ರಾಗಿ ಸೇವನೆಯು ಅನೇಕ ರೋಗಗಳನ್ನು ಶಮನ ಮಾಡುತ್ತದೆ ಎಂದು ಹೇಳಿದರೂ ಸಹ ಕೆಲವು ಆರೋಗ್ಯ ಸಮಸ್ಯೆ ಉಳ್ಳವರು ಸೇವನೆ ಮಾಡಬಾರದು. ಅಂತಹ ಸಮಸ್ಯೆಗಳ ಬಗ್ಗೆ ಇಲ್ಲಿ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ.
ರಾಗಿ ಧಾನ್ಯವು ನಾರಿನಂಶ ಮತ್ತು ಕಬ್ಬಿಣದಂಶದಿಂದ ಸಮೃದ್ಧವಾಗಿದೆ. ಇನ್ನು ರಾಗಿಯು ಆರೋಗ್ಯಕರ ಎಂದು ಸಾಬೀತಾಗಿದೆ. ಆದರೆ ಕೆಲವು ಆರೋಗ್ಯ ಸಮಸ್ಯೆ ಉಳ್ಳವರು ರಾಗಿಯನ್ನು ಸೇವಿಸಲೇ ಬಾರದು.
ರಾಗಿ ತಿಂದರೆ ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತವೆ.
ಥೈರಾಯ್ಡ್ ಸಮಸ್ಯೆಗಳಿದ್ದರೆ ಸಹ ರಾಗಿಯನ್ನು ಸೇವನೆ ಮಾಡಬಾರದು
ಜೀರ್ಣಾಂಗವ್ಯೂಹ ಸಮಸ್ಯೆ ಉಳ್ಳವರು ರಾಗಿ ತಿನ್ನಬಾರದು
ಚಳಿಗಾಲದಲ್ಲಿ ರಾಗಿ ತಿನ್ನದಿರುವುದು ಒಳಿತು.
ಇನ್ನು ರಾಗಿ ಹೆಚ್ಚಾಗಿ ತಿಂದರೆ ಅತಿಸಾರ ಅಥವಾ ಮಲಬದ್ಧತೆ ಸಮಸ್ಯೆ ಉಂಟು ಮಾಡಬಹುದು. ಹೀಗಾಗಿ ಮಿತಿಯಲ್ಲಿ ಸೇವಿಸಿ
ಅನೊರೆಕ್ಸಿಯಾ ಸಮಸ್ಯೆ ಉಳ್ಳವರು ಸಹ ರಾಗಿ ಸೇವನೆಯಿಂದ ದೂರವಿರಬೇಕು.
ಇನ್ನೊಂದು ಮುಖ್ಯ ವಿಚಾರವೆಂದರೆ, ತೂಕ ಇಳಿಸಲು ಇಚ್ಛಿಸುವ ಜನರು ರಾಗಿ ಸೇವನೆ ಮಾಡಬಾರದು.