Personality Test: ಜನವರಿಯಿಂದ ಡಿಸೆಂಬರ್ ವರೆಗೆ ಯಾವ ತಿಂಗಳಿನಲ್ಲಿ ಹುಟ್ಟಿದವರ ಸ್ವಭಾವ-ವ್ಯಕ್ತಿತ್ವ ಹೇಗೆ?

Secrets Of Personality: ಜನವರಿಯಿಂದ ಡಿಸೆಂಬರ್ ಅವಧಿಯವರೆಗೆ ಹಲವು ದಿನಗಳನ್ನು ಶುಭ ದಿನಗಳು ಎಂದು ಭಾವಿಸಲಾಗುತ್ತದೆ. 12 ತಿಂಗಳಿನಲ್ಲಿ ಯಾವ ತಿಂಗಳಿನಲ್ಲಿ ಜನಿಸಿದ ಜನರು ತುಂಬಾ ಲಕ್ಕಿಯಗಿರುತ್ತಾರೆ ಎಂಬುದನ್ನು ಜೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ. 

Secrets Of Personality: ಜನವರಿಯಿಂದ ಡಿಸೆಂಬರ್ ಅವಧಿಯವರೆಗೆ ಹಲವು ದಿನಗಳನ್ನು ಶುಭ ದಿನಗಳು ಎಂದು ಭಾವಿಸಲಾಗುತ್ತದೆ. 12 ತಿಂಗಳಿನಲ್ಲಿ ಯಾವ ತಿಂಗಳಿನಲ್ಲಿ ಜನಿಸಿದ ಜನರು ತುಂಬಾ ಲಕ್ಕಿಯಗಿರುತ್ತಾರೆ ಎಂಬುದನ್ನು ಜೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ. ಇದಲ್ಲದೆ, ಜನರು ಹುಟ್ಟಿದ ತಿಂಗಳಿಗೆ ಅನುಗುಣವಾಗಿ ಆ ವ್ಯಕ್ತಿಗಳ ಸ್ವಭಾವ-ವ್ಯಕ್ತಿತ್ವದ ಕುರಿತು ಕೂಡ ಉಲ್ಲೇಖಿಸಲಾಗಿದೆ. ಹಾಗಾದರೆ ಬನ್ನಿ ಯಾವ ತಿಂಗಳಿನಲ್ಲಿ ಹುಟ್ಟಿದ ಜನರ ಸ್ವಭಾವ-ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ-Pitru Paksha 2022: ಇಂದಿನಿಂದ ಪಿತೃಪಕ್ಷ ಆರಂಭ, ಈ ತಪ್ಪುಗಳನ್ನು ಮಾಡ್ಬೇಡಿ, ಮುಹೂರ್ತಗಳ ವಿವರ ಇಲ್ಲಿದೆ

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /12

1. ಜನವರಿ (JANUARY)- ಜನವರಿಯಲ್ಲಿ ಜನಿಸಿದ ಜನರು ಅದ್ಭುತ ಹಾಸ್ಯ ಪ್ರಜ್ಞೆಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಅವರು ಹೊಸ ಜನರೊಂದಿಗೆ ಬೇಗನೆ ಸಂಪರ್ಕ ಸಾಧಿಸುತ್ತಾರೆ. ಇದಲ್ಲದೆ, ಅವರು ಯಾವುದೇ ಪರಿಸರದಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಳ್ಳಲು ಸಮರ್ಥರಾಗಿದ್ದಾರೆ. ಈ ಜನರು ವಿಶಿಷ್ಟ ಆಲೋಚನೆಗಳನ್ನು ಹೊಂದಿದ್ದಾರೆ. ಅಲ್ಲದೆ, ಈ ಜನರು ತಮ್ಮ ಕೆಲಸದ ಸ್ಥಳದಲ್ಲಿ ನಾಯಕತ್ವದ ಪಾತ್ರವನ್ನು ಹೊಂದಿರುತ್ತಾರೆ.

