Nothing Phone 2 launch: ಕಳೆದ ವರ್ಷ ನಥಿಂಗ್ ಫೋನ್ 1 (Nothing Phone 1) ಸ್ಮಾರ್ಟ್‌ಫೋನ್ ಬಿಡುಗಡೆಯಾಗಿತ್ತು. ಇದೀಗ ತನ್ನ 2ನೇ ಫೋನ್ ಬಿಡುಗಡೆಗೆ ನಥಿಂಗ್ ಕಂಪನಿ ಸಿದ್ಧವಾಗಿದೆ.
Nothing Phone 2 launch: ಕಳೆದ ವರ್ಷ ನಥಿಂಗ್ ಫೋನ್ 1 (Nothing Phone 1) ಸ್ಮಾರ್ಟ್‌ಫೋನ್ ಬಿಡುಗಡೆಯಾಗಿತ್ತು. ಇದೀಗ ತನ್ನ 2ನೇ ಫೋನ್ ಬಿಡುಗಡೆಗೆ ನಥಿಂಗ್ ಕಂಪನಿ ಸಿದ್ಧವಾಗಿದೆ. ಮಂಗಳವಾರ ಸಂಜೆ 8.30ಕ್ಕೆ ನಥಿಂಗ್ ಫೋನ್ 2 ಲಾಂಚ್ ಈವೆಂಟ್ ಯೂಟ್ಯೂಬ್ ಸೇರಿದಂತೆ ಕಂಪನಿಯ ಅಧಿಕೃತ ಸೋಷಿಯಲ್ ಮೀಡಿಯಾ ಹ್ಯಾಂಡಲ್‍ಗಳಲ್ಲಿ ಲೈವ್-ಸ್ಟ್ರೀಮ್ ಆಗಲಿದೆ. ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ನಥಿಂಗ್ ಫೋನ್ 2 ಅನಾವರಣಗೊಳ್ಳಲಿದೆ. ಇದರ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಥಿಂಗ್ ಫೋನ್ 2 ಹಿಂದಿನ ಫೋನ್‍ಗಿಂತಲೂ ಇದು ಸಾಕಷ್ಟು ಸ್ಟೈಲಿಶ್ ಹಾಗೂ ಬಲಿಷ್ಠವಾಗಿರಲಿದೆ ಎಂದು ಹೇಳಲಾಗಿದೆ. ಇದರಲ್ಲಿ ನೂತನ ಪ್ರೊಸೆಸರ್ ನೀಡುವ ಸಾಧ್ಯತೆ ಇದ್ದು, ಕ್ಯಾಮೆರಾದಲ್ಲಿ ಅನೇಕ ಬದಲಾವಣೆ ನಿರೀಕ್ಷಿಸಲಾಗಿದೆ. ಬಿಡುಗಡೆಗೆ ಮುಂಚಿತವಾಗಿ ಕಂಪನಿಯು ಫೋನ್‍ನ ಹೊಸ ವಿನ್ಯಾಸ ಮತ್ತು ಭಾಷೆಯನ್ನು ಅನಾವರಣಗೊಳಿಸಿದೆ. ಇದು ಸ್ವಲ್ಪ ತೆಳುವಾದ ಫ್ರೇಮ್ ಮತ್ತು ಸುಧಾರಿತ ಗ್ಲಿಫ್ ಲೈಟಿಂಗ್ ಒಳಗೊಂಡಿದೆ. ಹಿಂದಿನ ಫೋನ್‍ಗೆ ಹೋಲಿಸಿದರೆ ಹೆಚ್ಚು symmetrical ವಿನ್ಯಾಸ ಹೊಂದಿದೆ ಎಂದು ಹೇಳಲಾಗುತ್ತದೆ. ಈ ಬಾರಿ ಫೋನಿನ ಹಿಂಭಾಗದಲ್ಲಿ ಬರೋಬ್ಬರಿ 33 LED ಲೈಟ್ ಅಳವಡಿಸಲಾಗಿದೆ ಎಂದು ವರದಿಯಾಗಿದೆ.
