ಜ್ಯೋತಿಷ್ಯದ ಸಹಾಯದಿಂದ, ಯಾವುದೇ ವ್ಯಕ್ತಿಯ ರಾಶಿಚಕ್ರದ ಚಿಹ್ನೆಯ ಮೂಲಕ ಅವರ ಗುಣ ನಡತೆಗಳನ್ನು ತಿಳಿದುಕೊಳ್ಳಬಹುದು.
ನವದೆಹಲಿ : ಜ್ಯೋತಿಷ್ಯದ ಸಹಾಯದಿಂದ, ಯಾವುದೇ ವ್ಯಕ್ತಿಯ ರಾಶಿಚಕ್ರದ ಚಿಹ್ನೆಯ ಮೂಲಕ ಅವರ ಗುಣ ನಡತೆಗಳನ್ನು ತಿಳಿದುಕೊಳ್ಳಬಹುದು. ರಾಶಿಗನುಗುಣವಾಗಿ ಕೆಲವರು ಕೋಪ ಸ್ವಭಾವದವರಾಗಿದ್ದರೆ, ಇನ್ನು ಕೆಲವರು ಶಾಂತ ಸ್ವಭಾವದವರಾಗಿರುತ್ತಾರೆ. ಕೆಲವರು ತಮ್ಮ ಮಾತಿನಿಂದಲೇ ಎದುರಿಗಿರುವವರನ್ನು ಚುಚ್ಚಿ ಕೊಂದು ಬಿಡುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, 5 ರಾಶಿಚಕ್ರದ ಜನರಲ್ಲಿ ಈ ಸಮಸ್ಯೆ ಸಾಮಾನ್ಯವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಮೇಷ ರಾಶಿಯ ಜನರು ಹೃದಯವಂತರಾಗಿರುತ್ತಾರೆ. ಆದರೆ ಅವರಿಗೆ ಬಹಳ ಬೇಗ ಕೋಪ ಬರುತ್ತದೆ. ಇವರೊಂದಿಗೆ ಯಾರಾದರೂ ಕೆಟ್ಟದಾಗಿ ನಡೆದುಕೊಂಡರೆ, ಬಹಳ ಬೇಗ ತಮ್ಮ ತಾಳ್ಮೆ ಕಳೆದುಕೊಂಡು ಬಿಡುತ್ತಾರೆ. ಯಾರೊಂದಿಗೆ ವಾದ ಮಾಡುವುದಕ್ಕೂ ಇವರು ಹಿಂಜರಿಯುವುದಿಲ್ಲ.
ವೃಷಭ ರಾಶಿಯ ಜನರು ತುಂಬಾ ಕರುಣಾಮಯಿ, ಬುದ್ಧಿವಂತರು ಮತ್ತು ಅನಗತ್ಯ ವಾದಗಳಿಗೆ ಸಿಲುಕುವುದಿಲ್ಲ. ಆದರೆ ಅವರಿಗೆ ಕೋಪ ಬಂತೆಂದರೆ ಅವರನ್ನು ನಿಭಾಯಿಸಲು ತುಂಬಾ ಕಷ್ಟವಾಗುತ್ತದೆ. ಈ ರಾಶಿಯವರ ಸಿಟ್ಟು ತಣ್ಣಗಾಗಲು ಬಹಳ ಸಮಯ ಹಿಡಿಯುತ್ತದೆ. ಕೋಪದ ಭರದಲ್ಲಿ ಎದುರಿಗಿರುವವರ ಮನಸ್ಸಿಗೆ ನೋವುಂಟು ಮಾಡುವ ಮಾತುಗಳನ್ನಾಡಿ ಬಿಡುತ್ತಾರೆ.
ಮಿಥುನ ರಾಶಿಯವರಿಗೂ ಕೋಪ ಬಹು ಬೇಗ ಬರುತ್ತದೆ. ಅವರು ಎಲ್ಲವನ್ನೂ ತಮ್ಮದೇ ಆದ ಮ್ಮ ಮಾತಿನಂತೆಯೇ ಎಲ್ಲವೂ ನಡೆಯಬೇಕು ಎಂದು ಈ ರಾಶಿಯವರು ಬಯಸುತ್ತಾರೆ. ಹೀಗಾಗದೆ ಹೋದಾಗ ಕೋಪಗೊಳ್ಳುತ್ತಾರೆ, ಜಗಳಕ್ಕೆ ನಿಲ್ಲುತ್ತಾರೆ.
ತುಲಾ ರಾಶಿಯ ಜನರು ಸಮತೋಲಿತ ರೀತಿಯಲ್ಲಿ ವರ್ತಿಸುತ್ತಾರೆ ಆದರೆ ಕೆಲವೊಮ್ಮೆ ತುಂಬಾ ಕೋಪಗೊಳ್ಳುತ್ತಾರೆ. ಈ ರಾಶಿಯವರು ಕೋಪಗೊಂಡಾಗ ಅವರಿಂದ ದೂರ ಉಳಿಯುವುದು ಉತ್ತಮ. ಆದರೂ ಈ ರಾಶಿಯವರ ಕೋಪ ಬಹು ಬೇಗ ಕರಗುತ್ತದೆ.
ವೃಶ್ಚಿಕ ರಾಶಿಯ ಜನರು ಹೆಚ್ಚು ಕೋಪಗೊಳ್ಳುತ್ತಾರೆ. ಇವರಿಗೆ ಕೋಪ ಬಂದರೆ ಯಾರ ಮಾತನ್ನೂ ಕೇಳುವುದಿಲ್ಲ. ಕೋಪದಲ್ಲಿ, ಅವರು ಯಾರ ಮಾತನ್ನೂ ಕೇಳುವುದಿಲ್ಲ. ಕೋಪದ ಕೈಗೆ ಬುದ್ದಿ ಕೊಟ್ಟು ಎದುರಿಗಿರುವವರನ್ನು ಅವಮಾನಿಸಿ ಬಿಡುತ್ತಾರೆ.