2 /12

2. ಫೆಬ್ರವರಿ (FEBRUARY) - ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಫೆಬ್ರವರಿಯಲ್ಲಿ ಜನಿಸಿದವರು ತುಂಬಾ ಅದೃಷ್ಟವಂತರು. ಈ ತಿಂಗಳಲ್ಲಿ ಜನಿಸಿದವರು ಹೆಚ್ಚು ಕಷ್ಟಪಡಬೇಕಾಗಿಲ್ಲ ಎಂದು ಹೇಳಲಾಗುತ್ತದೆ. ಅದೃಷ್ಟದಿಂದ, ಇವರು ಯಾವಾಗಲೂ ಹುಡುಕುತ್ತಿರುವ ಎಲ್ಲಾ ಸಂತೋಷವನ್ನು ಪಡೆಯುತ್ತಾರೆ. ಈ ಜನರು ಸ್ವಭಾವತಃ ಕರುಣಾಮಯಿ, ಆದರೆ ಇವರು ಅನೇಕ ವಿಷಯಗಳಲ್ಲಿ ಹಠಮಾರಿಗಳಾಗಿರುತ್ತಾರೆ.

3 /12

3. ಮಾರ್ಚ್ (MARCH) - ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾರ್ಚ್ ತಿಂಗಳಲ್ಲಿ ಜನಿಸಿದವರು ತುಂಬಾ ತೀಕ್ಷ್ಣವಾದ ಮನಸ್ಸು ಹೊಂದಿರುತ್ತಾರೆ. ಆದರೆ ಈ ಜನರು ತಮ್ಮ ಸಂಬಂಧಗಳ ಬಗ್ಗೆ ಬಹಳ ಜಾಗೃತರಾಗಿರುತ್ತಾರೆ. ಯಾರಾದರೂ ಇವರಿಗೆ ಮೋಸ ಮಾಡಿದರೆ, ಇವರು ಎಂದಿಗೂ ಕ್ಷಮಿಸುವುದಿಲ್ಲ. ಅಲ್ಲದೆ, ಈ ಜನರು ತಮ್ಮ ಸಂಗಾತಿಗೆ ಎಂದಿಗೂ ಮೋಸ ಮಾಡುವುದಿಲ್ಲ.  

4 /12

4. ಏಪ್ರಿಲ್ (APRIL) - ಏಪ್ರಿಲ್ ತಿಂಗಳಲ್ಲಿ ಹುಟ್ಟಿದವರು ಶ್ರಮಜೀವಿಗಳು. ಇವರು ತಮ್ಮ ಕಠಿಣ ಪರಿಶ್ರಮದ ಆಧಾರದ ಮೇಲೆ ಯಶಸ್ಸನ್ನು ಸಾಧಿಸುತ್ತಾರೆ. ಇವರು ಸಂತೋಷದ ಸ್ವಭಾವದವರು. ಇದೇ ವೇಳೆ, ಇವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಇವರನ್ನು ತುಂಬಾ ಪ್ರೀತಿಸುತ್ತಾರೆ. ಈ ಜನರು ರೋಮ್ಯಾಂಟಿಕ್. ಇದರೊಂದಿಗೆ, ಈ ಜನರು ಕಲೆ-ಪ್ರೀತಿಯ ಮತ್ತು ಸೃಜನಶೀಲ ಸ್ವಭಾವದವರು.

5 /12

5. ಮೇ (MAY) - ಮೇ ತಿಂಗಳಲ್ಲಿ ಜನಿಸಿದವರು ಹೆಚ್ಚಿನ ಉತ್ಸಾಹವನ್ನು ಹೊಂದಿರುತ್ತಾರೆ. ಯಾರ ಒತ್ತಡಕ್ಕೂ ಮಣಿದು ಕೆಲಸ ಮಾಡಲು ಇಷ್ಟಪಡುವುದಿಲ್ಲ. ಇವರ ಈ ಗುಣವು ಅವರನ್ನು ವೃತ್ತಿಪರ ಕ್ಷೇತ್ರದಲ್ಲಿ ನಾಯಕನನ್ನಾಗಿ ಮಾಡುತ್ತದೆ. ಆದಾಗ್ಯೂ, ಇಂತಹ ಜನರು ಬೇಗನೆ ಕೋಪಗೊಳ್ಳುತ್ತಾರೆ. ಅಲ್ಲದೆ, ಇವರು ಕಟುಹೃದಯಿಗಳಾಗಿರುತ್ತಾರೆ