ನಥಿಂಗ್ ಫೋನ್ 2 ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen 1 SoC ಮೂಲಕ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ಹಿಂದಿನ ಆವೃತ್ತಿಯಲ್ಲಿ ಸ್ನಾಪ್‌ಡ್ರಾಗನ್ 778G+ ಪ್ರೊಸೆಸರ್ ನೀಡಲಾಗಿತ್ತು. ಇದು 6.67 ಇಂಚಿನ OLED ಡಿಸ್‌ಪ್ಲೇ ಹೊಂದಿರಲಿದ್ದು, 120Hz ರಿಫ್ರೆಶ್ ರೇಟ್ ನೀಡಲಿದೆ ಎಂದು ತಿಳಿದುಬಂದಿದೆ.
ಇದು 128GB, 256GB ಮತ್ತು 512GB ಜೊತೆಗೆ 8GB ಅಥವಾ 12GB RAM ಹೊಂದಿರುವ ಸಾಧ್ಯತೆ ಇದೆ. ಗ್ಲಿಫ್ ಕಂಪೋಸರ್‌ನಂತಹ ಕಸ್ಟಮ್ ಫಸ್ಟ್-ಪಾರ್ಟಿ ಅಪ್ಲಿಕೇಶನ್‌ಗಳೊಂದಿಗೆ ಆಂಡ್ರಾಯ್ಡ್ 13 OSನೊಂದಿಗೆ ಈ ಫೋನ್ ರನ್ ಆಗಲಿದೆ.
ಈ ಫೋನ್ ಡ್ಯುಯೆಲ್ ಕ್ಯಾಮೆರಾ ರಚನೆ ಹೊಂದಿರಲಿದೆ. ಈ ಫೋನಿನ ಹಿಂಭಾಗದಲ್ಲಿ 2 ಕ್ಯಾಮೆರಾಗಳಿರಲಿದ್ದು, ಈ ಎರಡೂ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿರಲಿವೆ. ಇದು ಸೋನಿ IMX890 ಸೆನ್ಸಾರ್ ಹೊಂದಿರಲಿದೆ ಅಂತಾ ವರದಿಯಾಗಿದೆ. ಕೆಲ ವರದಿಯ ಪ್ರಕಾರ ಈ ಫೋನಿನಲ್ಲಿ 3 ಕ್ಯಾಮೆರಾ ಇರಲಿದೆ ಎಂದು ಹೇಳಲಾಗಿದೆ. ಅದರಂತೆ ಮುಂಭಾಗದ ಸೆಲ್ಪಿ ಮತ್ತು ವಿಡಿಯೋ ಕರೆಗಳಿಗಾಗಿ ಸೋನಿ IMX615 ಸೆನ್ಸಾರ್‍ನ 32 ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆಯಂತೆ. ನಥಿಂಗ್ ಫೋನ್ 2 4700mAh ಸಾಮರ್ಥ್ಯದ ಬ್ಯಾಟರಿ ಹೊಂದಿರಲಿದ್ದು, ಫಾಸ್ಟ್ ಚಾರ್ಜಿಂಗ್ ಬೆಂಬಲವಿರಲಿದೆ.
ನಥಿಂಗ್ ಫೋನ್ 1 ಬೆಲೆಯು ಬಿಡುಗಡೆ ವೇಳೆ 30 ಸಾವಿರ ಇತ್ತು. ನಂತರ ಅದರ ಬೆಲೆ ಕಡಿಮೆಯಾಗಿತ್ತು. ನಥಿಂಗ್ ಫೋನ್ 2ನ ಬೆಲೆ ಸುಮಾರು 40 ಸಾವಿರ ರೂ.ವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. 5G ಸಪೋರ್ಟ್ ಹೊಂದಿರುವ ಈ ಫೋನ್ ಬಿಳಿ ಮತ್ತು ಬೂದು 2 ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಈ ಸ್ಮಾರ್ಟ್‌ಫೋನ್ ಈಗಾಗಲೇ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‍ನಲ್ಲಿ Pre-orderಗೆ ಲಭ್ಯವಿದೆ.