Oppo Reno8: ಭಾರತದಲ್ಲಿ ಒಪ್ಪೋ 8 ರೆನೋ ಸರಣಿ ಬಿಡುಗಡೆ, ಬೆಲೆ & ವೈಶಿಷ್ಟ್ಯಗಳನ್ನು ತಿಳಿಯಿರಿ

ಭಾರತೀಯ ಮಾರುಕಟ್ಟೆಗೆ ಬಹುನಿರೀಕ್ಷಿತ ಒಪ್ಪೋ 8 ರೆನೋ ಸರಣಿಯ ಸ್ಮಾರ್ಟ್‍ಫೋನ್ ಬಿಡುಗಡೆಯಾಗಿದೆ. ಹೊಸ ಫೋನ್ ಕೊಳ್ಳಲು ಗ್ರಾಹಕರು ಕ್ಯೂ ಹಚ್ಚಿದ್ದಾರೆ. ಇದರ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ನವದೆಹಲಿ: ನವದೆಹಲಿ: OPPO ಸೋಮವಾರ ತನ್ನ ಇತ್ತೀಚಿನ Reno ಸರಣಿಯ ಸ್ಮಾರ್ಟ್‍ಫೋನ್‍ ಬಿಡುಗಡೆ ಮಾಡಿದೆ. ಭಾರತೀಯ ಮಾರುಕಟ್ಟೆಯಲ್ಲಿ OPPO Reno8 Pro 5G ಸ್ಮಾರ್ಟ್‍ಫೋನ್‍ಗೆ 45,999 ರೂ. ಮತ್ತು OPPO Reno8 5G ಸ್ಮಾರ್ಟ್‍ಫೋನ್‍ಗೆ 29,999 ರೂ. ಬೆಲೆ ನಿಗದಿಪಡಿಸಲಾಗಿದೆ. ಸ್ಮಾರ್ಟ್‍ಫೋನ್‍ ಮಾತ್ರವಲ್ಲದೆ ಒಪ್ಪೋ ಪ್ಯಾಡ್ ಏರ್(Oppo Pad Air), ಭಾರತದಲ್ಲಿಯೇ ಮೊದಲ OPPO ಟ್ಯಾಬ್ಲೆಟ್ ಮತ್ತು Oppo Enco X2 ಟ್ರೂಲಿ ವೈರ್‌ಲೆಸ್ ಇಯರ್‌ಬಡ್‌ಗಳನ್ನು ಸಹ ರಿಲೀಸ್ ಮಾಡಿದೆ. OPPOದ ಹೊಸ ಉತ್ಪನ್ನಗಳ ವೈಶಿಷ್ಟ್ಯಗಳು ಮತ್ತು ಬೆಲೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

OPPO Reno8 Pro 5G ಸ್ಮಾರ್ಟ್‍ಪೋನ್ ಮೆರುಗುಗೊಳಿಸುವ ಹಸಿರು ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಿದೆ. Gorilla Glass 5 backನೊಂದಿಗೆ ಸುವ್ಯವಸ್ಥಿತ Unibody Design ಮತ್ತು ಹೆಚ್ಚುವರಿ ಬಾಳಿಕೆಗಾಗಿ ಅಲ್ಯೂಮಿನಿಯಂ ಫ್ರೇಮ್ ಒಳಗೊಂಡಿದೆ. ಈ ಫೋನ್ ಅಕ್ಟಾ-ಕೋರ್ MediaTek ಡೈಮೆನ್ಸಿಟಿ 8100-MAX SoC ಪ್ರೊಸೆಸರ್ ಬಲವನ್ನು ಹೊಂದಿದೆ. 4500mAH ಸಾಮರ್ಥ್ಯದ ಬ್ಯಾಟಿರಿಯನ್ನು ಹೊಂದಿರುವ ಈ ಫೋನ್ 80W SUPERVOOC TM ಸೂಪರ್ ಫ್ಲ್ಯಾಶ್ ವೇಗದ ಚಾರ್ಚಿಂಗ್ ಬೆಂಬಲಿಸುತ್ತದೆ. 6.7 ಇಂಚಿನ ಫುಲ್ ಎಚ್‍ಡಿ+ಅಮೋಲೆಡ್ ಡಿಸ್‍ಪ್ಲೇಯನ್ನು ಹೊಂದಿದೆ. ಈ ಡಿಸ್‍ಪ್ಲೇ 1,080X2412 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಈ ಫೋನಿನ ಡಿಸ್‍ಪ್ಲೇ HDR10+ ಬೆಂಬಲ, SGS ಲೋ ಮೋಷನ್ ಬ್ಲರ್, SGS ಮೋ ಬ್ಲೂ ಲೈಟ್, ಅಮೆಜಾನ್ HDR ಪ್ರಮಾಣೀಕರಣ ಮತ್ತು ನೆಟ್‍ಫ್ಲಿಕ್ಸ್ HD ಪ್ರಮಾಣೀಕರವಣವನ್ನು ಹೊಂದಿದೆ. 256GB ಸ್ಟೋರೇಜ್, 12GB RAM ಹೊಂದಿರುವ ಈ ಫೋನ್  32MP ನ್ಯಾಪ್ ಕ್ಯಾಮೆರಾದೊಂದಿಗೆ 2MP ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ColorOS 12.1 OSನಲ್ಲಿ ಇದು ಕಾರ್ಯನಿರ್ವಹಿಸುತ್ತದೆ.

