ಕೊರೊನಾ ವೈರಸ್ ಗೆ ಸಂಬಂಧಿಸಿದ ಹಲವು ಫೋಟೋಗಳು ಇದೀಗ ಸಾಮಾಜಿಕ ಮಾಧ್ಯಮಗಳ ಮೇಲೆ ಸಕತ್ ವೈರಲ್ ಆಗುತ್ತಿವೆ. ಈ ನಡುವೆ ಹಾಲಿವೂದ್ ಬೆಡಗಿಯರು ಹಂಚಿಕೊಳ್ಳುತ್ತಿರುವ ಕೆಲ ಬೋಲ್ಡ್ ಫೋಟೋಗಳು ಕೂಡ ಇಂಟರ್ನೆಟ್ ಮೇಲೆ ಹೀಟೆಕ್ಕಿಸುತ್ತಿವೆ.
ನವದೆಹಲಿ: ಕೊರೊನಾ ವೈರಸ್ ಮಹಾಮಾರಿಯ ಹಿನ್ನೆಲೆ ವಿಶ್ವಾದ್ಯಂತ ಭೀತಿಯ ವಾತಾವರಣ ಮನೆಮಾಡಿದೆ. ಏತನ್ಮಧ್ಯೆ ಖ್ಯಾತ ಹಾಲಿವುಡ್ ಗಾಯಕಿ ಪೆರಿ ಎಡ್ವರ್ಡ್ ಕೂಡ ಸೆಲ್ಫ್ ಐಸೋಲೆಶನ್ ಮೇಲಿದ್ದಾರೆ. ಪೆರಿ ಎಡ್ವರ್ಡ್ ಸಾಮಾಜಿಕ ಮಾಧ್ಯಮವಾಗಿರುವ ಇನ್ಸ್ಟಾಗ್ರಾಮ್ ಮೇಲೆ ಸಕತ್ ಸಕ್ರೀಯರಾಗಿರುತ್ತಾಳೆ ಹಾಗೂ ನಿತ್ಯ ತನ್ನ ಲೇಟೆಸ್ಟ್ ಫೋಟೋಗಳನ್ನು ತನ್ನ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾಳೆ. ಇತ್ತೀಚೆಗಷ್ಟೇ ಪೆರಿ ಎಡ್ವರ್ಡ್ ಹಂಚಿಕೊಂಡಿರುವ ಕೆಲ ಭಾವಚಿತ್ರಗಳು ಸಾಮಾಜಿಕ ಮಾಧ್ಯಮದ ಮೇಲೆ ಸಕತ್ ಹವಾ ಸೃಷ್ಟಿಸಿವೆ. ಈ ಫೋಟೋಗಳಲ್ಲಿ ಪೆರಿ ತುಂಬಾ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾಳೆ.
ಸುದ್ದಿ ಸಂಸ್ಥೆ IANS ನಲ್ಲಿ ಪ್ರಕಟವಾಗಿರುವ ವರದಿಯೊಂದರ ಪ್ರಕಾರ COVID-19 ಹಾವಳಿಯ ಹಿನ್ನೆಲೆ ಸದ್ಯ ಪೆರಿ ಐಸೋಲೆಶನ್ ನಲ್ಲಿದ್ದು, ತನ್ನ ಬಾಯ್ ಫ್ರೆಂಡ್ ಹಾಗೂ ಲಿವರ್ಪೂಲ್ ನ ಮಿಡ್ ಈಏಳ್ಡೇ ಅಲೆಕ್ಸ್ ಒಕ್ಸಲೆಡ್ ಚೇಂಬರ್ಲೀನ್ ಗಾಗಿ ನಿರಂತರ ಅಡುಗೆ ತಯಾರಿಸುತ್ತಿದ್ದಾಳೆ ಎಂದು ಹೇಳಿಕೊಂಡಿದ್ದಾಳೆ. ಸದ್ಯ ಈ ಗಾಯಕಿ ತನ್ನ ಪಾಲಿಗೆ ಓರ್ವ ಹೌಸ್ ವೈಫ್ ಭೂಮಿಕೆಯಲ್ಲಿ ನೋಡುತ್ತಿರುವುದಾಗಿ ಹೇಳಿದ್ದಾಳೆ. ಕಳೆದ ಒಂದು ವರ್ಷದಿಂದ ಪೆರಿ ತನ್ನ ಪೂಟ್ಬಾಲರ್ ಗೆಳೆಯನ ಜೊತೆಗೆ ಕಾಲ ಕಳೆಯುತ್ತಿದ್ದು, ಅವನ ಜೊತೆಗಿನ ತನ್ನ ಸಂಬಂಧವನ್ನು ಬಹಿರಂಗಪಡಿಸಿದ್ದಾಳೆ. COVID-19 ಮಹಾಮಾರಿಯ ಪ್ರಸಾರ ತಡೆಗಟ್ಟುವ ನಿಟ್ಟಿನಲ್ಲಿ ಸದ್ಯ ಈ ಉಬಯರು ತಮ್ಮ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಅಷ್ಟೇ ಅಲ್ಲ ಹಲವು ರೀತಿಯ ಆಹಾರ ಪದಾರ್ಥಗಳನ್ನು ತಯಾರಿಸಿ ಅಸ್ವಾದಿಸುತ್ತಿದ್ದಾರೆ.