯಗೊಳಿಸಲಾಗಿದೆ. ಒಂದು ವೇಳೆ ಹೂಡಿಕೆದಾರರು ನಾಮನಿರ್ದೇಶನವನ್ನು ನೀಡಲು ಬಯಸದಿದ್ದರೆ, ಅವರು ಅದರ ಬಗ್ಗೆ ಘೋಷಣಾ ನಮೂನೆಯನ್ನು ಭರ್ತಿ ಮಾಡಬೇಕಾಗುತ್ತದೆ. ಹೂಡಿಕೆದಾರರು ಇದನ್ನು ಮಾಡದಿದ್ದರೆ, ಅವರ ಟ್ರೇಡಿಂಗ್ ಮತ್ತು ಡಿಮ್ಯಾಟ್ ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ.

5 /6

ಫುಡ್ ಬುಸಿನೆಸ್ ನಲ್ಲಿರುವವರಿಗೆ ಈ ನಿಯಮ ಅನಿವಾರ್ಯ - ಆಹಾರ ಸುರಕ್ಷತಾ ನಿಯಂತ್ರಕ FSSAI ಫುಡ್ ಬಿಸಿನೆಸ್ ಆಪರೇಟರ್ ಗಳಿಗೆ FSSAI License ಸಂಖ್ಯೆ (FSSAI License Rule) ಅಥವಾ ನೋಂದಣಿ ಸಂಖ್ಯೆಯನ್ನು ನಗದು ರಸೀದಿ ಅಥವಾ ಖರೀದಿ ಚಲನ್‌ಗಳಲ್ಲಿ ನಮೂದಿಸುವುದನ್ನು ಕಡ್ಡಾಯಗೊಳಿಸಿದೆ. FSSAIನ ಈ ನಿಯಮವನ್ನು ಅನುಸರಿಸದಿದ್ದರೆ ಅದು ಆಹಾರ ವ್ಯವಹಾರದ ಕಡೆಯಿಂದ ಅನುಸರಿಸದಿರುವುದು ಮತ್ತು ಪರವಾನಗಿ ಅಥವಾ ನೋಂದಣಿಯ ರದ್ದತಿಯನ್ನು ಸೂಚಿಸುತ್ತದೆ ಎನ್ನಲಾಗಿದೆ.

6 /6

ಜೀವನ ಪ್ರಮಾಣಪತ್ರ ಜಮಾ ಆಗಲಿವೆ - ಅಕ್ಟೋಬರ್ 1 ರಿಂದ ನವೆಂಬರ್ 30, 2021 ರವರೆಗೆ, 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪಿಂಚಣಿದಾರರು ತಮ್ಮ ಡಿಜಿಟಲ್ ಜೀವನ ಪ್ರಮಾಣಪತ್ರಗಳನ್ನು ದೇಶದ ಅಂಚೆ ಕಚೇರಿಗಳ ಜೀವನ್ ಪ್ರಮಾಣ ಕೇಂದ್ರಗಳಲ್ಲಿ ಸಲ್ಲಿಸಬಹುದು. ಜೀವನ್ ಪ್ರಮಾಣವು ಪಿಂಚಣಿದಾರರು ಜೀವಂತವಾಗಿದ್ದಾರೆ ಎಂಬುದಕ್ಕೆ ಪುರಾವೆಯಾಗಿದೆ. ಪಿಂಚಣಿ ಪಡೆಯಲು, ಪಿಂಚಣಿದಾರರು ಪ್ರತಿ ವರ್ಷ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ ಈ ಪ್ರಮಾಣಪತ್ರವನ್ನು ಸಲ್ಲಿಸಬೇಕು.