2 /4

OPPO Reno 8 ಸ್ಮಾರ್ಟ್‍ಫೋನ್ 6.43 ಇಂಚಿನ FULL HD ಡಿಸ್‍ಪ್ಲೇ ಹೊಂದಿದೆ. ಈ ಡಿಸ್‍ಪ್ಲೇ 1,080X2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಒಳಗೊಂಡಿದೆ. ಆಕ್ಟಾ-ಕೋರ್ MediaTek ಡೈಮೆನ್ಸಿಟಿ 1300 Soc ಪ್ರೊಸೆಸರ್ ಬಲವನ್ನು ಹೊಂದಿರುತ್ತದೆ. ಇದು Android Color OS 12.1ರ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರುವ ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2ನೇ ಕ್ಯಾಮೆರಾ 2 ಮೆಗಾಪಿಕ್ಸೆಲ್  ಮ್ಯಾಕ್ರೋ ಕ್ಯಾಮೆರಾ ಮತ್ತು 3ನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾವನ್ನು ಹೊಂದಿದೆ. 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಒಪ್ಪೋ ರೆನೋ 8 ಸ್ಮಾರ್ಟ್‍ಫೋನ್ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 80W ಸೂಪರ್ ಫ್ಲ್ಯಾಶ್ ಚಾರ್ಜ್ ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಈ ಸ್ಮಾರ್ಟ್‍ಫೋನ್ 8GB RAM+128GB ಸ್ಟೋರೇಜ್ ಆಯ್ಕೆಯೊಂದಿಗೆ ಲಭ್ಯವಿದೆ.

3 /4

19 ಜುಲೈ 2022 ಅಂದರೆ ಇಂದಿನಿಂದ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿರುವ Reno8 Pro 5G ಸ್ಮಾರ್ಟ್‍ಫೋನ್ 45,999 ರೂ.ಗೆ ಲಭ್ಯವಿರುತ್ತದೆ. Reno8 5G ಸ್ಮಾರ್ಟ್‍ಫೋನ್‍ 25 ಜುಲೈ 2022 ರಿಂದ ಮಾರಾಟಕ್ಕೆ ಲಭ್ಯವಿರಲಿದ್ದು, 29,999 ರೂ. ದರ ನಿಗದಿಪಡಿಸಲಾಗಿದೆ. ಈ 2 ಉತ್ಪನ್ನಗಳು ಫ್ಲಿಪ್‌ಕಾರ್ಟ್, OPPO ಸ್ಟೋರ್‌ಗಳು ಮತ್ತು ಮುಖ್ಯ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಲಭ್ಯವಿರುತ್ತವೆ.

4 /4

Reno8 ಸರಣಿಯ ಸ್ಮಾರ್ಟ್‍ಫೋನ್‍ ಜೊತೆಗೆ OPPO ಕಂಪನಿಯು OPPO Pad Air ಅನ್ನು ಬಿಡುಗಡೆಗೊಳಿಸಿದೆ. 4 GB+64GB ಆವೃತ್ತಿಗೆ 16,999 ರೂ. ಮತ್ತು 4GB +128GB ಆವೃತ್ತಿಗೆ 19,999 ರೂ. ಬೆಲೆ ನಿಗದಿಪಡಿಸಲಾಗಿದೆ ಬಿಡುಗಡೆ ಮಾಡಿದೆ. ಇದು OPPOದ ಮೊದಲ ಟ್ಯಾಬ್ಲೆಟ್ ಆಗಿದೆ. ಇದು AI ಸಿಸ್ಟಮ್ ಬೂಸ್ಟರ್ 2.1 ಮತ್ತು RAM ವಿಸ್ತರಣೆ ತಂತ್ರಜ್ಞಾನದೊಂದಿಗೆ Power-Efficient '6nm' ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್ ಒಳಗೊಂಡಿರುವ ವಿಭಾಗದಲ್ಲಿ ಮೊದಲ ಸಾಧನವಾಗಿದೆ.  OPPO Tablet and OPPO Pad Air ವಿಶೇಷಣಗಳು 10.36-ಇಂಚಿನ (2,000x1,200px) 2K IPS ಪರದೆ | Power-Efficient '6nm' ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್ | 64/128GB ಸ್ಟೋರೇಜ್, 4GB RAM | ColorOS 12.1 ಹೊಂದಿದೆ.