6 /12

6. ಜೂನ್ (JUNE) - ಜೂನ್ ತಿಂಗಳಲ್ಲಿ ಜನಿಸಿದವರು ಹಣದ ವಿಷಯದಲ್ಲಿ ತುಂಬಾ ಅದೃಷ್ಟವಂತರು. ಈ ಜನರು ಕಡಿಮೆ ಕೆಲಸ ಮಾಡುವ ಮೂಲಕ ಸಾಕಷ್ಟು ಹಣವನ್ನು ಗಳಿಸುತ್ತಾರೆ. ಈ ತಿಂಗಳಲ್ಲಿ ಜನಿಸಿದ ಜನರು ಆತ್ಮವಿಶ್ವಾಸದಿಂದ ತುಂಬಿರುತ್ತಾರೆ ಮತ್ತು ಅದೃಷ್ಟವು ಇವರಿಗೆ ಎಲ್ಲಾ ಸಮಯದಲ್ಲೂ ಸಾಥ್ ನೀಡುತ್ತದೆ ಎಂದು ನಂಬಲಾಗಿದೆ. 

7 /12

7. ಜುಲೈ (JULY) - ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜುಲೈ ತಿಂಗಳಲ್ಲಿ ಜನಿಸಿದವರು ಶಾಂತ ಸ್ವಭಾವದವರು. ಈ ಜನರು ತೀಕ್ಷ್ಣವಾದ ಮನಸ್ಸು ಹೊಂದಿದ್ದಾರೆ. ಎಲ್ಲೇ ಹೋದರೂ ಅಲ್ಲಿ ತಮ್ಮದೇ ಆದ ಐಡೆಂಟಿಟಿ ಮಾಡಿಕೊಳ್ಳುತ್ತಾರೆ. ಈ ತಿಂಗಳಲ್ಲಿ ಹುಟ್ಟಿದವರು ತಮ್ಮ ಸುತ್ತಲಿನ ಜನರನ್ನು ಬಹುಬೇಗ ಆಕರ್ಷಿಸುವ ಗುಣ ಹೊಂದಿರುತ್ತಾರೆ.

8 /12

8. ಆಗಸ್ಟ್ (AUGUST) - ಆಗಸ್ಟ್ ತಿಂಗಳಲ್ಲಿ ಜನಿಸಿದವರು ತುಂಬಾ ಸೃಜನಶೀಲರು. ಇವರಲ್ಲಿ ಸಾಕಷ್ಟು ಪ್ರತಿಭೆ ಇರುತ್ತದೆ. ಕಲೆ, ಸಾಹಿತ್ಯ ಮತ್ತು ವಿವಿಧ ಸೃಜನಶೀಲ ಪ್ರಕಾರಗಳಲ್ಲಿ ಇವರು ತಮ್ಮದೇ ಆದ ಗುರುತನ್ನು ಮೂಡಿಸುತ್ತಾರೆ. ಈ ಜನರು ತಮ್ಮ ಸ್ವಂತ ಇಚ್ಛೆಯ ಯಜಮಾನರು.

9 /12

9. ಸೆಪ್ಟೆಂಬರ್ (SEPTEMBER) - ಸೆಪ್ಟೆಂಬರ್ ತಿಂಗಳಲ್ಲಿ ಜನಿಸಿದವರು ಅದೃಷ್ಟದಲ್ಲಿ ಶ್ರೀಮಂತರು. ಈ ತಿಂಗಳಲ್ಲಿ ಜನಿಸಿದವರು ತಮ್ಮ ಅದೃಷ್ಟದಿಂದ ಉನ್ನತ ಸ್ಥಾನವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಉದ್ಯೋಗವಾಗಲಿ, ವ್ಯಾಪಾರವಾಗಲಿ ಸಾಕಷ್ಟು ಪ್ರಗತಿ ಸಾಧಿಸಿ ಸದಾ ಮುಂದೆ ಸಾಗುತ್ತಿರುತ್ತಾರೆ. ಈ ಜನರು ಹರ್ಷಚಿತ್ತದಿಂದ ಕೂಡಿರುತ್ತಾರೆ ಮತ್ತು ಕೋಪದ ಸ್ವಭಾವವನ್ನು ಹೊಂದಿರುತ್ತಾರೆ. ಈ ಜನರು ಪ್ರೀತಿಯ ವಿಷಯದಲ್ಲಿ ತುಂಬಾ ನಿಷ್ಠಾವಂತರಾಗಿರುತ್ತಾರೆ.

10 /12

10.ಅಕ್ಟೋಬರ್ (OCTOBER) - ಅಕ್ಟೋಬರ್‌ನಲ್ಲಿ ಜನಿಸಿದವರು ತಿಳುವಳಿಕೆಯುಳ್ಳವರು ಮತ್ತು ಬುದ್ಧಿವಂತರು. ಇವರು ಸಾಮಾನ್ಯವಾಗಿ ಬರವಣಿಗೆ, ಫ್ಯಾಷನ್ ಡಿಸೈನಿಂಗ್ ಅಥವಾ ಕಲೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ಮುಂದುವರಿಸುತ್ತಾರೆ. ಈ ಜನರು ಶಿಸ್ತುಬದ್ಧ ಜೀವನ ನಡೆಸಲು ಇಷ್ಟಪಡುತ್ತಾರೆ. ಇವರು ಪರಿಪೂರ್ಣ ಜೀವನ ಸಂಗಾತಿ ಎಂದು ಸಾಬೀತುಪಡಿಸುತ್ತಾರೆ. ಇವರು ಪ್ರೀತಿಯನ್ನು ಮಾಡಿದಾಗ, ಇವರು ತಮ್ಮ ಸಂಗಾತಿಗೆ ಎಲ್ಲವನ್ನೂ ನೀಡುತ್ತಾರೆ.

11 /12

11. ನವೆಂಬರ್ (NOVEMBER) - ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವೆಂಬರ್ ತಿಂಗಳಲ್ಲಿ ಜನಿಸಿದವರು ಇತರರಲ್ಲಿ ಬಹಳ ಬೇಗನೆ ಜನಪ್ರಿಯರಾಗುತ್ತಾರೆ. ಇವರ ವ್ಯಕ್ತಿತ್ವ ಹೇಗಿರುತ್ತದೆ ಎಂದರೆ ಇವರಿಂದ ಯಾರೂ ದೂರವಿರಲು ಸಾಧ್ಯವಿಲ್ಲ. ಇವರು ಶ್ರಮಜೀವಿಗಳು. ಶಾರ್ಟ್‌ಕಟ್‌ಗಳನ್ನು ತೆಗೆದುಕೊಳ್ಳಲು ಇವರು ಇಷ್ಟಪಡುವುದಿಲ್ಲ.

12 /12

12. ಡಿಸೆಂಬರ್ (DECEMBER) - ಡಿಸೆಂಬರ್ ತಿಂಗಳಲ್ಲಿ ಜನಿಸಿದ ಜನರು ವಸ್ತುಗಳ ಆಧ್ಯಾತ್ಮಿಕ ಪ್ರಾಮುಖ್ಯತೆಯನ್ನು ಗುರುತಿಸುತ್ತಾರೆ. ಈ ಜನರು ತಮ್ಮ ಸ್ವಾತಂತ್ರ್ಯವನ್ನು ತುಂಬಾ ಪ್ರೀತಿಸುತ್ತಾರೆ. ಇವರು ಯಾವುದೇ ರೀತಿಯಲ್ಲಿ ಕಟ್ಟಳೆಗಳನ್ನು ಇಷ್ಟಪಡುವುದಿಲ್ಲ. ಇವರು ಅತ್ಯಂತ ಒಗ್ಗಟ್ಟಿನಿಂದ ಬಾಳಲು ಇಷ್ಟಪಡುತ್ತಾರೆ. ಈ ಜನರು ಪ್ರೀತಿಯ ವಿಷಯಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ.